- July 4, 2022
ಔಪಚಾರಿಕ ತರಬೇತಿಯಿಲ್ಲದೆ ನಾನು ಎಂದಿಗೂ ಸಾಹಸದ ಪ್ರಯತ್ನ ಮಾಡುವುದಿಲ್ಲ : ದಿಗಂತ್


ಶಸ್ತ್ರಚಿಕಿತ್ಸೆಯ ನಂತರ ಇದೀಗ ನಟ ದಿಗಂತ್ ಆಸ್ಪತ್ರೆಯಿಂದ ಹಿಂತಿರುಗಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ತನ್ನ ಮುಂದಿನ ಪಲ್ಟಿ ತನಕ ಕಾಯಲು ಸಾಧ್ಯವಿಲ್ಲ ಎನ್ನುವ ಮೂಲಕ ಡಾಕ್ಟರ್ ಜೊತೆ ನಗೆ ಚಟಾಕಿ ಸಿಡಿಸಿದ್ದಾರೆ.
ಪಲ್ಟಿಯಿಂದ ಗಾಯಗೊಂಡ ಹಿನ್ನೆಲೆಯಲ್ಲಿ ನಟನನ್ನು ಮುಂಬೈನಿಂದ ಬೆಂಗಳೂರಿಗೆ ವಿಮಾನದ ಮೂಲಕ ಕರೆತರಲಾಗಿತ್ತು.


ಖಾಸಗಿ ವೆಬ್ ಸೈಟ್ ಜೊತೆ ಮಾತನಾಡುತ್ತಾ ತಮ್ಮ ಅನುಭವವನ್ನು ಹಂಚಿಕೊಂಡ ಅವರು “ಶಸ್ತ್ರಚಿಕಿತ್ಸೆಯ ಕೆಲವೇ ದಿನಗಳ ನಂತರ ನನ್ನ ವೈದ್ಯರು ನನಗೆ ಈಜಲು ಮತ್ತು ಜಿಮ್ ನಲ್ಲಿ ಲಘು ವ್ಯಾಯಾಮ ಮಾಡಲು ಸಲಹೆ ನೀಡಿದರು, ಮತ್ತು ನಾನೀಗ ಇದನ್ನು ಮುಂದುವರಿಸುತ್ತಿರುವೆ” ಎಂದರು.


ಅವರು ತಮ್ಮ ಪತ್ನಿ ಐಂದ್ರಿತಾ ರೇ ಅವರೊಂದಿಗೆ ಗೋವಾ ಪ್ರವಾಸದಲ್ಲಿದ್ದರು. “ನಾನು ಮತ್ತು ಆಂಡಿ ಒಂದು ದಶಕಕ್ಕಿಂತಲೂ ಹೆಚ್ಚಿನ ಕಾಲದಿಂದ ಸಾಹಸ ಪ್ರವೃತ್ತಿಗಳನ್ನು ಮಾಡುತ್ತಾ ಬಂದಿದ್ದೇವೆ. ಪಾರ್ಕರ್ ನಿಂದ ರಾಕ್ ಕ್ಲೈಬಿಂಗ್ ನವರೆಗೆ ನಾವು ಎಲ್ಲವನ್ನೂ ಮಾಡಿದ್ದೇವೆ. ಪ್ರತಿ ಪ್ರವಾಸವು ನಮಗೆ ಉತ್ತಮ ಅನುಭವವನ್ನೇ ನೀಡಿದೆ. ಆದರೆ ಆ ದಿನ ನಾನು ಪಲ್ಟಿ ಮಾಡಿದೆ. ಅಂದು ಟ್ರಾಂಪೋಲಿನ ಮೇಲ್ಮೈ ಸ್ವಲ್ಪ ತೇವವಾಗಿತ್ತು. ಮಧ್ಯದಲ್ಲಿಯೇ ಕುತ್ತಿಗೆಯಲ್ಲಿ ತೀಕ್ಷ್ಣವಾದ ನೋವು ಕಾಣಿಸಿಕೊಂಡರೂ ನನಗೆ ಅರ್ಥದಲ್ಲಿ ನಿಲ್ಲಿಸಲು ಸಾಧ್ಯವಾಗಲಿಲ್ಲ. ಕೋಣೆಗೆ ಹಿಂತಿರುಗಿ ಮಲಗಿದಾಗ ಗುಣವಾಗಬಹುದೆಂದು ಭಾವಿಸಿದ್ದೆ. ಆದರೆ ನಂತರ ನನ್ನ ಬೆಂಗಳೂರಿನ ಡಾಕ್ಟರನ್ನು ಸಂಪರ್ಕಿಸಿದೆ. ದೊಡ್ಡ ಗಾಯವಲ್ಲದಿದ್ದರೂ ಪಾರ್ಶ್ವ ವಾಯುವಿಗೆ ಕಾರಣವಾಗಬಹುದು ಎಂದರು. ಗೋವಾದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಸಾಧನಗಳಿರಲಿಲ್ಲ. ಅದಕ್ಕಾಗಿ ನನ್ನನ್ನು ಬೆಂಗಳೂರಿಗೆ ಕರೆತರಲಾಯಿತು” ಎಂದರು.


ಜೊತೆಗೆ ಐಂದ್ರಿತಾ ರೈ ಅವರ ಕುರಿತು ಮಾತನಾಡುತ್ತಾ “ನಾನು ಶಾಂತನಾಗಿದ್ದೆ. ಆದರೆ ನನ್ನ ಹೆಂಡತಿ ಇನ್ನೂ ಪ್ಯಾನಿಕ್ ಮೋಡ್ ನಲ್ಲಿ ಇದ್ದಳು. ಶಸ್ತ್ರಚಿಕಿತ್ಸೆ ನಡೆದ ನಂತರ ನಿರಾಳವಾಗಿದ್ದಾಳೆ” ಎಂದರು.


ಮಾತು ಮುಂದುವರಿಸುತ್ತಾ ದಿಗಂತ್ “ವಯಸ್ಸು ಹೆಚ್ಚಾಗುತ್ತಿರುವುದರ ಬಗ್ಗೆ ನಾನು ಅರಿತಿದ್ದೇನೆ ; ಮತ್ತು ನಾವು ಯಾವುದರ ಭಾಗವಾಗಲು ಆರಿಸಿಕೊಂಡಿದ್ದೇವೋ, ಅದರ ಕುರಿತು ಜಾಗರೂಕರಾಗಿರಬೇಕು. ಅಲ್ಲದೆ ಯಾವುದೇ ಔಪಚಾರಿಕ ತರಬೇತಿಯಿಲ್ಲದೆ ನಾನು ಪಲ್ಟಿ ಮಾಡಿದೆ. ಅದು ಮಾಡಬಾರದಿತ್ತು. ನೀವು ತರಬೇತಿ ಪಡೆದಾಗ ಅವರು ನಿಮಗೆ ಮಾಡಬೇಕಾದ ಮತ್ತು ಮಾಡಬಾರದ ಎಲ್ಲವನ್ನೂ ಕಲಿಸುತ್ತಾರೆ. ತರಬೇತಿಯಿಲ್ಲದೆ ಸಾಹಸ ಚಟುವಟಿಕೆಯನ್ನು ಎಂದೂ ಮಾಡಬೇಡಿ ಎಂದು ಹೇಳಬಯಸುತ್ತೇನೆ” ಎಂದರು.
ನಟ ದಿಗಂತ್ ಈಗ ಚಿತ್ರೀಕರಣಕ್ಕೆ ಮುಂಚಿತವಾಗಿ ಸ್ವಲ್ಪ ವಿರಾಮವನ್ನು ತೆಗೆದುಕೊಳ್ಳುತ್ತಿದ್ದಾರೆ.




