- April 23, 2022
ಇಂಜಿನಿಯರಿಂಗ್ ಪದವಿ ಪಡೆದಿರುವ ಪೃಥ್ವಿರಾಜ್ ನಟನೆಯಲ್ಲಿ ಬ್ಯುಸಿ


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ದೊರೆಸಾನಿಯಲ್ಲಿ ನಾಯಕ ಬ್ಯುಸಿನೆಸ್ ಮ್ಯಾನ್ ವಿಶ್ವನಾಥನ್ ಆನಂದ್ ಆಗಿ ಅಭಿನಯಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ಪೃಥ್ವಿರಾಜ್.


ಮೊದಲ ಧಾರಾವಾಹಿಯಲ್ಲಿಯೇ ನಾಯಕ ಆಗಿ ನಟಿಸುವ ಅವಕಾಶ ಪಡೆದುಕೊಂಡಿರುವ ಪೃಥ್ವಿರಾಜ್ ಹುಟ್ಟಿ ಬೆಳೆದಿದ್ದೆಲ್ಲಾ ಮಹಾನಗರಿ ಬೆಂಗಳೂರಿನಲ್ಲಿ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಪೃಥ್ವಿರಾಜ್ ವಿದ್ಯಾಭ್ಯಾಸದ ಬಳಿಕ ಐಟಿ ಕಂಪೆನಿಯೊಂದರಲ್ಲಿ ಬ್ಯುಸಿನೆಸ್ ಅನಾಲಿಸ್ಟ್ ಆಗಿ ಕೆಲಸವನ್ನು ಗಿಟ್ಟಿಸಿಕೊಂಡರು.


ನಟನೆಯತ್ತ ವಿಶೇಷ ಒಲವು ಹೊಂದಿರುವ ಪೃಥ್ವಿರಾಜ್ ಮಾಡೆಲಿಂಗ್ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡರು. ಮುಂದೆ ನಟನೆಯಲ್ಲಿ ಬದುಕು ರೂಪಿಸಿಕೊಳ್ಳುವ ನಿರ್ಧಾರ ಮಾಡಿದ ಪೃಥ್ವಿರಾಜ್ ಆಡಿಶನ್ ನೀಡಿದರು. ಮುಂದೆ ಒಂದಷ್ಟು ಆಡಿಶನ್ ಗಳಲ್ಲಿ ಸೆಲೆಕ್ಟ್ ಆಗಿದ್ದರೂ ಕೋವಿಡ್ ಕಾರಣದಿಂದ ಪ್ರಾಜೆಕ್ಟ್ ಗಳು ಯಾವುದು ಟೇಕಾಫ್ ಆಗಲಿಲ್ಲ.


ಇದೀಗ ದೊರೆಸಾನಿ ಧಾರಾವಾಹಿಯಲ್ಲಿ ನಾಯಕ ಆಗಿ ಬ್ಯುಸಿಯಾಗಿರುವ ಪೃಥ್ವಿರಾಜ್ ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾದರು. ಇನ್ನು ಕೇವಲ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಹರಡಿರುವ ಪೃಥ್ವಿರಾಜ್ ಓ ಮೈ ಲವ್ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದು ಈ ವರ್ಷ ಸಿನಿಮಾ ಬಿಡುಗಡೆಯಾಗಲಿದೆ.






