• June 20, 2022

ಸದ್ದು ಮಾಡುತ್ತಿದೆ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಟ್ರೇಲರ್

ಸದ್ದು ಮಾಡುತ್ತಿದೆ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಟ್ರೇಲರ್

ನವೀನ್ ಶಂಕರ್ ಹಾಗೂ ಐಶಾನಿ ಶೆಟ್ಟಿ ನಾಯಕ ನಾಯಕಿಯಾಗಿ ನಟಿಸಿರುವ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದ ಟೀಸರ್ ಇದೀಗ ಬಿಡುಗಡೆಯಾಗಿದೆ. ಡ್ರಗ್ಸ್, ಕೊಲೆ, ಪ್ರೀತಿ, ಪ್ರೇಮ ಜೊತೆಗೊಂದು ಕುಟುಂಬದ ಕಥೆಯನ್ನು ಒಳಗೊಂಡಿರುವಂತಹ ಸಿನಿಮಾ ಇದಾಗಿದ್ದು, ಇದೀಗ ಬಿಡುಗಡೆಯಾಗಿರುವ ಟೀಸರ್ ಸಿನಿಪ್ರಿಯರಲ್ಲಿ ಒಂದು ರೀತಿಯ ನಿರೀಕ್ಷೆ ಹುಟ್ಟಿಸಿದೆ.

ಸಿನಿಮಾದಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ನಾಯಕಿ ಐಶಾನಿ ಶೆಟ್ಟಿ ಸಕತ್ ಖುಷಿಯಲ್ಲಿದ್ದಾರೆ. “ಇದೇ ಮೊದಲ ಬಾರಿಗೆ ನಾನು ಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಇಲ್ಲಿಯ ತನಕ ನಾನು ಅಂತಹ ಪಾತ್ರಗಳಲ್ಲಿ ನಟಿಸಿಯೇ ಇರಲಿಲ್ಲ. ನನ್ನ ಪಾತ್ರವಂತೂ ಬಹಳ ಚೆನ್ನಾಗಿ ಮೂಡಿ ಬಂದಿದೆ. ಹೌದು, ಈ ಸಿನಿಮಾದಲ್ಲಿ ನಾನು ಬೋಲ್ಡ್ ಲುಕ್ ನಲ್ಲಿ ಕಾಣಿಸಿದ್ದು ತುಂಬಾ ಚಾಲೆಂಜಿಗ್ ಆಗಿತ್ತು” ಎಂದು ಹೇಳುತ್ತಾರೆ ಐಶಾನಿ ಶೆಟ್ಟಿ.

ನಾಯಕನಾಗಿ ನಟಿಸಿರುವ ಗುಳ್ಟು ಸಿನಿಮಾ ಖ್ಯಾತಿಯ ನವೀನ್ ಶಂಕರ್ ಅವರು ಪಾತ್ರದ ಬಗ್ಗೆ ಹೇಳಿದ್ದಾರೆ. “ನಾಯಕ ಆದಿ ಪಾತ್ರಕ್ಕೆ ಜೀವ ತುಂಬುತ್ತಿದ್ದೇನೆ. ಬಾಕ್ಸಿಂಗ್ ಎಂದರೆ ಇಷ್ಟ ಪಡುವ ನಾನು ಅದರಲ್ಲಿಯೇ ಸಾಧನೆ ಮಾಡುವ ಕನಸು ಕಂಡಿರುತ್ತೇನೆ. ತನ್ನ ಕನಸು ನನಸು ಮಾಡಲು ಹೋಗುವಾಗ ಘಟನೆಯೊಂದು ನಡೆದು ಕೆಲವು ಪಾತ್ರಗಳು ಆತನ ಬದುಕಿನಲ್ಲಿ ಎದುರಾಗುತ್ತದೆ. ಆ ಪಾತ್ರಕ್ಕೂ ಆದಿ ಜೀವನಕ್ಕೂ ಏನು ಸಂಬಂಧ ಎಂಬುದು ಸಿನಿಮಾ ನೋಡಿದ ಮೇಲೆ ನಿಮಗೆ ತಿಳಿಯುತ್ತದೆ” ಎಂದು ಹೇಳುತ್ತಾರೆ ನವೀನ್ ಶಂಕರ್.

ಶ್ರೀಧರ್ ಶಿಕಾರಿಪುರ ನಿರ್ದೇಶನದ ಈ ಸಿನಿಮಾದಲ್ಲಿ ಕೀರ್ತನ್‌ ಪೂಜಾರಿ ಕ್ಯಾಮೆರಾ, ರೋಣದ ಬಕ್ಕೇಶ್‌, ಕಾರ್ತಿಕ್‌ ಚೆನ್ನೋಜಿರಾವ್‌ ಅವರ ಸಂಗೀತ ಉಜ್ವಲ್ ಚಂದ್ರ ಅವರ ಸಂಕಲನವಿದೆ. ಒಂಕಾರ್ ಅವರು ಸಿನಿಮಾ ನಿರ್ಮಾಣ ಮಾಡಿದ್ದು ಇದರ ಜೊತೆಗೆ ವೀರೇಂದ್ರ ಕಾಂಚನ್‌, ಕೆ ಗೌತಮಿ ರೆಡ್ಡಿ ಅವರು ನಿರ್ಮಾಣಕ್ಕೆ ಸಹಕರಿಸಿದ್ದಾರೆ.

ಇನ್ನು ನವೀನ್ ಶಂಕರ್ ಹಾಗೂ ಐಶಾನಿ ಶೆಟ್ಟಿ ಹೊರತಾಗಿ ಯಶ್ ಶೆಟ್ಟಿ ,ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡ್ ಓಂಕಾರ್,ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ ತಾರಾಗಣದಲ್ಲಿದ್ದಾರೆ.