• January 20, 2022

ಡಿವೋರ್ಸ್ ವಿಚಾರವಾಗಿ ಮೌನ ಮುರಿದ ಧನುಷ್ ತಂದೆ

ಡಿವೋರ್ಸ್ ವಿಚಾರವಾಗಿ ಮೌನ ಮುರಿದ ಧನುಷ್ ತಂದೆ

ನಟ ಧನುಷ್ ಹಾಗೂ ಐಶ್ವರ್ಯಾ ತಾವಿಬ್ಬರೂ ವಿಚ್ಛೇದನ ಪಡೆದಿರುವುದಾಗಿ ಕಳೆದ ವಾರವಷ್ಟೇ ಸಾಮಾಜಿಕ ಜಾಲತಾಣದ ಮೂಲಕ ಅನೌನ್ಸ್ ಮಾಡಿದ್ದರು… ಹದಿನೆಂಟು ವರ್ಷಗಳ ಸುಂದರ ಸಂಸಾರಕ್ಕೆ ಇಬ್ಬರು ಕೂಡ ಫುಲ್ ಸ್ಟಾಪ್ ಇಟ್ಟು . ಇನ್ನು ಮುಂದೆ ಪ್ರತ್ಯೇಕವಾಗಿ ಜೀವನ ನಡೆಸುವುದಾಗಿ ತಿಳಿಸಿದ್ದರು …

ಧನುಶ್ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ವಿಚ್ಛೇದನ ವಿಚಾರವನ್ನ ಅನೌನ್ಸ್ ಮಾಡಿದ್ರೆ… ಐಶ್ವರ್ಯ ಅದೇ ಪೋಸ್ಟ್ ನ್ನು ಶೇರ್ ಮಾಡುವ ಮೂಲಕ ಇಬ್ಬರ ಅಭಿಪ್ರಾಯಗಳು ಒಂದೇ ಆಗಿದೆ ಎನ್ನುವುದನ್ನ ವ್ಯಕ್ತಪಡಿಸಿದ್ದರು ..

ಧನುಷ್ ಹಾಗೂ ಐಶ್ವರ್ಯ ವಿಚ್ಚೇದನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧನುಷ್ ಅವರ ತಂದೆ ಧನುಷ್ ಮತ್ತು ಐಶ್ವರ್ಯ ನಡುವೆ ಯಾವಾಗಲೂ ಗಲಾಟೆಗಳು ಆಗುತ್ತಲೇ ಇತ್ತು…ಅವರು ವಿಚ್ಛೇದನ ಪಡೆದಿರುವುದಕ್ಕೆ ಕುಟುಂಬದ ಕಲಹಗಳೇ ಕಾರಣ ಎಂದಿದ್ದಾರೆ ..

ಇನ್ನು ಇತ್ತ ಕಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಧನುಷ್ ಅವರಿಗೆ ನಾಯಕಿಯರ ಜೊತೆ ಇರುವ ನಂಟು ವಿಚ್ಛೇದನಕ್ಕೆ ಕಾರಣ ಎಂದು ಕೇಳಿಬರುತ್ತಿದೆ.. ಅದಷ್ಟೇ ಅಲ್ಲದೆ ಕೆಲವು ವರ್ಷಗಳ ಹಿಂದೆ ಧನುಷ್ ಹಾಗೂ ಶ್ರುತಿ ಹಾಸನ್ ಡೇಟ್ ಮಾಡುತ್ತಿದ್ದಾರೆ ಎಂದು ಗಾಸಿಪ್ ಶುರುವಾಗಿತ್ತು… ಅದಷ್ಟೇ ಅಲ್ಲದೆ ಅಮಲಾ ಪೌಲ್ ಅವರ ಮಾವ ಕೂಡ ತನ್ನ ಮಗನ ಸಂಸಾರ ಹಾಳಾಗಲು ಧನುಷ್ ಕಾರಣ ಎಂದು ಹೇಳಿಕೆ ಕೊಟ್ಟಿದ್ದರು.. ಒಟ್ಟಾರೆ ಇದೆಲ್ಲಾ ಕಾರಣ ಮಧ್ಯೆ ಧನುಷ್ ಹಾಗೂ ಐಶ್ವರ್ಯ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದಾರೆ