• May 12, 2022

ಈಗಲೂ RRR ಚಿತ್ರಕ್ಕೆ ಕಾಯುತ್ತಿರುವವರಿಗೆ ಇದೀಗ ಸಂತಸದ ಸುದ್ದಿ.

ಈಗಲೂ RRR ಚಿತ್ರಕ್ಕೆ ಕಾಯುತ್ತಿರುವವರಿಗೆ ಇದೀಗ ಸಂತಸದ ಸುದ್ದಿ.

ಭಾರತ ಚಿತ್ರರಂಗದ ದಾಖಲೆಗಳ ಹಾಲೆಯಲ್ಲಿ ತನ್ನ ಹೆಸರನ್ನ ದೊಡ್ಡ ಅಕ್ಷರಗಳಲ್ಲಿ ಅಚ್ಚೋತ್ತಿಸಿಕೊಂಡಿರೋ ಸಿನಿಮಾ RRR. ಬಿಡುಗಡೆಯಾದಾಗಿನಿಂದ ಇಂದಿನವರೆಗೂ ಎಲ್ಲಿಯೂ ನಿಲ್ಲದೆ, ಹಿಂತಿರುಗಿ ನೋಡದೆ ಮುನ್ನುಗ್ಗುತ್ತಲೇ ಇದೆ. ಪ್ರಪಂಚಾದಾದ್ಯಂತದ ಚಿತ್ರಮಂದಿರಗಳಿಂದ ಸಾವಿರ ಕೋಟಿಯನ್ನ ಎಂದೋ ಬಾಚಿರುವ ಚಿತ್ರ, ಇದೀಗ ಎರಡು ಸಾವಿರದೆಡೆಗೆ ದಾಪುಗಾಲು ಹಾಕುತ್ತಿದೆ. ಈ ನಡುವೆ ಚಿತ್ರಮಂದಿರ ಮಾತ್ರವಲ್ಲದೆ ಬೇರೆಡೆಯೂ ಜನರನ್ನ ಸೆಳೆಯಲು ಹೊರಟಿದೆ RRR. ಅಂದರೆ, ಚಿತ್ರ ಇದೀಗ ಒಟಿಟಿ ರಿಲೀಸ್ ಗೆ ಸಜ್ಜಾಗಿದೆ.

ಭಾರತದ ಪಂಚಭಾಷೆಗಳಲ್ಲಿ ಬಿಡುಗಡೆ ಕಂಡಿರುವ RRR, ಎಲ್ಲಾ ಭಾಷೆಗಳಲ್ಲೂ ಸೂಪರ್ ಹಿಟ್ ಆದ ಚಿತ್ರ. ಒಟಿಟಿಯಲ್ಲೂ ಸಹ ಪಂಚಾಭಾಷೆಗಳಲ್ಲೇ ಬಿಡುಗಡೆಗೊಳ್ಳಲಿದೆ. ಇಲ್ಲಿ ವಿಶೇಷವೆಂದರೆ, RRR ಚಿತ್ರ ಏಕಕಾಲಕ್ಕೆ ಎರಡು ಒಟಿಟಿ ಗಳಲ್ಲಿ ಬಿಡುಗಡೆಗೊಳ್ಳಲಿದೆ. ಇದೆ ಮೇ ತಿಂಗಳ 20ನೇ ತಾರೀಕು ಜೀ5 (Zee5) ಹಾಗು ನೆಟ್ ಫ್ಲಿಕ್ಸ್(Netflix) ಗಳಲ್ಲಿ ತೆರೆಕಾಣಲಿದೆ ಈ ದೃಶ್ಯಕಾವ್ಯ. ಕನ್ನಡ, ತಮಿಳು, ತೆಲುಗು ಹಾಗು ಮಲಯಾಳಂ ಭಾಷೆಗಳಿಗೆ ಜೀ5 ಆದರೆ, ಹಿಂದಿ ಭಾಷೆಯಲ್ಲಿ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ಮೇ 20ರಂದು ಚಿತ್ರದ ಜೋಡಿ ನಾಯಕರಲ್ಲಿ ಒಬ್ಬರಾದ ಜೂನಿಯರ್ ಎನ್ ಟಿ ಆರ್ ಅವರ ಜನ್ಮದಿನವೂ ಹೌದು.

ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ದೃಶ್ಯಕಾವ್ಯದಲ್ಲಿ ಜೂನಿಯರ್ ಎನ್ ಟಿ ಆರ್ ಹಾಗು ರಾಮ್ ಚರಣ್ ಅವರು ನಾಯಕರಾದರೆ, ಆಲಿಯಾ ಭಟ್, ಅಜಯ್ ದೇವಗನ್, ಶ್ರೀಯ ಶರಣ್ ಮುಂತಾದ ದಿಗ್ಗಜ ಕಲಾವಿದರು ಬಣ್ಣ ಹಚ್ಚಿದ್ದಾರೆ. ಮಾರ್ಚ್ 25ರಂದು ಬಿಡುಗಡೆಗೊಂಡು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ನಂತರ ತನ್ನ ಒಟಿಟಿ ಆಗಮನದ ಬಗ್ಗೆ ಸುದ್ದಿ ನೀಡಿರುವ ಚಿತ್ರ, ಈಗಲೂ ಸಹ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಗಳನ್ನ ಕಾಣುತ್ತಿದೆ.