• November 14, 2021

ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಡಿ ಬಾಸ್

ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಡಿ ಬಾಸ್

ಕೃಷಿ ಇಲಾಖೆಯ ರಾಯಭಾರಿಯಾಗಿರುವ  ಚಾಲೆಂಜಿಂಗ್ ಸ್ಟಾರ್ ದರ್ಶನ್  ರೈತರೊಂದಿಗೆ ಒಂದು ದಿನ” ಕಾರ್ಯಕ್ರಮದಲ್ಲಿ ಇಂದು ಭಾಗಿ ಆಗಿದ್ದಾರೆ…ಈಗಾಗಲೇ ರೈತರ ಪರವಾದ ಸಮಾರಂಭ ಸಭೆಯಲ್ಲಿ  ದರ್ಶನ್ ಭಾಗಿ ಆಗಿದ್ದು ಇಂದು ಹಾವೇರಿಯ ಹಿರೇಕೆರೂರ್ ನಲ್ಲಿ ರೈತರ ಜೊತೆ ಕಾಣಿಸಿಕೊಂಡಿದ್ದಾರೆ

ರೈತರ ಬದುಕನ್ನು ಇನ್ನಷ್ಟು ಹಸನು ಮಾಡಲು, ಅವರ ಸಂಕಷ್ಟ ಸಮಸ್ಯೆಗಳನ್ನು ಖುದ್ದಾಗಿ ಕೇಳಿ ಪರಿಹರಿಸುವ ಮೂಲಕ ಅನ್ನದಾತನದಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರೊಂದಿಗೆ ಒಂದು ದಿನ ಎಂಬ ವಿನೂತನ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. 

ಇಂದು ಪೂರ್ತಿ ದಿನ ಈ ಕಾರ್ಯಕ್ರಮ ನಡೆಯಲಿದ್ದು ದರ್ಶನ್ ಹಾಗೂ ಕೃಷಿ ಸಚಿವರು ಹೀರೆಕೆರೂರಿನ ಸುತ್ತಮುತ್ತಲಿರೋ ಸಾಕಷ್ಟು ಹಳ್ಳಿಗಳಿಗೆ ಬೇಟಿಕೊಟ್ಟು ರೈತರ ಸಮಸ್ಯೆಗಳನ್ನು ಆಲಿಸಲಿದ್ದಾರೆ..ಸಂಜೆ ರೈತರಿಗಾಗಿ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದ್ದು ಅದರಲ್ಲಿಯೂ ಚಾಲೆಂಜಿಂಗ್ ಸ್ಟಾರ್ ಭಾಗಿ ಆಗಿ ಸಮಾರಂಭದ ಮೆರಗು ಹೆಚ್ಚು ಮಾಡಲಿದ್ದಾರೆ…