• July 14, 2022

ಮತ್ತೆ ನಿರ್ದೇಶನಕ್ಕಿಳಿದ ದಿನಕರ್ ತೂಗುದೀಪ.

ಮತ್ತೆ ನಿರ್ದೇಶನಕ್ಕಿಳಿದ ದಿನಕರ್ ತೂಗುದೀಪ.

ಕನ್ನಡದ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾಗಿರುವ ದಿನಕರ್ ತೂಗುದೀಪ ಅವರು ಎಲ್ಲರಿಗೂ ಪರಿಚಿತರು. ‘ಸಾರಥಿ’, ‘ನವಗ್ರಹ’ ಮುಂತಾದ ಹಿಟ್ ಸಿನಿಮಾಗಳನ್ನು ಸ್ಯಾಂಡಲ್ವುಡ್ ಗೆ ನೀಡಿರುವ ಇವರು ಕನ್ನಡಿಗರು ಭರವಸೆ ಇಟ್ಟಿರುವ ನಿರ್ದೇಶಕರುಗಳಲ್ಲಿ ಒಬ್ಬರು. ಮಾಡಿರುವ ಕೆಲವೇ ಕೆಲವು ಸಿನಿಮಾಗಳಲ್ಲಿ ಪ್ರತಿಯೊಂದರಲ್ಲೂ ಯಶಸ್ಸು ಕಂಡಿರುವ ಇವರು, ಇದೀಗ ಮತ್ತೆ ನಿರ್ದೇಶನ ಮಾಡಲಿದ್ದಾರೆ. ಸುಮಾರು ನಾಲ್ಕು ವರ್ಷಗಳ ನಂತರ ಸಿನಿಮಾ ಮಾಡುತ್ತಿರುವ ಇವರ ಮುಂದಿನ ಚಿತ್ರda ಮುಹೂರ್ತ ನೆರವೇರಿದೆ.

2018ರಲ್ಲಿ ಬಿಡುಗಡೆಯಾದ ಪ್ರೇಮ್, ಪ್ರಜ್ವಲ್ ದೇವರಾಜ್, ಹರಿಪ್ರಿಯಾ ಹಾಗು ಸುಧಾರಾಣಿ ಅವರು ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದ ‘ಲೈಫ್ ಜೊತೆ ಒಂದ್ ಸೆಲ್ಫಿ’ ಎಂಬ ಚಿತ್ರ ಇವರ ನಿರ್ದೇಶನದಲ್ಲಿ ತೆರೆಕಂಡ ಕೊನೆಯ ಚಿತ್ರವಾಗಿತ್ತು. ಇದೀಗ ಹೊಸ ಸಿನಿಮಾವೊಂದನ್ನು ನಿರ್ದೇಶನ ಮಾಡಳಿದ್ದಾರೆ ದಿನಕರ್.

ಜಯಣ್ಣ-ಭೋಗೇಂದ್ರ ಅವರ ‘ಜಯಣ್ಣ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಸಿನಿಮಾ ತಯಾರಾಗಲಿದ್ದು, ‘ಕಿಸ್’ ಚಿತ್ರ ಖ್ಯಾತಿಯ ವಿರಾಟ್ ಸಿನಿಮಾದ ನಾಯಕನಾಗಿ ನಟಿಸಲಿದ್ದಾರೆ. ಇವರಿಗೆ ನಾಯಕಿಯಾಗಿ ಸಂಜನಾ ಆನಂದ್ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿಯಿದೆ. ಇದೊಂದು ರೋಮ್ಯಾಂಟಿಕ್ ಥ್ರಿಲರ್ ಕಥೆಯಾಗಿದ್ದು ಚರಣ್ ರಾಜ್ ಅವರು ಸಿನಿಮಾಗೆ ಸಂಗೀತ ತುಂಬಲಿದ್ದಾರೆ. ತಾತ್ಕಾಲಿಕವಾಗಿ ‘ಪ್ರೊಡಕ್ಷನ್ 23’ ಎಂದು ಕರೆಯಲಾಗುತ್ತಿರುವ ಈ ಸಿನಿಮಾ ಸದ್ಯದಲ್ಲೇ ಸೆಟ್ಟೇರೋ ಸಾಧ್ಯತೆಯಿದೆ.