• May 31, 2022

ಹೊಸ ಹವಾ ಸೃಷ್ಟಿ ಮಾಡಲಿದೆ ಚಾರ್ಲಿ 777 ಸಿ‌ನಿಮಾದ ಇಮೋಜಿ

ಹೊಸ ಹವಾ ಸೃಷ್ಟಿ ಮಾಡಲಿದೆ ಚಾರ್ಲಿ 777 ಸಿ‌ನಿಮಾದ ಇಮೋಜಿ

ಇಮೋಜಿ.. ಇಂದಿನ ತಂತ್ರಜ್ಞಾನ ಯುಗದಲ್ಲಿ ಕೇಳಿ ಬರುತ್ತಿರುವ ಸರ್ವೇ ಸಾಮಾನ್ಯ ಪದ ಇದು. ಬಹುತೇಕ ಜನರಿಗೆ ಇಮೋಜಿ ಎಂದರೆ ಏನು ಎಂದು ತಿಳಿದಿಲ್ಲ. ಇ ಎಂದರೆ ಅಕ್ಷರ ಮೋಜಿ ಎಂದರೆ ಚಿತ್ರ. ಅಕ್ಷರಗಳು ಚಿತ್ರರೂಪದಲ್ಲಿ ನಮಗೆ ಕಂಡಾಗ ಅದನ್ನು ಇಮೋಜಿ ಎಂದು ಕರೆಯುತ್ತೇವೆ.

ಅಂದ ಹಾಗೇ ಈಗ್ಯಾಕೆ ಇಮೋಜಿ ಪದವನ್ನು ಬಳಸುತ್ತಿದ್ದೇವೆ ಎಂದು ಅಂದುಕೊಳ್ಳುತ್ತಿದ್ದೀರಾ? ಅದಕ್ಕೆ ಉತ್ತರ ಇಲ್ಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ ಉಂಟು ಮಾಡಿದ ಹವಾ ಅಷ್ಟಿಷ್ಟಲ್ಲ‌. ಇದರ ಜೊತೆಗೆ ರಾಕಿ ಭಾಯ್ ಯನ್ನು ಇಮೋಜಿಯನ್ನಾಗಿ ಬಳಸಿದ್ದು ಕನ್ನಡ ಸಿನಿಮಾ ರಂಗದಲ್ಲಿ ಇದು ಮೊದಲ ಪ್ರಯತ್ನವಾಗಿತ್ತು.

ಇಮೋಜಿಯಾಗಿ ಬಂದ ರಾಕಿಭಾಯ್ ಗೆ ಫಿದಾ ಆಗದವರಿಲ್ಲ. ಇದರ ಜೊತೆಗೆ ಕೆಜಿಎಫ್ 2 ಸಿನಿಮಾ ಇಮೋಜಿ ಮಾಡಿದ ಮೊದಲ ಸಿನಿಮಾ ಎಂದು ಎನ್ನಿಸಿಕೊಂಡಿತು‌. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಂತೂ ಕೇಳುವುದೇ ಬೇಡ, ಎತ್ತ ನೋಡಿದರೂ ರಾಕಿ ಭಾಯ್ ಇಮೋಜಿಯದ್ದೇ ದರ್ಬಾರು.

ಇದೀಗ ಚಾರ್ಲಿ ಸರದಿ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಸಿನಿಮಾ ಬಿಡುಗಡೆಗೆ ತಯಾರಾಗಿದ್ದು, ಇದರ ಜೊತೆಗೆ ಇದೀಗ ಆ ಸಿನಿಮಾದ ಇಮೋಜಿ ಕೂಡಾ ತಯಾರಾಗಿದೆ. ಚಾರ್ಲಿ 777 ಸಿನಿಮಾದಲ್ಲಿ ನಾಯಿಯೇ ಕೇಂದ್ರಬಿಂದು. ಅಂದ ಹಾಗೇ ಇಮೋಜಿಯಲ್ಲಿಯೂ ನಾಯಿಯನ್ನೇ ಬಳಸಿರುವುದು ವಿಶೇಷ‌. ಒಟ್ಟಿನಲ್ಲಿ ಇನ್ನು ಮುಂದೆ ಚಾರ್ಲಿ ಇಮೋಜಿ ಟ್ರೆಂಡಿಂಗ್ ಆದರೆ ಅಚ್ಚರಿಯೇನಿಲ್ಲ.