• May 17, 2022

ಸದ್ದು ಮಾಡುತ್ತಿದೆ ಚಾರ್ಲಿ ಟ್ರೇಲರ್

ಸದ್ದು ಮಾಡುತ್ತಿದೆ ಚಾರ್ಲಿ ಟ್ರೇಲರ್

ರಕ್ಷಿತ್ ಶೆಟ್ಟಿ ಹಾಗೂ ಸಂಗೀತಾ ಶೃಂಗೇರಿ ಅಭಿನಯದ ಚಾರ್ಲಿ 777 ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಪ್ರೇಕ್ಷಕರ ಗಮನ ಸೆಳೆದಿದೆ. ನಿರ್ದೇಶಕ ಕಿರಣ್ ರಾಜ್ ಅವರು ಚಾರ್ಲಿ ಸಿನಿಮಾವನ್ನು ನಿರ್ದೇಶಿಸುವ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಇದೇ ಜೂನ್ 10ಕ್ಕೆ ಚಿತ್ರ ಬಿಡುಗಡೆ ಆಗಲಿದೆ.

ಚಿತ್ರತಂಡ ಟ್ರೇಲರ್ ನ ಲಿಂಕ್ ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ನಟ ರಕ್ಷಿತ್ ಶೆಟ್ಟಿ ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ “ನಮ್ಮ ವರುಷಗಳ ಪಯಣವನ್ನು ನಿಮಗಾಗಿ ಸಣ್ಣ ತುಣುಕನ್ನಾಗಿ ವಿಂಗಡಿಸಲಾಗಿದೆ. ಇದು ಜೂನ್ 10 ತರಲಿರುವ ಎಲ್ಲದಕ್ಕೂ ಮುನ್ನುಡಿಯಾಗಿದೆ. ನೀವು ಇದನ್ನು ಪ್ರೀತಿಯಿಂದ ಸ್ವೀಕರಿಸುತ್ತೀರಿ ಎಂದು ನಾವು ಭಾವಿಸುತ್ತೇವೆ” ಎಂದು ಬರೆದುಕೊಂಡಿದ್ದಾರೆ.

ಚಾರ್ಲಿ 777 ಧರ್ಮನ ಬದುಕು ಹಾಗೂ ಅವನ ಹಾಗೂ ಚಾರ್ಲಿಯ ನಡುವಿನ ಸಂಬಂಧವನ್ನು ತೋರಿಸುತ್ತದೆ. ಚಿತ್ರವು ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದ್ದು ಏಕಕಾಲಕ್ಕೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ. ರಾಜ್ ಬಿ ಶೆಟ್ಟಿ ,ಬಾಬ್ಬಿ ಸಿಂಹ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.