- May 7, 2022
ಹೆಚ್ಚು ಫಾಲೋವರ್ಸ್ ಪಡೆದ ಸಂತಸದಲ್ಲಿ ಅನು ಸಿರಿಮನೆ


ಜೊತೆ ಜೊತೆಯಲಿ ಧಾರಾವಾಹಿಯ ಅನು ಸಿರಿಮನೆ ಖ್ಯಾತಿಯ ನಟಿ ಮೇಘಾ ಶೆಟ್ಟಿ ಈಗ ಖುಷಿಯಲ್ಲಿದ್ದಾರೆ. ಹೌದು, ಕಿರುತೆರೆಯ ಜನಪ್ರಿಯ ನಟಿಯರಾದ ವೈಷ್ಣವಿ ಗೌಡ, ದೀಪಿಕಾ ದಾಸ್, ಅನುಶ್ರೀ ಅವರ ನಂತರ ಇನ್ಸ್ಟಾ ಗ್ರಾಂನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವವರ ಸಾಲಿಗೆ ಸೇರ್ಪಡೆಯಾಗಿದ್ದಾರೆ ಮೇಘಾ ಶೆಟ್ಟಿ.




ಕಿರುತೆರೆಯಲ್ಲಿ ಹೊಸಬರಾಗಿರುವ ಮೇಘಾ ಕಡಿಮೆ ಅವಧಿಯಲ್ಲಿಯೇ ಮಿಲಿಯನ್ ಫಾಲೋವರ್ಸ್ ಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಮೇಘಾ ಅವರ ಈ ಸಾಧನೆಗೆ ಸಹನಟರು, ಸ್ನೇಹಿತರು, ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಈ ಮೂಲಕ ಮೇಘಾ ಒಂದು ಮಿಲಿಯನ್ ಹೊಂದಿರುವ ಕನ್ನಡ ಕಿರುತೆರೆ ನಟಿಯರ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.






ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಹಿರಿತೆರೆಗೆ ಹಾರಿರುವ ಮೇಘಾ ಶೆಟ್ಟಿ ದಿಲ್ ಪಸಂದ್, ಲವ್ 360 ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಧನ್ವೀರ್ ನಟನೆಯ ಕೈವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡಿರುವ ಮೇಘಾ ಕಿರುತೆರೆಗೆ ಜೊತೆಗೆ ಹಿರಿತೆರೆಯಲ್ಲಿಯೂ ಬ್ಯುಸಿ.




ನಟನೆಯ ಮೂಲಕ ಮೋಡಿ ಮಾಡುತ್ತಿರುವ ಮೇಘಾ ಶೆಟ್ಟಿ ನಿರ್ಮಾಪಕಿಯಾಗಿಯೂ ಭಡ್ತಿ ಪಡೆದಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಕೆಂಡಸಂಪಿಗೆ ಗೆ ಇವರು ಬಂಡವಾಳ ಹಾಕುತ್ತಿದ್ದಾರೆ.






