• March 1, 2022

ಅಮೂಲ್ಯ ಮನೆಯಲ್ಲಿ ಸಂಭ್ರಮದ ಕ್ಷಣಗಳು ಶುರು…

ಅಮೂಲ್ಯ ಮನೆಯಲ್ಲಿ ಸಂಭ್ರಮದ ಕ್ಷಣಗಳು ಶುರು…

ಅಮೂಲ್ಯ ವೈಯಕ್ತಿಕ ಜೀವನದಲ್ಲಿಯೂ ಅವರು ಅದೃಷ್ಟವಂತೆ ಎಂಬುದು ಮತ್ತೆ ಸಾಬೀತಾಗಿದೆ.2017 ರಲ್ಲಿ ಜಗದೀಶ್ ಎಂಬುವವರನ್ನು ಅಮೂಲ್ಯ ಮದುವೆಯಾಗಿದ್ದರು. ಗರ್ಭಿಣಿಯಾದ ನಂತರ ವಿಭಿನ್ನ ರೀತಿಯ ಫೋಟೋ ಶೂಟ್ ಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಅದ್ಧೂರಿಯಾಗಿ ಸೀಮಂತ, ಬೇಬಿ ಶವರ್ ಪಾರ್ಟಿಗಳು ಕೂಟ ನಡೆದಿದ್ದವು.ಹೀಗೆ ವಿಭಿನ್ನ ರೀತಿಯಲ್ಲಿ ಅವರ ತಾಯ್ತನದ ಪ್ರತಿ ಹೆಜ್ಜೆಯನ್ನು ಅವರು ಆನಂದಿಸಿದ್ದರು ಹಾಗೂ ಅಪಾರ ಶುಭ ಹಾರೈಕೆಗಳನ್ನು ಪಡೆದಿದ್ದರು.

ಇಂದು ಅಂದರೆ ಮಾರ್ಚ್ 1 ಶಿವರಾತ್ರಿಯ ಹಬ್ಬದ ದಿನ ನಟಿ ಅಮೂಲ್ಯ ಅವರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬಗ್ಗೆ ಟ್ವೀಟ್ ಮಾಡುವ ಮೂಲಕ ಪತಿ ಜಗದೀಶ್ ಸಂತಶ ಹಂಚಿಕೊಂಡಿದ್ದಾರೆ.