- May 12, 2022
ತೆಲುಗಿನಲ್ಲಿ ಖುಷಿ ರವಿ ಮೋಡಿ


ಖುಷಿ ರವಿ… ಕನ್ನಡ ಸಿನಿಮಾ ರಂಗದಲ್ಲಿ ಹೊಸ ಅಲೆ ಸೃಷ್ಟಿ ಮಾಡಿದ್ದ ದಿಯಾ ಸಿನಿಮಾದಲ್ಲಿ ನಾಯಕಿ ದಿಯಾ ಸ್ವರೂಪ್ ಆಗಿ ನಟಿಸಿದ್ದ ಖುಷಿ ರವಿ ಮನೋಜ್ಞ ಅಭಿನಯಕ್ಕೆ ಫಿದಾ ಆಗದವರಿಲ್ಲ. ಮೊದಲ ಸಿನಿಮಾದಲ್ಲಿಯೇ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಖುಷಿ ರವಿ ತೆಲುಗು ಸಿನಿರಂಗದಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿದ್ದಾರೆ.




ಭಾರ್ಗವ ನಿರ್ದೇಶನದ ರುದ್ರಂ ಸಿನಿಮಾದಲ್ಲಿ ನಟಿಸುವ ಮೂಲಕ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟಿರುವ ಖುಷಿ ರವಿ ಸಕತ್ ಖುಷಿಯಲ್ಲಿದ್ದಾರೆ. “ಇದು ನನ್ನ ಸಿನಿಮಾ ಕೆರಿಯರ್ ನಲ್ಲಿಯೇ ನಿರ್ವಹಿಸದೇ ಇರುವಂತಹ ಪಾತ್ರ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಚಾಲೆಂಜಿಗ್ ಆಗಿರುವಂತಹ ಪಾತ್ರವೂ ಹೌದು. ಮುಂದಿನ ದಿನಗಳಲ್ಲಿ ನಾನು ಇಂತಹ ಚಾಲೆಂಜಿಂಗ್ ಪಾತ್ರವನ್ನು ಮಾಡುತ್ತೇನಾ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಅದೇ ಕಾರಣದಿಂದ ಅಸ್ತು ಎಂದೆ. ಜನ ಈ ಪಾತ್ರವನ್ನು ಕಂಡು ಫಿದಾ ಆಗುವುದರಲ್ಲಿ ಎರಡು ಮಾತಿಲ್ಲ” ಎನ್ನುತ್ತಾರೆ ಖುಷಿ ರವಿ.


ಇದರ ಜೊತೆಗೆ ಸಿನಿಮಾ ತಂಡದವರ ಜೊತೆ ಮಾತನಾಡಿರುವ ಖುಷಿ ರವಿ “ರುದ್ರ ಸಿನಿಮಾ ತಂತ್ರಜ್ಞರ ತಂಡ ತುಂಬಾ ಉತ್ತಮವಾಗಿದೆ. ಇದಕ್ಕಿಂತ ಮೊದಲು ಇದೇ ಸಿನಿಮಾ ತಂಡ ಗತಂ ಎನ್ನುವ ಸಿನಿಮಾ ಮಾಡಿದ್ದು ನಾನು ಅದರಲ್ಲಿಯೂ ನಟಿಸಿದ್ದೆ. ಸಂತಸದ ವಿಷಯವೆಂದರೆ ನಾನು ಆ ಸಿನಿಮಾದಲ್ಲಿಯೂ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ” ಎನ್ನುತ್ತಾರೆ.






