• February 5, 2022

ಬೇಬಿ ಬಂಪ್ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ ದಿಶಾ ಮದನ್

ಬೇಬಿ ಬಂಪ್ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ ದಿಶಾ ಮದನ್

ದಿಶಾ ಮದನ್… ಎರಡನೇ ಬಾರಿ ತಾಯಿಯಾಗುತ್ತಿರುವ ಸಿಹಿ ಸುದ್ದಿ ಹಂಚಿಕೊಂಡಿದ್ದ ದಿಶಾ ಮದನ್ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಸೀಮಂತ ಮಾಡಿಸಿಕೊಂಡಿದ್ದರು. ಜೊತೆಗೆ ತಮ್ಮ ಫ್ಯಾಮಿಲಿಯ ಫೋಟೋಗಳನ್ನು ಹಂಚಿಕೊಂಡಿದ್ದ ದಿಶಾ ಮದನ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಏನಂತೀರಾ? ಅದು ಫೋಟೋಶೂಟ್!

ಸೋಶಿಯಲ್ ಮೀಡಿಯಾದ ಸೆನ್ಸೆಷನಲ್ ಸ್ಟಾರ್ ಆಗಿರುವ ದಿಶಾ ಮದನ್ ಇತ್ತೀಚೆಗೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದು ಫೋಟೋಗಳೆಲ್ಲಾ ಸಕತ್ ವೈರಲ್ ಆಗುತ್ತಿದೆ. ಇನ್ನು ದಿಶಾ ಮದನ್ ಬೇಬಿ ಬಂಪ್ ಫೋಟೋಶೂಟ್ ನಲ್ಲಿಯೂ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ನೆಟ್ಟಿಗರು ಫೋಟೋ ಕಂಡು ಫಿದಾ ಆಗಿದ್ದಾರೆ.

ಹಳದಿ ಬಣ್ಣದ ಕಾಸ್ಟ್ಯೂಮ್ ನಲ್ಲಿ ಫೊಟೋಶೂಟ್ ಮಾಡಿಸಿಕೊಂಡಿರುವ ದಿಶಾ “ಹೆರಿಗೆ ಮತ್ತು ಫ್ಯಾಷನ್ ಒಟ್ಟಿಗೆ ಹೋಗುವುದಿಲ್ಲ ಎಂದು ಯಾರು ಹೇಳಿದರು?” ಎಂದು ಬರೆದುಕೊಂಡಿದ್ದಾರೆ.

“ಮಾರ್ಚ್ 2022ಕ್ಕೆ ಕಾಯುತ್ತಿರುವೆ. ನಾವು ಮೂರರಿಂದ ನಾಲ್ವರಾಗುತ್ತಿದ್ದೇವೆ. 2022ರಲ್ಲಿ ನನ್ನ ಮೊದಲ ಮಗ ವಿಯಾನ್ ಅಣ್ಣನಾಗುತ್ತಿದ್ದಾನೆ. ತುಂಬಾ ಸಂತಸದಲ್ಲಿದ್ದೇವೆ” ಎಂದು ನಾಲ್ಕು ತಿಂಗಳ ಹಿಂದೆ ತಾವು ತಾಯಿಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದರು ದಿಶಾ ಮದನ್‌‌‌.

2017 ರಲ್ಲಿ ಶಶಾಂಕ್ ವಾಸುಕಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ದಿಶಾ ಮದನ್ 2019 ರಲ್ಲಿ ಮೊದಲ ಮಗ ವಿಯಾನ್ ಗೆ ಜನ್ಮ ನೀಡಿದ್ದರು. ಇದೀಗ ಮುದ್ದು ಮಗುವಿನ ನಿರೀಕ್ಷೆಯಲ್ಲಿರುವ ದಿಶಾ ಮದನ್ ಕುಟುಂಬಕ್ಕೆ ಇದೇ ಮಾರ್ಚ್ ನಲ್ಲಿ ಪುಟ್ಟ ಕಂದನ ಆಗಮನವಾಗಲಿದೆ.