• June 22, 2022

ಕಿರುತೆರೆಯಿಂದ ಹಿರಿತೆರೆಗೆ ಎಡವಟ್ ರಾಣಿ ಪಯಣ

ಕಿರುತೆರೆಯಿಂದ ಹಿರಿತೆರೆಗೆ ಎಡವಟ್ ರಾಣಿ ಪಯಣ

ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ರಾಧಿಕಾ ಪಂಡಿತ್, ಅದಿತಿ ಪ್ರಭುದೇವ, ರಚಿತಾ ರಾಮ್, ಮೇಘಾ ಶೆಟ್ಟಿ ಇವರೆಲ್ಲಾ ಕಿರುತೆರೆಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿ ಇಂದು ಹಿರಿತೆರೆಯಲ್ಲಿಯೂ ಮೋಡಿ ಮಾಡುತ್ತಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರಿದ್ದಾರೆ ಎಡವಟ್ ರಾಣಿ. ಮೊದಲ ಬಾರಿಗೆ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಎಡವಟ್ ರಾಣಿ ಇದೀಗ ಸಿನಿಮಾದಲ್ಲಿ ನಾಯಕನ ಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಎಡವಟ್ ರಾಣಿ ಆಲಿಯಾಸ್ ಲೀಲಾ ಆಗಿ ಅಭಿನಯಿಸುತ್ತಿರುವ ಮಲೈಕಾ ಟಿ ವಸುಪಾಲ್ ಮನೋಜ್ಞ ನಟನೆಯ ಮೂಲಕ ಕಿರುತೆರೆ ಜಗತ್ತಿನಲ್ಲಿ ಹೊಸ ಹವಾ ಸೃಷ್ಟಿ ಮಾಡಿದ ಚೆಲುವೆ. ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಪ್ರಾಮಿಸಿಂಗ್ ಫೇಸ್ ಪ್ರಶಸ್ತಿ ಪಡೆದಿರುವ ಮಲೈಕಾ ವಸುಪಾಲ್ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ.

ಹಾಸ್ಯನಟ ಚಿಕ್ಕಣ್ಣ ಮೊದಲ ಬಾರಿಗೆ ನಾಯಕ ನಟರಾಗಿ ನಟಿಸುತ್ತಿರುವ ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿರುವ ಮಲೈಕಾ ವಸುಪಾಲ್ ಪಾತ್ರದ ಬಗ್ಗೆ ಸಿನಿಮಾ ತಂಡ ಯಾವುದೇ ಮಾಹಿತಿ ಬಹಿರಂಗಗೊಳಿಸಿಲ್ಲ. ಒಟ್ಟಿನಲ್ಲಿ ಸುವರ್ಣಾವಕಾಶ ಪಡೆದಿರುವ ಮಲೈಕಾ ಕಿರುತೆರೆ ಜೊತೆಗೆ ಹಿರಿತೆರೆಯನ್ನು ಬ್ಯಾಲೆನ್ಸ್ ಮಾಡಿಕೊಂಡು ಸಾಗಲಿದ್ದಾರೆ.