• April 2, 2022

ಕಿರುತೆರೆ ನಟನ ಹೊಸ ಇನ್ನಿಂಗ್ಸ್?

ಕಿರುತೆರೆ ನಟನ ಹೊಸ ಇನ್ನಿಂಗ್ಸ್?

ಕನ್ನಡ ಕಿರುತೆರೆಯ ಹ್ಯಾಂಡ್ ಸಮ್ ನಟ ರಕ್ಷ್ ಸದ್ಯ ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಾಂತ್ ವಸಿಷ್ಠ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಕ್ಷ್ ಈಗ ಜಿಪ್ಸಿ ಕಾರಿನ ಮಾಲೀಕರಾಗಿದ್ದಾರೆ.

ಕಳೆದ ಹುಟ್ಟುಹಬ್ಬದ ದಿನ ರಕ್ಷ್ ಹೊಸ ಕಾರು ಕೊಂಡುಕೊಂಡಿದ್ದರು. ತನ್ನ ಸೋಶಿಯಲ್ ಮೀಡಿಯಾದಲ್ಲಿ ತನ್ನ ಹೊಸ ಕಾರಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
“ನಿರ್ಮಿಸಿಲ್ಲ, ಖರೀದಿಸಲಾಗಿದೆ. ಮನೆಗೆ ಸ್ವಾಗತ” ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಲಕ್ಸುರಿ ಕಾರ್ ಖರೀದಿಸಿದ್ದ ರಕ್ಷ್ ಯಶಸ್ಸಿನ ಹಾದಿಯ ಬಗ್ಗೆ ಬರೆದುಕೊಂಡಿದ್ದರು. ನೆನಪಿನಾಳದಿಂದ ಹಲವು ನೆನಪುಗಳನ್ನು ಮೆಲುಕು ಹಾಕಿದ್ದರು. ಬಿಎಂಟಿಸಿ ಬಸ್ ನಲ್ಲಿ ಪಾಸ್ ಇಲ್ಲದೇ ತೆರಳುತ್ತಿದ್ದ ಘಟನೆಯಿಂದ ತಾನು ಬಯಸಿದ ಕಾರು ಖರೀದಿಸಿದ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಧನ್ಯವಾದ ಹೇಳಿರುವ ರಕ್ಷ್ ಯಶಸ್ಸನ್ನು ಅವರಿಗೆ ಅರ್ಪಿಸಿದ್ದಾರೆ.

ಲಾ ಪದವಿ ಓದಿರುವ ರಕ್ಷ್ ಪುಟ್ಟ ಗೌರಿ ಮದುವೆ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟರು. ಸದ್ಯ ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿರುವ ರಕ್ಷ್ ನರಗುಂದ ಬಂಡಾಯ ಸಿನಿಮಾದಲ್ಲಿ ನಾಯಕರಾಗಿ ಅಭಿನಯಿಸಿದ್ದಾರೆ.