- April 26, 2022
ಗಂಗಾ ಆಗಿ ಮೋಡಿ ಮಾಡಲಿದ್ದಾರೆ ಧನ್ಯಾ ರಾಮ್ ಕುಮಾರ್


ರಾಜ್ ಕುಮಾರ್ ಕುಟುಂಬದ ಕುಡಿ ಧನ್ಯಾ ರಾಮ್ ಕುಮಾರ್ “ನಿನ್ನ ಸನಿಹಕೆ” ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ವಿಚಾರ ಸಿನಿಪ್ರಿಯರಿಗೆ ತಿಳಿದೇ ಇದೆ. ಮೊದಲ ಚಿತ್ರದಲ್ಲಿ ಸಿನಿಮಾ ವೀಕ್ಷಕರ ಗಮನ ಸೆಳೆದಿರುವ ಧನ್ಯಾ ಈಗ ಮತ್ತೊಂದು ಹೊಸ ಸಿನಿಮಾದಲ್ಲಿ ನಟಿಸುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇದರ ಜೊತೆಗೆ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಧನ್ಯಾ ಅವರು ನಟಿಸುತ್ತಿರುವ ಮುಂದಿನ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ.




ವಿಕ್ಕಿ ವರುಣ್ ನಿರ್ದೇಶನ ಹಾಗೂ ನಟಿಸುತ್ತಿರುವ ಕಾಲಾ ಪತ್ತರ್ ಚಿತ್ರದಲ್ಲಿ ಧನ್ಯಾ ರಾಮ್ ಕುಮಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಡಾ. ರಾಜ್ ಕುಮಾರ್ ಅವರ ಜನ್ಮದಿನದಂದು ಧನ್ಯಾ ಅವರ ಗಂಗಾ ಪಾತ್ರದ ಲುಕ್ ರಿವೀಲ್ ಆಗಿದ್ದು ಹಳ್ಳಿ ಹುಡುಗಿ ಗಂಗಾ ಪಾತ್ರದಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ ಧನ್ಯಾ.




ಗೀತಾ ಶಿವರಾಜ್ ಕುಮಾರ್ ಅರ್ಪಣೆಯಲ್ಲಿ ಮೂಡಿ ಬರುತ್ತಿರುವ ಕಾಲಾ ಪತ್ತರ್ ಕಮರ್ಷಿಯಲ್ ಆಕ್ಷನ್ ಕಂಟೆಂಟ್ ಜೊತೆ ಮುದ್ದಾದ ಲವ್ ಸ್ಟೋರಿ ಹೊಂದಿದೆ. ಧನ್ಯಾ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಮಧ್ಯಮ ವರ್ಗದ ಹೆಣ್ಣು ಮಗಳಾಗಿ ಕಾಣಿಸಿಕೊಂಡಿದ್ದಾರೆ.




ಚಿತ್ರದ ಶೂಟಿಂಗ್ ಮುಗಿಸಿರುವ ಚಿತ್ರ ಇದೇ ಜೂನ್ ನಲ್ಲಿ ತೆರೆಗೆ ಬರಲಿದೆ. ಸತ್ಯಪ್ರಕಾಶ್ ಬರೆದಿರುವ ಕಥೆಗೆ ವಿಕ್ಕಿ ವರುಣ್ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕಿದೆ.








