• July 14, 2022

ಧರ್ಮನ ‘ಜೀವನ ಗೀತೆ’ ಅಭಿಮಾನಿಗಳ ಬಳಿಗೆ.

ಧರ್ಮನ ‘ಜೀವನ ಗೀತೆ’ ಅಭಿಮಾನಿಗಳ ಬಳಿಗೆ.

‘777 ಚಾರ್ಲಿ’ ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದೆ. ಎಲ್ಲಾ ರಂಗದ, ಎಲ್ಲಾ ವರ್ಗದ ಪ್ರೇಕ್ಷಕರಿಂದ ಪ್ರಶಂಸೆ ಪಡೆಯುತ್ತಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಪಡೆಯುತ್ತಿದೆ. ಈಗಾಗಲೇ ಬಿಡುಗಡೆಯಾಗಿ ಸಡಗರದ ಒಂದು ತಿಂಗಳು ಕಂಡಿರುವ ಚಿತ್ರ 50ದಿನಗಳತ್ತ ದಾಪುಗಲು ಇಡುತ್ತಿದೆ. ಈ ಸಮಯದಲ್ಲಿ ಚಿತ್ರತಂಡ ಹೊಸ ಹಾಡೊಂದನ್ನು ಅಭಿಮಾನಿಗಳಿಗೆ ನೀಡಲು ನಿರ್ಧರಿಸಿದ್ದಾರೆ.

‘777 ಚಾರ್ಲಿ’ ಸಿನಿಮಾದ ಯಶಸ್ಸಿನಲ್ಲಿ ಅದರ ಸಂಗೀತಕ್ಕೂ ದೊಡ್ಡ ಪಾಲಿದೆ. ಮನವನ್ನು ಮುದಗೊಳಿಸೋ ಹಿನ್ನೆಲೆ ಸಂಗೀತ, ಸನ್ನಿವೇಶದ ಜೊತೆಗೆ ಪ್ರೇಕ್ಷಕರನ್ನು ಸರಿಹೊಂದುವ ಹಾಡುಗಳು ಚಿತ್ರದ ಪ್ರಮುಖ ಅಂಗ. ಸಂಗೀತ ನಿರ್ದೇಶಕರಾದ ನೋಬಿನ್ ಪಾಲ್ ಅವರಿಗೆ ಎಲ್ಲೆಡೆಯಿಂದ ಪ್ರಶಂಸೆಗಳು ಓಡಿಬರುತ್ತಿವೆ. ಈಗಾಗಲೆ ಚಿತ್ರದಿಂದ ಐದು ಹಾಡುಗಳು ಬಿಡುಗಡೆಯಾಗಿದ್ದು ಪ್ರತಿಯೊಂದು ಕೇಳುಗರ ಮನದಲ್ಲೇ ಮನೆ ಮಾಡಿವೆ. ಇದೀಗ ಧರ್ಮನ ಪಾತ್ರದ ಸುತ್ತ ಸುತ್ತುವ ‘ಹಿಮ್ನ್ ಒಫ್ ಧರ್ಮ(Hymn Of Dharma)’ ಎಂಬ ಹಾಡಿನ ಲಿರಿಕಲ್ ವಿಡಿಯೋ ಯೂಟ್ಯೂಬ್ ನಲ್ಲಿ ಬರಲಿದೆ. ‘ಪರಮ್ ವಾಹ್ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್ ನಲ್ಲಿ ನಾಳೆ(ಜುಲೈ 14) 11:04ಕ್ಕೆ ಬಿಡುಗಡೆಯಾಗುತ್ತಿದೆ. ಹಲವಾರು ಸಂಗೀತ ಪ್ರೀಯರು ಕಾಯುತ್ತಿದ್ದ ಈ ಹಾಡು ಬಿಡುಗಡೆಯಾಗುತ್ತಿರುವ ಈ ಸುದ್ದಿ ಎಲ್ಲರಲ್ಲಿ ಸಂತಸ ತಂದಿದೆ.

ಕಿರಣ್ ರಾಜ್ ಕೆ ಅವರ ಸೃಷ್ಟಿ ‘777 ಚಾರ್ಲಿ’. ಸುಮಾರು ಒಂದು ವರ್ಷಗಳ ಕಾಲ ಚಿತ್ರದ ಕಥೆ ಹೆಣೆದು, ಸತತ ಮೂರು ವರ್ಷಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿದ್ದು, ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರೆಲ್ಲರ ಪರಿಶ್ರಮಕ್ಕೆ ತಕ್ಕ ಫಲ ಚಿತ್ರಮಂದಿರಗಳಲ್ಲಿ ಹಾಗು ಚಿತ್ರ ನೋಡಿರುವವರ ಮನದಲ್ಲಿ ಸಿಗುತ್ತಿದೆ.