- June 21, 2023
ರಶ್ಮಿಕಾ ಮಂದಣ್ಣ ಅವರ ಮ್ಯಾನೇಜರ್ ಆಕೆಗೆ 80 ಲಕ್ಷ ರೂಪಾಯಿ ಮೋಸ ಮಾಡಿಲ್ಲ; ನಮಗೆ ತಿಳಿದಿರುವುದು ಇಲ್ಲಿದೆ!


ರಶ್ಮಿಕಾ ಮಂದಣ್ಣನ ಹಣಕಾಸು ವ್ಯವಹಾರಗಳನ್ನ ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಹೇಳದೆ ಕೇಳದೆ 80 ಲಕ್ಷ ರೂಪಾಯಿಯೊಂದಿಗೆ ಪರಾರಿಯಾಗಿದ್ದಾನೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹಬ್ಬಿತ್ತು, ಅಷ್ಟೆ ಅಲ್ಲದೆ ಮ್ಯಾನೇಜರ್ ವಿರುದ್ಧವಾಗಿ ನಟಿ ಪೊಲೀಸ್ ಇಲಾಖೆಗೆ ಕಂಪ್ಲೆಂಟ್ ಕೊಟ್ಟಿದ್ದಾರೆ, ಅವನನ್ನ ಕೆಲಸದಿಂದ ವಜಾ ಮಾಡಿದ್ದಾರೆ,ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಸುಳ್ಳು ಸುದ್ಧಿಗೆ ರಶ್ಮಿಕಾ ಮಂದಣ್ಣ ತೆರೆ ಎಳೆದಿದ್ದಾರೆ.


ವಂಚನೆಗೆ ಸಂಬಂಧಿಸಿದ ವರದಿಗಳು ಹೀಗಿವೆ:
ಈ ಸುದ್ದಿ ಸಂಪೂರ್ಣ ಸುಳ್ಳು ನಟಿಯ ವ್ಯವಹಾರ ನೀಡಿಕೊಳ್ಳುತ್ತಿದ್ದ ಮ್ಯಾನೇಜರ್ ತಮ್ಮದೇ ಕೆಲ ಕಾರಣಗಳಿಂದ ದೂರವಾಗಿದ್ದಾರೆ ಬಿಟ್ಟರೆ ಯಾವುದೇ ರೀತಿಯ ಹಣದೊಂದಿಗೆ ಅವರು ಎಸ್ಕೇಪ್ ಆಗಿಲ್ಲ ಅಂತಾ ರಶ್ಮೀಕಾ ಮಂದಣ್ಣ ಸ್ಪಷ್ಟನೆ ನೀಡಿದ್ದಾರಂತೆ.


ಕೆಲವರು ಇದನ್ನ ತಪ್ಪು ಗ್ರಹಿಕೆ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ಧಿಯನ್ನ ಹಬ್ಬಿಸುತ್ತಿದ್ದಾರೆ ಅಂತಾ ನಟಿ ಬೇಸರ ಪಡಿಸಿದ್ದಾರೆ.
ಸದ್ಯಕ್ಕೆ ಮಾಸ್ ಎಂಟರ್ ಟ್ಟೈನರ್ ಪುಷ್ಪಾ-2 ಸಿನಿಮಾದಲ್ಲಿ ಬಿಜಿಯಾಗಿದ್ದು ಇನ್ನೇನು ಕೆಲವೆ ಕೆಲವು ತಿಂಗಳುಗಳಲ್ಲಿ ಸಿನಿಮಾ ತೆರೆಗೆ ಬರಲಿದ್ದು ನಟಿಯ ನಟನೆಯನ್ನ ಮತ್ತೊಮ್ಮೆ ಕಾಣಬಹುದಾಗಿದೆ. ಅಷ್ಟೆ ಅಲ್ಲದೆ ಇನ್ನು ಹತ್ತಾರು ಸಿನಿಮಾಗಳು ಇವರ ಕಯ್ಯಲ್ಲಿ ಇದೆ.
ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್


