• December 20, 2021

ಆದಿತ್ಯ ಹಾಗೂ ಕಿಚ್ಚನ ಜೊತೆ ತೆರೆ ಹಂಚಿಕೊಂಡಿದ್ದ ನಟಿಗೆ ಕ್ಯಾನ್ಸರ್‌ !

ಆದಿತ್ಯ ಹಾಗೂ ಕಿಚ್ಚನ ಜೊತೆ ತೆರೆ ಹಂಚಿಕೊಂಡಿದ್ದ ನಟಿಗೆ ಕ್ಯಾನ್ಸರ್‌ !

ಕ್ಯಾನ್ಸರ್‌ ಕಾಯಿಲೆ ಯಾರನ್ನು ಬಿಡೋದಿಲ್ಲ..ಬಡವನಾಗಲಿ..ಶ್ರೀಮಂತನಾಗಲಿ ಬೇದ ಬಾವವಿಲ್ಲದೆ ಜೀವ ಹಿಂಡಿಬಿಡುತ್ತೆ…ಇನ್ಮು ಸಾಕಷ್ಟು ಸಿನಿಮಾ‌ ಕಲಾವಿದರಿಗೂ ಕ್ಯಾನ್ಸರ್ ಕಾಡಿದ್ದು ಒಂದಿಷಗಟು ಜನರು ಕ್ಯಾನ್ಸರ್‌ ಜೊತೆ ಹೋರಾಟ ಮಾಡಿ ಗೆದ್ದು ಬಂದಿದ್ದಾರೆ…

ನಟ ಆದಿತ್ಯ ಹಾಗೂ ಕಿಚ್ಚ ಸುದೀಪ್ ಜೊತೆ ಅಭಿನಯ ಮಾಡಿದ್ದ ನಟಿ ಹಂಸ ನಂದಿನಿ ಅವರಿಗೆ ಸ್ತನ ಕ್ಯಾನ್ಸರ್ ತಗುಲಿದೆ. ಪೋಷಕ ಪಾತ್ರಗಳ ಮೂಲಕ ಹೆಸರು ಮಾಡಿದ್ದ ನಂದಿನಿ, ಇತ್ತೀಚಿನ‌ ದಿನಗಳಲ್ಲಿ ಐಟಂ ಸಾಂಗ್‌ಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರ….

37ವರ್ಷದ ಹಂಸ ನಂದಿನಿ ಕಳೆದ 4 ತಿಂಗಳಿನಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪತ್ರವೊಂದನ್ನು ಬರೆದುಕೊಂಡಿದ್ದಾರೆ ಹಂಸ ನಂದಿನಿ..

ಬ್ಲಾಕ್ ಅಂಡ್ ವೈಟ್ ಫೋಟೊ ಶೇರ್ ಮಾಡುವುದರ ಜೊತೆಗೆ ಸುದೀರ್ಘವಾದ ಪತ್ರದಲ್ಲಿ‌ ಹೀಗಿದೆ…
ಹೋರಾಟದಿಂದ ಹಿಂದೆ ಸರಿಯುವುದನ್ನು ನಿರಾಕರಿಸುತ್ತೇನೆ. ಆದರೆ, ಧೈರ್ಯ ಮತ್ತು ಪ್ರೀತಿಯಿಂದ, ನಾನು ಮುಂದೆ ಹೋಗುತ್ತೇನೆ. ನಾಲ್ಕು ತಿಂಗಳ ಹಿಂದೆ, ನನ್ನ ಸ್ತನದಲ್ಲಿ ಸಣ್ಣ ಗಡ್ಡೆಯೊಂದು ಇರುವುದು ಗೊತ್ತಾಯಿತು. ನನ್ನ ಜೀವನ ಒಂದೇ ರೀತಿ ಇರುವುದಿಲ್ಲ ಎಂದು ಆ ಕ್ಷಣವೇ ನನಗೆ ತಿಳಿಯಿತು. ಒಂದೆರಡು ಗಂಟೆಗಳಲ್ಲಿ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಲಾಯಿತು. ನನಗೆ ಸ್ತನ ಕ್ಯಾನ್ಸರ್ ಮೂರನೇ ಸ್ಟೇಜ್‌ನಲ್ಲಿರುವುದು ಗೊತ್ತಾಯಿತು. 18 ವರ್ಷಗಳ ಹಿಂದೆ ಭೀಕರ ಕಾಯಿಲೆಯಿಂದಾಗಿ ನನ್ನ ತಾಯಿಯನ್ನು ನಾನು ಕಳೆದುಕೊಂಡಿದ್ದೆ. ಅದರ ಕರಾಳ ನೆರಳಿನಲ್ಲೇ ಅಂದಿನಿಂದ ನಾನು ವಾಸಿಸುತ್ತಿದ್ದೆ ಮತ್ತು ನಾನು ಭಯಗೊಂಡಿದ್ದೆ’ ಎಂದಿದ್ದಾರೆ ಹಂಸ ನಂದಿನಿ.

‘ಹಲವಾರು ಸ್ಕ್ಯಾನ್‌ಗಳು ಮತ್ತು ಪರೀಕ್ಷೆಗಳ ನಂತರ, ನಾನು ಧೈರ್ಯವಾಗಿ ಆಪರೇಷನ್‌ ಥಿಯೇಟರ್‌ಗೆ ಹೋದೆ. ಅಲ್ಲಿ ನನ್ನ ಗಡ್ಡೆಯನ್ನು ತೆಗೆದುಹಾಕಲಾಯಿತು. ಈ ಹಂತದಲ್ಲಿ ಯಾವುದೇ ಹರಡುವಿಕೆ ಇಲ್ಲ ಎಂದು ವೈದ್ಯರು ದೃಢಪಡಿಸಿದರು. ನಾನು ಅದೃಷ್ಟವಂತೆ. ಯಾಕೆಂದರೆ, ಅದನ್ನು ನಾನು ಬಹುಬೇಗನೇ ಕಂಡುಹಿಡಿದುಬಿಟ್ಟಿದ್ದೆ. ನಾನು ಅನುವಂಶಿಕ ರೂಪಾಂತರವನ್ನು ಹೊಂದಿದ್ದೇನೆ. ಮುಂದೆ ನನ್ನ ಮತ್ತೊಂದು ಸ್ತನವು ಕ್ಯಾನ್ಸರ್‌ ಆಗುವ 70% ಸಾಧ್ಯತೆ ಇದೆ. ಅಂಡಾಶಯದ ಕ್ಯಾನ್ಸರ್‌ ಆಗುವ ಸಾಧ್ಯತೆ 45% ಇದೆ. ಇದರಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಅಧಿಕ ರೋಗನಿರೋಧಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಿದೆ’ ಎಂದು ನಟಿ ಹಂಸ ನಂದಿನಿ ಪತ್ರದಲ್ಲಿ ಬರೆದುಕೊಂಡಿದ್ದಾರೆ…

ಸದ್ಯ ನಾನು 9 ಬಾರಿ ಕೀಮೋಥೆರಪಿಗೆ ಒಳಗಾಗಿದ್ದೇನೆ. ಇನ್ನೂ 7 ಬಾರಿ ಕೀಮೋಥೆರಪಿ ಮಾಡಿಸಿಕೊಳ್ಳಬೇಕಿದೆ. ನಾನು ಕೆಲವು ಭರವಸೆಗಳನ್ನು ನೀಡುತ್ತೇನೆ. ಈ ರೋಗವು ನನ್ನ ಜೀವನವನ್ನು ವ್ಯಾಪಿಸಿಕೊಳ್ಳಲು ನಾನು ಬಿಡುವುದಿಲ್ಲ ಮತ್ತು ನಾನು ಅದರ ವಿರುದ್ಧ ನಗುವಿನೊಂದಿಗೆ ಹೋರಾಡುತ್ತೇನೆ, ಗೆಲ್ಲುತ್ತೇನೆ. ನಾನು ಉತ್ತಮ ಮತ್ತು ಬಲಶಾಲಿಯಾಗಿ ಮತ್ತೆ ತೆರೆಯ ಮೇಲೆ ಬರುತ್ತೇನೆ. ನಾನು ನನ್ನ ಕಥೆಯನ್ನು ಹೇಳುವುದರಿಂದ, ಇತರರಿಗೆ ಇದರ ಬಗ್ಗೆ ಅರಿವು ಮೂಡಿಸಲು ಸಾಧ್ಯ ಆದ್ದರಿಂದ ಈ‌ಪತ್ರ ಎಂದಿದ್ದಾರೆ ಹಂಸ ನಂದಿನಿ