• January 4, 2022

ಬಡವ ರಾಸ್ಕಲ್ ಗೆ ನೀಲ್ ಮೆಚ್ಚುಗೆ

ಬಡವ ರಾಸ್ಕಲ್ ಗೆ ನೀಲ್ ಮೆಚ್ಚುಗೆ

ಡಾಲಿ ಧನಂಜಯ ಹಾಗೂ ಅಮೃತಾ ಅಯ್ಯಂಗಾರ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ಕಳೆದ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗಿದೆ… ..ಬಿಡುಗಡೆಯಾಗಿ ಪ್ರೇಕ್ಷಕರ ಮನಸ್ಸು ಗೆದ್ದಿರುವ ಬಡವ ರಾಸ್ಕಲ್ ಎಲ್ಲಾ ಥಿಯೇಟರ್ ನಲ್ಲೂ ಇಂದಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.. ಸಿಂಪಲ್ ಕಥೆಯನ್ನ ತೆರೆಮೇಲೆ ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ ಶಂಕರ್ ಎನ್ನುವುದು ಪ್ರೇಕ್ಷಕರ ಅಭಿಪ್ರಾಯವಾಗಿದೆ ..

ಸದ್ಯ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ನಾಯಕ ನಟ ಧನಂಜಯ್ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ತೆರಳಿ ಅಭಿಮಾನಿಗಳನ್ನ ಭೇಟಿ ಮಾಡಿ ಧನ್ಯವಾದ ಹೇಳುತ್ತಿದ್ದಾರೆ… ಇದೇ ಸಂದರ್ಭದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಬಡವ ರಾಸ್ಕಲ್ ಸಿನಿಮಾ ತಂಡಕ್ಕೆ ಶುಭಾಶಯ ಕೋರಿದ್ದಾರೆ…

ಹೊಸ ವರ್ಷದ ಆರಂಭದಲ್ಲಿಯೇ …ಈ ವರ್ಷ ಖಂಡಿತವಾಗಿಯೂ ನಮ್ಮೆಲ್ಲರಿಗೂ ತುಂಬ ಚೆನ್ನಾಗಿರುತ್ತದೆ… ನಾವು ಕಳೆದ ವರ್ಷವನ್ನು ಅದ್ಭುತವಾದ ಸಿನಿಮಾ ಬಡವ ರಾಸ್ಕಲ್ ಚಿತ್ರದಿಂದ ಎಂಡ್ ಮಾಡಿದ್ದೇವೆ…. ಹಾಗಾಗಿ ಮುಂದಿನ ದಿನಗಳಲ್ಲಿ ಕೂಡ ಕನ್ನಡ ಇಂಡಸ್ಟ್ರಿಯಲ್ಲಿ ಸಾಕಷ್ಟು ಸಕ್ಸಸ್ ಕಾಣಲಿದ್ದೇವೆ ಎಂದಿದ್ದಾರೆ…

ಇನ್ನು ನಟ ನಿರ್ಮಾಪಕ ಧನಂಜಯ ಅವರಿಗೆ ಶುಭ ಕೋರಿರುವ ಪ್ರಶಾಂತ್ ನೀಲ್ ಮಲ್ಟಿ ಟ್ಯಾಲೆಂಟೆಡ್ ಧನಂಜಯ ಅವರಿಗೆ ಒಳ್ಳೆದಾಗಲಿ ಆಲ್ ದ ಬೆಸ್ಟ್ ಎಂದಿದ್ದಾರೆ..