• July 12, 2022

ಎಲ್ಲೆಡೆ ಹವಾ ಎಬ್ಬಿಸುತ್ತಿವೆ ‘ಡಾಲಿ’ಯ ಹೊಸ ಸಿನಿಮಾಗಳು.

ಎಲ್ಲೆಡೆ ಹವಾ ಎಬ್ಬಿಸುತ್ತಿವೆ ‘ಡಾಲಿ’ಯ ಹೊಸ ಸಿನಿಮಾಗಳು.

ಕನ್ನಡ ಚಿತ್ರರಂಗದಲ್ಲಿ ಪ್ರಾಯಷಃ ಎಲ್ಲರೂ ಸದಾ ಬ್ಯುಸಿ. ಅದರಲ್ಲೂ ಕೆಲವು ನಟರುಗಳಂತೂ ಒಂದಲ್ಲ ಒಂದು ಚಿತ್ರದಲ್ಲಿ ಕೆಲಸ ಮಾಡುತ್ತಲೇ ಇರುತ್ತಾರೆ. ಇದೇ ರೀತಿ ಸಾಲು ಸಾಲು ಸಿನಿಮಾಗಳನ್ನು ಹೊಂದಿರುವ ನಟರುಗಳಲ್ಲಿ ಡಾಲಿ ಧನಂಜಯ ಪ್ರಮುಖರು. ಸದ್ಯ ‘ಹೊಯ್ಸಳ’da ಚಿತ್ರೀಕರಣದಲ್ಲಿ ಇವರು ಬ್ಯುಸಿ ಇದ್ದರೆ, ಇವರಿಂದ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಕಾಯುತ್ತಿರುವ ಸಿನಿಮಾಗಳೇ ಸಾಲು ನಿಲ್ಲುವಷ್ಟಿವೆ. ಸದ್ಯ ಬಿಡುಗಡೆಗೆ ಸನ್ನಿಹಿತವಾಗಿರುವ ಇವರ ಸಿನಿಮಾಗಳು ಹೊಸ ಹೊಸ ಅಪ್ಡೇಟ್ ಗಳನ್ನು ನೀಡುತ್ತಿವೆ.

ಇದೇ ಆಗಸ್ಟ್ 12ಕ್ಕೆ ತೆರೆಕಾಣುತ್ತಿರುವ ಎಸ್ ರವೀಂದ್ರನಾಥ್ ಅವರ ನಿರ್ದೇಶನದ ‘ಮಾನ್ಸೂನ್ ರಾಗ’ ಸಿನಿಮಾತಂಡ ಹಾಡೊಂದನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ‘ರಾಗ ಸುಧಾ’ ಎಂಬ ಈ ಮಧುರ ಗೀತೆಯನ್ನ ಇಂದು(ಜುಲೈ 12) ಸಂಜೆ 6:03kke ಬಿಡುಗಡೆ ಮಾಡಲಾಗುತ್ತಿದೆ. ಧನಂಜಯ ಹಾಗು ರಚಿತ ರಾಮ್ ಜೋಡಿಯಾಗಿ ನಟಿಸುತ್ತಿರೋ ಈ ಸಿನಿಮಾಗೆ ಅನೂಪ್ ಸೀಳಿನ್ ಅವರ ಸಂಗೀತವಿದೆ. ಈಗಾಗಲೇ ಟೀಸರ್ ನಿಂದ ಭರವಸೆ ಹುಟ್ಟಿಸಿರೋ ಸಿನಿಮಾದ ಹಾಡಿನ ಮೇಲೆ ಪ್ರೇಕ್ಷಕರ ಕಣ್ಣಿದೆ.

ಇನ್ನೂ ಸೆಪ್ಟೆಂಬರ್ 9ಕ್ಕೆ ಬೆಳ್ಳಿತೆರೆ ಎರುತ್ತಿರುವ ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ ಸಿನಿಮಾದಲ್ಲಿನ ಎರಡು ಪ್ರಮುಖ ಪಾತ್ರಗಳ ಹೆಸರನ್ನು ಪೋಸ್ಟರ್ ಗಳ ಮೂಲಕ ಚಿತ್ರತಂಡ ಹೊರಹಾಕಿದ್ದು, ಈ ಹೆಸರುಗಳು ಸದ್ಯ ಎಲ್ಲರ ಕುತೂಹಲ ಕೆರಳಿಸಿದೆ. ಜೈಲಿನಲ್ಲಿರುವ ಅವಳಿ ಕೈದಿಗಳು ಎಂದು ಪರಿಚಯಿಸುತ್ತ ಧನಂಜಯ ಅವರ ಪಾತ್ರವನ್ನು ‘ಹೀರೋಶಿಮಾ’ ಎಂದೂ, ಯಶ್ ಶೆಟ್ಟಿ ಅವರ ಪಾತ್ರವನ್ನು ‘ನಾಗಸಾಕಿ’ ಎಂದೂ ಪೋಸ್ಟರ್ ಗಳ ಮೂಲಕ ತಿಳಿಸಿದೆ ಚಿತ್ರತಂಡ. ‘ಹೀರೋಶಿಮಾ-ನಾಗಸಾಕಿ’ ಎರಡು ಅವಳಿ ನಗರಗಳು. ಹಾಗಾಗಿ ಈ ಹೆಸರು ಎಲ್ಲರ ಮನಸೆಳೆದಿದೆ. ಕುಶಾಲ್ ಗೌಡ ಅವರ ನಿರ್ದೇಶನದ ಈ ಸಿನಿಮಾಗೆ ಅರ್ಜುನ್ ಜನ್ಯ ಅವರ ಸಂಗೀತವಿದ್ದು, ಅದಿತಿ ಪ್ರಭುದೇವ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

2022ರಲ್ಲಿ ಅತೀ ಹೆಚ್ಚು ಸಿನಿಮಾ ಬಿಡುಗಡೆ ಕಂಡ ಕನ್ನಡದ ನಟ ಎನಿಸಿಕೊಂಡಿರುವ ಧನಂಜಯ ಅವರಿಗೆ ವರ್ಷ ಮುಗಿಯಲು ಆರು ತಿಂಗಳು ಉಳಿದಿರುವಾಗ ಸುಮಾರು ಐದು ಚಿತ್ರಗಳು ತೆರೆಕಾಣಲು ಸಿದ್ದವಾಗಿವೆ. ಸದ್ಯ ಇವರ ನಟನೆಯ ‘ಬೈರಾಗಿ’ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ.