• April 18, 2022

ಯಶ್ ಬಳಿ ಕಬ್ಬಿನಹಾಲು ಕೊಡಿಸುವ ಸಮಯ ಎಂದ ಕೃತಿ ಕರಬಂಧ..‌ ಯಾಕೆ ಗೊತ್ತಾ?

ಯಶ್ ಬಳಿ ಕಬ್ಬಿನಹಾಲು ಕೊಡಿಸುವ ಸಮಯ ಎಂದ ಕೃತಿ ಕರಬಂಧ..‌ ಯಾಕೆ ಗೊತ್ತಾ?

ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದಿರುವ ಕೆಜಿಎಫ್ 2 ಚಿತ್ರವನ್ನು ಇಡೀ ದೇಶವೇ ಹೊಗಳುತ್ತಿದೆ. ಎಲ್ಲಾ ಭಾಷೆಯ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶನದ ಯಶ್ ನಟನೆಯ ಈ ಚಿತ್ರ ವಿಶ್ವಾದ್ಯಂತ ಕಮಾಲ್ ಮಾಡುತ್ತಿದೆ. ಬಾಕ್ಸ್ ಆಫೀಸಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ.

ಚಿತ್ರವನ್ನು ಪರಭಾಷೆಯ ಸ್ಟಾರ್ ಗಳು ಕೂಡಾ ಹೊಗಳುತ್ತಿದ್ದಾರೆ. ನಟಿ ಕೃತಿ ಕರಬಂಧ ಕೂಡಾ ಅಭಿನಂದನೆ ಸಲ್ಲಿಸಿದ್ದಾರೆ. ಡಿಫರೆಂಟ್ ಆಗಿ ವಿಶ್ ಮಾಡಿರುವ ಕೃತಿ ಯಶ್ ಅವರೊಂದಿಗೆ ಗೂಗ್ಲಿ ಚಿತ್ರದಲ್ಲಿ ನಟಿಸಿದ್ದು ಈ ಸಮಯದಲ್ಲಿ ಆ ಚಿತ್ರದ ಒಂದು ದೃಶ್ಯವನ್ನು ನೆನಪಿಸಿಕೊಂಡಿದ್ದಾರೆ.

ಮೊದಲ ದಿನವೇ 134 ಕೋಟಿ ಗಳಿಸಿರುವ ಕೆಜಿಎಫ್ 2 ಚಿತ್ರ ಎರಡನೇ ದಿನ 240 ಕೋಟಿ ಗಳಿಸಿದೆ. ಬಾಕ್ಸ್ ಆಫೀಸಿನಲ್ಲಿ ಯಶಸ್ಸಿನ ಓಟವನ್ನು ಮುಂದುವರಿಸಿರುವ ಕೆಜಿಎಫ್ ತಂಡದ ಸಾಧನೆಗೆ ಕೃತಿ ಶುಭ ಕೋರಿದ್ದಾರೆ. “ಯಶ್ ಇದು ಕಬ್ಬಿನ ಹಾಲು ಕೊಡಿಸುವ ಸಮಯ. ಕೆಜಿಎಫ್ 2 ಸಿನಿಮಾದ ದೊಡ್ಡ ಗೆಲುವಿಗೆ ಅಭಿನಂದನೆಗಳು” ಎಂದು ಕೃತಿ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಯಶ್ ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದ್ದಾರೆ.

ಗೂಗ್ಲಿ ಸಿನಿಮಾದಲ್ಲಿ ನಾಯಕ ನಾಯಕಿ ಭೇಟಿಯಾದಾಗ ರಸ್ತೆ ಬದಿಯಲ್ಲಿ ಕಬ್ಬಿನ ಹಾಲು ಕುಡಿಯುವ ದೃಶ್ಯ ಇದೆ. ಕಬ್ಬಿನ ಹಾಲು ಕಾಫಿಗಿಂತ ಹೆಚ್ಚು ಹೀಟ್ ” ಎಂದು ಕೃತಿ ಹೇಳಿದಾಗ “ಇರಲಿ ಬಿಡಿ ಯುವಕರು ಯಾವಾಗಲೂ ಹೀಟ್ ಲ್ಲಿ ಇರಬೇಕು” ಎಂದು ಯಶ್ ಹೇಳುತ್ತಾರೆ. ಈ ಡೈಲಾಗ್ ವೈರಲ್ ಆಗಿತ್ತು. 2013ರಲ್ಲಿ ರಿಲೀಸ್ ಆದ ಗೂಗ್ಲಿ ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶನ ಮಾಡಿದ್ದರು.

ಪವನ್ ಒಡೆಯರ್ ಕೂಡಾ ಕೆಜಿಎಫ್ ಗೆಲುವಿಗೆ ಶುಭಾಶಯ ತಿಳಿಸಿದ್ದಾರೆ. ಕನ್ನಡದ ಹೆಮ್ಮೆಯ ಚಿತ್ರವಾಗಿ ಕೆಜಿಎಫ್ ಹೊರಹೊಮ್ಮಿದೆ.