• May 18, 2022

ಡ್ಯಾನ್ಸಿಂಗ್ ಚಾಂಪಿಯನ್ ಆಗಲಿದ್ದಾರಾ ಇಶಿತಾ

ಡ್ಯಾನ್ಸಿಂಗ್ ಚಾಂಪಿಯನ್ ಆಗಲಿದ್ದಾರಾ ಇಶಿತಾ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಶೋನ ಕ್ವಾರ್ಟರ್ ಫೈನಲ್ ನಲ್ಲಿ ಸ್ಪರ್ಧಿಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಉತ್ತಮ ಪ್ರದರ್ಶನಗಳಿದ್ದರೂ ಈ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ.

ನಟಿ ಇಶಿತಾ ವರ್ಷ ಹಾಗೂ ಸಹ ಸ್ಪರ್ಧಿ ಶಿವ ಈ ವಾರ ಶೋನಿಂದ ಎಲಿಮಿನೇಷನ್ ಆದ ಸ್ಪರ್ಧಿಗಳಾಗಿದ್ದಾರೆ. ನಟಿ ಅನ್ವಿತಾ ಸಾಗರ್ ಡೇಂಜರ್ ಜೋನ್ ನಲ್ಲಿದ್ದಾರೆ. ಈ ಇಬ್ಬರ ಒಟ್ಟಾರೆ ನೃತ್ಯ ಪ್ರದರ್ಶನವನ್ನು ಪರಿಗಣಿಸಿದ ತೀರ್ಪುಗಾರರು ಇಶಿತಾ ಅವರನ್ನು ಎಲಿಮಿನೇಷನ್ ಮಾಡಿದ್ದಾರೆ.

ಎಲಿಮಿನೇಷನ್ ಪ್ರಕ್ರಿಯೆಯಿಂದ ಇಶಿತಾ ಕೊಂಚ ಬೇಸರಗೊಂಡಿದ್ದಾರೆ. ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋ ನ್ನು ಶಾಲೆ ಎಂದು ಕರೆದಿರುವ ಇಶಿತಾ ಇಲ್ಲಿ ತುಂಬಾ ಕಲಿತಿದ್ದಾರೆ. ಈ ಶೋನ ಪಯಣದಲ್ಲಿ ಅನೇಕ ಉತ್ತಮ ಸ್ನೇಹಿತರು ಅವರಿಗೆ ದೊರಕಿದ್ದಾರೆ. ತಪ್ಪುಗಳನ್ನು ತಿದ್ದಿಕೊಳ್ಳಲು ಸಹಾಯ ಮಾಡಿರುವ ತೀರ್ಪುಗಾರರಿಗೆ ಧನ್ಯವಾದ ತಿಳಿಸಿದ್ದಾರೆ.ಬತನ್ನ ಡ್ಯಾನ್ಸ್ ಪಾರ್ಟ್ನರ್ ಶಿವ ಅವರಿಗೆ ಮುಂದಿನ ಪಯಣಕ್ಕೆ ಶುಭ ಹಾರೈಸಿದ್ದಾರೆ. ಈ ಪಯಣದಲ್ಲಿ ಇಷ್ಟು ಕಾಲ ಜೊತೆಯಾಗಿ ನಿಂತದ್ದಕ್ಕೆ ಧನ್ಯವಾದ ಹೇಳಿದ್ದಾರೆ ‌
ಇನ್ನು ಇಶಿತಾ ಅವರ ಡ್ಯಾನ್ಸ್ ಪಾರ್ಟ್ನರ್ ಶಿವ ಈ ಶೋನಲ್ಲಿ ಭಾಗವಾಗಿರಲು ಅವಕಾಶ ನೀಡಿರುವುದಕ್ಕೆ ಶೋನ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.