• January 29, 2022

ಟಾಲಿವುಡ್ ಮಂದಿಯ ಮುಂದೆ ನಡೆಯಲಿದೆ ಅಪ್ಪು ಅಭಿಮಾನಿಗಳ ಶೌರ್ಯ ಪ್ರದರ್ಶನ

ಟಾಲಿವುಡ್ ಮಂದಿಯ ಮುಂದೆ ನಡೆಯಲಿದೆ ಅಪ್ಪು ಅಭಿಮಾನಿಗಳ ಶೌರ್ಯ ಪ್ರದರ್ಶನ

ಅಪ್ಪು …ಪುನೀತ್ ರಾಜಕುಮಾರ್… ಕರುನಾಡಿನ ರತ್ನ ಅಭಿಮಾನಿಗಳ ಪ್ರೀತಿಯ ರಾಜಕುಮಾರ …ಪುನೀತ್ ಆಗಲಿ ಸಾಕಷ್ಟು ತಿಂಗಳುಗಳು ಕಳೆದಿವೆ ಆದರೆ ಅಭಿಮಾನಿಗಳ ಹೃದಯದಲ್ಲಿ ಮಾತ್ರ ಅವ್ರು ಶಾಶ್ವತವಾಗಿ ಉಳಿದುಕೊಂಡಿದ್ದಾರೆ ..

ಸದ್ಯ ಪುನೀತ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ತೆರೆಗೆ ಬರಲು ಸಿದ್ಧವಾಗಿದೆ… ಈ ಸಿನಿಮಾವನ್ನ ರಿಲೀಸ್ ಮಾಡಲು ಚಿತ್ರತಂಡ ಸಿದ್ಧವಾಗಿದೆ… ಮಾರ್ಚ್ 17ರಂದು ಸಿನಿಮಾವನ್ನ ರಿಲೀಸ್ ಮಾಡಲುಈಗಾಗಲೇ ಸಿದ್ದತೆ ಆಗಿದ್ದು ಚಿತ್ರತಂಡ ಪ್ರಚಾರ ಕಾರ್ಯವನ್ನು ಇನ್ನು ಕೆಲವೇ ದಿನಗಳಲ್ಲಿ ಶುರು ಮಾಡಿಕೊಳ್ಳಲಿದೆ ..

ವಿಪರ್ಯಾಸ ಎಂದರೆ ಪುನೀತ್ ರಾಜ್ ಕುಮರ್ ಜೇಮ್ಸ್ ರಿಲೀಸ್ ದಿನದ ಮಾರನೇ ದಿನ‌‌ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ತ್ರಿಬ್ಬಲ್ ಆರ್ ರಿಲೀಸ್ ಆಗಲಿದೆ ..ಹೌದು ಆರ್ ಆರ್ ಆರ್ ಸಿನಿಮಾ ಮಾರ್ಚ್ 18 ರಂದು ಬಿಡುಗಡೆಯಾಗಲಿದೆ

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಅನ್ಯಭಾಷಾ ಸಿನಿಮಾಗಳು ರಾಜ್ಯದಲ್ಲಿ ಹೆಚ್ಚಿನ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ…ಅದಷ್ಟೆ ಅಲ್ಲದೆ ಬೆಂಗಳೂರಿನಲ್ಲಿ ತೆಲುಗು. ತಮಿಳು ಚಿತ್ರಗಳಿಗೆ ಥಿಯೇಟರ್ ಗಳ ಕೊರತೆ ಕಾಣುವುದೇ ಇಲ್ಲ…ಈಗ ತ್ರಿಪಲ್ ಆರ್ ಹಾಗೂ ಜೇಮ್ಸ್ ಸಿನಿಮಾ 1ದಿನಗಳ ಅಂತರದಲ್ಲಿ ಬಿಡುಗಡೆಯಾಗಲಿದ್ದು ಅಪ್ಪು ಅಭಿಮಾನಿಗಳು ಜೇಮ್ಸ್ ಸಿನಿಮಾವನ್ನ ಆರ್ ಆರ್ ಆರ್ ಚಿತ್ರದ ಎದುರು ಹೇಗೆ ಎತ್ತಿ ಮೆರೆಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ….

ಜೇಮ್ಸ್ ಸಿನಿಮಾವನ್ನ ಚೇತನ್ ನಿರ್ದೇಶನ ಮಾಡಿದ್ದು ವಿಜಯ್ ಕುಂಡ ನಿರ್ಮಾಣ ಮಾಡಿದ್ದಾರೆ… ಚಿತ್ರದಲ್ಲಿ ಪ್ರಿಯಾ ಆನಂದ್, ಪುನೀತ್ ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ ..ಇನ್ನು ತ್ರಿಬಲ್ ಆರ್ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗಲಿದ್ದು ತಮಿಳು, ತೆಲುಗು,ಹಿಂದಿ, ಮಲಯಾಳಂ ಹಾಗೂ ಕನ್ನಡದಲ್ಲಿಯೂ ತೆರೆಗೆ ಬರಲಿದೆ…ಚಿತ್ರದಲ್ಲಿ ಜೂನಿಯರ್ ಎನ್ ಟಿಆರ್,ರಾಮ್ ಚರಣ್ ಅಲಿಯಾ ಭಟ್ ಅಜಯ್ ದೇವ್ಗನ್ ಹೀಗೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿ ಇದೆ