- April 12, 2022
ಬಾಲ್ಯದ ಫೋಟೋ ಹಂಚಿಕೊಂಡ ಕಿರುತೆರೆ ನಟಿ ಹೇಳಿದ್ದೇನು ಗೊತ್ತಾ?


ಕಿರುತೆರೆ ನಟಿ ಪ್ರಥಮಾ ಪ್ರಸಾದ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರುತ್ತಾರೆ. ಇನ್ಸ್ಟಾಗ್ರಾಮ್ ಮೂಲಕ ತಮ್ಮ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರುವ ನಟಿ ಅಪ್ ಡೇಟ್ ಗಳನ್ನು ಯಾವಾಗಲೂ ಹಂಚಿಕೊಳ್ಳುತ್ತಾರೆ.


ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಬಾಲ್ಯದ ಫೋಟೋವನ್ನು ಶೇರ್ ಮಾಡಿದ್ದಾರೆ. ತನ್ನ ತಾಯಿ ವಿನಯಾ ಪ್ರಸಾದ್ ಅವರೊಂದಿಗೆ ಇರುವ ಫೋಟೋ ಹಂಚಿಕೊಂಡಿರುವ ಪ್ರಥಮಾ ಅವರೊಂದಿಗೆ ಅವರ ಪ್ರೀತಿಯ ನಾಯಿ ಕೂಡಾ ಬಳಿ ಇದೆ.


ಫೋಟೋ ಶೇರ್ ಮಾಡಿ ಬರೆದುಕೊಂಡಿರುವ ಪ್ರಥಮಾ “ನನಗೆ ಪ್ರೀತಿಯ ನೆನಪುಗಳನ್ನು ಹಂಚಿಕೊಳ್ಳಲು ಇಷ್ಟ. ವಿಶೇಷವಾಗಿ ನನ್ನ ಹೀರೋನೊಂದಿಗೆ. ನನ್ನ ತಾಯಿ ಬೇಸರದ ದಿನಗಳಲ್ಲಿ ಉತ್ತಮ ಚಿಕಿತ್ಸೆ” ಎಂದಿದ್ದಾರೆ.




ಪ್ರಥಮಾ ಪ್ರಸಾದ್ ನಟಿ ವಿನಯಾ ಪ್ರಸಾದ್ ಅವರ ಪುತ್ರಿ. ತಾಯಿಯ ಬಗ್ಗೆ ಮಾತನಾಡಿರುವ ಪ್ರಥಮಾ “ಮೊದಲಿನಿಂದಲೂ ನನ್ನ ಆಸಕ್ತಿಗೆ ತಾಯಿ ಪ್ರೋತ್ಸಾಹ ನೀಡಿದರು. ನೃತ್ಯ ಅಥವಾ ಇತರ ಚಟುವಟಿಕೆಗಳು ಆಗಿರಬಹುದು ಬಾಲ್ಯದಿಂದಲೇ ನನಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರು ನನ್ನ ಪ್ರೋತ್ಸಾಹ ನೀಡಿದ್ದಾರೆ.” ಎಂದಿದ್ದಾರೆ.








