• February 19, 2022

ಜಗ್ಗೇಶ್ ನವರಸ ನಾಯಕನಾಗಿದ್ದು ಹೇಗೆ ಗೊತ್ತಾ?

ಜಗ್ಗೇಶ್ ನವರಸ ನಾಯಕನಾಗಿದ್ದು ಹೇಗೆ ಗೊತ್ತಾ?

ಕನ್ನಡ ಸಿನಿಮಾರಂಗದಲ್ಲಿ‌ಹಾಸ್ಯ ಎಂದರೆ ಮೊದಲಿಗೆ ನೆನಪಾಗೋದು ಜಗ್ಗೇಶ್…ಲಕ್ಷಾಂತರ ಅಭಿಮಾನಿಗಳನ್ನ ಹೊಂದಿರೋ ಜಗ್ಗೇಶ್ ಅವತಿಗೆ ನವರಸನಾಯಕ ಎಂಬ ಪಟ್ಟ ಬಂದಿದ್ದು ಯಾವಾಗ..ಹೇಗೆ ಬಂತು ಅನ್ನೋ ಸೀಕ್ರೆಟ್ ಅನ್ಮು ಅವ್ರೇ ರಿವಿಲ್ ಮಾಡಿದ್ದಾರೆ….

ಬಹಳ ವರ್ಷದ ನಂತರ ನಾನು ಮಂತ್ರಾಲಯದಲ್ಲಿ ಉಳಿಯುತ್ತಿದ್ದ #ಹುಬ್ಬಳ್ಳಿಧರ್ಮಛತ್ರಕ್ಕೆ ಬೇಟಿಕೋಟ್ಟೆ.!
1980/81ರಲ್ಲಿ ಸಿನಿಮರಂಗದಲ್ಲಿ ನನಗೆ ಅವಕಾಶ ಸಿಗುತ್ತಿರಲಿಲ್ಲಾ…ಒಂದುದಿನ ಛಾಯಾಗ್ರಹಕ ಹಾಗು ಗುರುಗಳು ಸುಂದರನಾಥ ಸುವರ್ಣ ಅಂಬರೀಶರವರ ಚಿತ್ರ #ಗಜೇಂದ್ರ
ಅವಕಾಶಕ್ಕಾಗಿ ಸಹನಿರ್ದೇಶಕ ಡಿ.ಬಾಬು ರವರಿಗೆ ಕೇಳಿಕೊಂಡರು ಆದರೆ ನನ್ನ ದೌರ್ಭಾಗ್ಯ ಅವಕಾಶ ಸಿಗಲಿಲ್ಲಾ..ನೊಂದು ನಡೆದು ಬರುವಾಗ ಕೆಂಚಾಂಭ ಲಾಡ್ಜ್ ಬಳಿ ಒಬ್ಬ ಜೋತಿಷಿ ಕಂಡು ಕೇಳಿದಾಗ ನಿನಗೆ ಈ ಪ್ರಪಂಚದಲ್ಲಿ ಸಹಾಯಮಾಡೋದು ಒಬ್ಬರೆ ಅದು ರಾಯರು ಎಂದರು..ಮನೆಗೆ ಬಂದಾಗ ಅಮ್ಮ ತೊಳಸಿಕಟ್ಟೆ ಬಳಿ ಕೂತಿದ್ದವಳು ನನ್ನ ಕಂಡು ಲೇ ಮಗನೆ ನಿನಗೆ ಒಳ್ಳೆಯು ಆಗಬೇಕು ಎಂದರೆ ರಾಯರ ಬಳಿ ಹೋಗು ಎಂದು ತನ್ನ ಎಲೆಅಡಿಕೆ ಕಡ್ಡಿಪುಡಿಗಾಗಿ ಕೂಡಿಟ್ಟ ಹಣ 500ರೂ ನನಗೆ ಕೊಟ್ಟಳು ಆಶ್ಚರ್ಯವಾಯಿತು.
ಮರುಚಿಂತಿಸದೆ ಮಂತ್ರಾಲಯಕ್ಕೆ ಹೊರಟು ಇರಲು ಈ ಜಾಗ ಆಯ್ಕೆ ಮಾಡಿಕೊಂಡೆ..ಆಗ ದಿನಕ್ಕೆ 25ಪೈ

3ತಿಂಗಳು ಇಲ್ಲಿ ಉಳಿದು ರಾಯರ ಸೇವೆ ಮಾಡಿ ಮನೆಗೆ ಬಂದ ತಕ್ಷಣ kv.ಜಯರಾಮ್ ರವರ #ಶ್ವೇತಗುಲಾಭಿ ಚಿತ್ರದಲ್ಲಿ ಮುಖ್ಯ ಖಳನಟ ಅವಕಾಶ ಸಿಕ್ಕಿತು ಅಲ್ಲಿಂದ ನನ್ನ ಬದುಕಲ್ಲಿ ನಂಬಲಾಗದ ರಾಯರ ಪವಾಡ ನಡೆದು ಸಾಮಾನ್ಯ ಹಳ್ಳಿಹುಡುಗ ನವರಸನಾಯಕನಾದೆ
ಮುಂದೆ ನಾನು ಪರಿಮಳನ ಮದುವೆಯಾಗಿ ಅವಳನ್ನು ಕರೆತಂದು ಇಲ್ಲಿ 1ತಿಂಗಳು ವಾಸಮಾಡಿದೆ..

ಇದೆ ಜಾಗದಲ್ಲಿ ಒಬ್ಬ ಸಂತ ಸಿಕ್ಕು ಪರಿಮಳನಿಗೆ ನಿನ್ನ ಗಂಡ ಮುಂದೆ ಬಹಳ ದೊಡ್ಡ ಸಾಧಕನಾಗುತ್ತಾನೆ ಎಂದಾಗ ಜೋರಾಗಿ ನಕ್ಕುಬಿಟ್ಟಳು ಅಂದು…ಇಂದು ಅದ ನೆನದರೆ ಹೇಗಪ್ಪ ಇದೆಲ್ಲಾ ಎನ್ನುತ್ತಾಳೆ…
ರಾಯರ ಕಾರುಣ್ಯ ಹಾಗೆ ರಾಯರನ್ನು ಅನನ್ಯವಾಗಿ ನಂಬಿ ಕಾಯವಾಚಮನ ಶುದ್ಧಾತ್ಮನಾಗಿ ಉಳಿದರೆ ಬೇಡಿದ್ದು ನೀಡೋ ಕಾಮಧೇನು…
ಕೊರೋನ ಸಂಕಷ್ಟ ಬಂದಾಗಿನಿಂದ ಸಂಕಲ್ಪ ಸೇವೆ ಮಾಡಲು ಆಗಲಿಲ್ಲಾ…
2.5ವರ್ಷದ ಮೇಲೆ ಮತ್ತೆ ಬಂದು ಮಂತ್ರಾಲಯ ನೆಲದಲ್ಲಿ ರಾಯರ ಸೇವೆ ಮಾಡುತ್ತಿರುವೆ…
ನಿಮ್ಮ ಜೊತೆ ಹಂಚಿಕೊಳ್ಳುವ ಬೇಕು ಎಂದು ಮನಸಾಯಿತು ಲಗತ್ತಿಸಿಬಿಟ್ಟೆ ನನ್ನ ಭಾವನೆ…ಎಂದು ಸಾಮಾಜಿಕ ಜಾಲತಾಣದ ಮೂಲಕ ನವರಸ ನಾಯಕನಾಗಿದ್ದು ಹೇಗೆ ಎಂಬುದನ್ನ ಹಂಚಿಕೊಂಡಿದ್ದಾರೆ ನಟ ಜಗ್ಗೇಶ್…