• March 4, 2022

ಫಿಲ್ಮ್ ಫೆಸ್ಟಿವಲ್ ವೇದಿಕೆ ಮೇಲೆ ಗರಂ ಆ್ ದರ್ಶನ್

ಫಿಲ್ಮ್ ಫೆಸ್ಟಿವಲ್ ವೇದಿಕೆ ಮೇಲೆ ಗರಂ ಆ್ ದರ್ಶನ್

ನಿನ್ನೆಯಷ್ಟೆ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ ದೊರಕಿದೆ… ಉದ್ಘಾಟನಾ ಸಮಾರಂಭ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ನಟ ದರ್ಶನ್ ಅವರನ್ನ ಆಹ್ವಾನ ಮಾಡಲಾಯಿತು.. ನಟ ದರ್ಶನ್ ಕೂಡ ಕಾರ್ಯಕ್ರಮಕ್ಕೆ ಹಾಜರಾಗಿದ್ದರು‌.. ಇದೇ ಸಂದರ್ಭದಲ್ಲಿ ವೇದಿಕೆ ಹತ್ತುತ್ತಿದ್ದಂತೆ ದರ್ಶನ್ ಫುಲ್ ಗರಂ ಆದರು …

ಹೌದು ದರ್ಶನ್ ಸಿಟ್ಟಾಗುವುದಕ್ಕೆ ಕಾರಣ ಅವರ ಅಭಿಮಾನಿಗಳು… ಈಗಾಗಲೇ ಸಾಕಷ್ಟು ಜನರಿಗೆ ಈ ರೀತಿ ಅನುಭವವಾಗಿದೆ… ದರ್ಶನ್ ಅವರ ಅಭಿಮಾನಿಗಳಿಂದ ಇರಿಸುಮುರಿಸು ಕೂಡ ಉಂಟಾಗಿದೆ ..ಯಾವುದೇ ಕಾರ್ಯಕ್ರಮದಲ್ಲಿ ದರ್ಶನ್ ವೇದಿಕೆ ಏರುತ್ತಿದ್ದಂತೆಯೇ ಅವರ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಜೈಕಾರ ಕೂಗುತ್ತಾರೆ.. ಅದಷ್ಟೇ ಅಲ್ಲದೆ ಬೇರೆ ಗಣ್ಯರು ಮಾತನಾಡುವ ವೇಳೆಯಲ್ಲೂ ಸಹ ಘೋಷಣೆ ಕೂಗಿ ಅವರಿಗೆ ಮುಜುಗರ ಉಂಟು ಮಾಡುತ್ತಾರೆ…

ಅದೇ ರೀತಿ ನಿನ್ನೆ ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟನ ಭಾಷಣ ಮಾಡುವ ಸಂದರ್ಭದಲ್ಲಿ ದರ್ಶನ್ ಅವರಿಗೆ ಎಲ್ಲರೂ ಜೈಕಾರ ಹಾಕಿದ್ರು… ಇದನ್ನ ಕಂಡಂತ ಸಿಎಂ ಅವರು ಸೈಲೆಂಟಾಗಿ ಭಾಷಣ ಅರ್ಧಕ್ಕೆ ಮುಗಿಸಿ ನಡೆದು ಬಿಟ್ಟರು… ಇದರಿಂದ ಬೇಸರವಾದ ದರ್ಶನ್ ಅಭಿಮಾನಿಗಳ ಮೇಲೆ ಕೋಪಗೊಂಡು… ಮಾನ್ಯ ಮುಖ್ಯಮಂತ್ರಿಗಳು ಮಾತನಾಡುವಾಗ ಯಾರೂ ಮಾತನಾಡಬಾರದು… ಅವರಿಗೆ ಅಗೌರವ ತೋರಬಾರದು …ಆಟ ಹುಡುಗಾಟವೆಲ್ಲ ನಂತರದಲ್ಲಿ ಮಾಡಿ ಎಂದು ಅಭಿಮಾನಿಗಳ ವಿರುದ್ಧ ಕೋಪಗೊಂಡರು ..

ಒಟ್ಟಾರೆ ಏನೇ ಆಗಲಿ ಈ ರೀತಿಯ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿದ್ದು ದರ್ಶನ್ ಅವರು ಈ ರೀತಿಯ ಘಟನೆಯಾಗದಂತೆ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಬೇಕು ಎಂಬುದು ನೆಟ್ಟಿಗರ ಅಭಿಪ್ರಾಯ ವಾಗಿದೆ …