- February 14, 2022
20 ವರ್ಷದ ನಂತರವೂ ಲಕ್ಕಿ ಹೀರೋಯಿನ್ ಮರೆಯದ ಚಾಲೆಂಜಿಂಗ್ ಸ್ಟಾರ್


ನಟ ದರ್ಶನ್ ಅಭಿನಯದ ಮೆಜೆಸ್ಟಿಕ್ ಸಿನಿಮಾ ಬಿಡುಗಡೆಯಾಗಿ ಇಪತ್ತು ವರ್ಷ ತುಂಬಿದೆ…ಇದೇ ಸಂಭ್ರಮದಲ್ಲಿ ಚಿತ್ರತಂಡ ಇತ್ತೀಚೆಗಷ್ಟೆ ಆಚರಿಸಿತು…


ಮೆಜೆಸ್ಟಿಕ್ ಸಿನಿಮಾ ದರ್ಶನ್ ಅವರ ಕೆರಿಯರ್ ಗೆ ಸಖತ್ ಸಪೋರ್ಟ್ ಮಾಡಿದ್ದು…. ಮೊದಲ ಸಿನಿಮಾದಲ್ಲೇ ದರ್ಶನ್ ಸಕ್ಸಸ್ ಬಾರಿಸಿದ್ರು …ಇತ್ತೀಚೆಗಷ್ಟೇ ಸಿನಿಮಾದ 20ವರ್ಷದ ಸಂಭ್ರಮವನ್ನ ಆಚರಣೆ ಮಾಡಲಾಯ್ತು….ಈ ಸಂದರ್ಭದಲ್ಲಿ ಮಾತನಾಡಿದ ದರ್ಶನ್ ಅಂದಿನ ದಿನಗಳನ್ನು ಮೆಲುಕು ಹಾಕಿದ್ರು… ಸಿನಿಮಾ ಆರಂಭ ಮುಂಚೆಯಿದ್ದ ಕಷ್ಟದ ದಿನಗಳು… ಅವಕಾಶ ಸಿಗುವುದಕ್ಕೆ ಪಟ್ಟ ಕಷ್ಟಗಳು… ಆಗ ಸಹಾಯ ಮಾಡಿದ ವ್ಯಕ್ತಿಗಳು ಹೀಗೆ ಸಾಕಷ್ಟು ವಿಚಾರಗಳನ್ನ ಮಾಧ್ಯಮದ ಮುಂದೆ ಹಂಚಿ ಕೊಂಡರು ..


ಇನ್ನು ಸಿನಿಮಾದ ನಾಯಕಿಯ ಬಗ್ಗೆ ಮಾತನಾಡಿದ ದರ್ಶನ್ ರೇಖಾ ಅವರು ನನಗೆ ಎಂದೆಂದಿಗೂ ಲಕ್ಕಿ ನಟಿ ಎಂದರು…ಈ ವಿಚಾರವನ್ನ ಹೇಳಿಕೊಳ್ಳಲು ನನಗೆ ತುಂಬಾ ಖುಷಿಯಾಗುತ್ತದೆ…. ಮೆಜೆಸ್ಟಿಕ್ ಸಿನಿಮಾದಲ್ಲಿ ತಂಗಾಳಿ ಮೇಲೆ ಹಾಡಿಗೆ ನಾನು ಕಮ್ಮಿ ಅಂದರೂ ಮೂವತ್ತು ರಿಂದ ನಲವತ್ತು ಟೇಕ್ ತೆಗೆದುಕೊಂಡಿದ್ದೆ…ರೀಲ್ ಬೇರೆ ಹೋಗ್ತಾ ಇತ್ತು… ಆದ್ರೂ ನಟಿ ರೇಖಾ ಅವರು ಮಾತ್ರ ದರ್ಶನ್ ನಿಮ್ಮ ಕೈಲಿ ಆಗುತ್ತೆ ಏನೂ ಆಗಲ್ಲ ಅಂತ ಧೈರ್ಯ ತುಂಬಿದರು… ನಟಿ ರೇಖಾ ಮಾಡಿದ ಸಪೋರ್ಟ್ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ ಎಂದರು ..




