• April 25, 2022

ಅಮೃತಾ ಅಯ್ಯಂಗಾರ್ ಹ್ಯಾಟ್ರಿಕ್

ಅಮೃತಾ ಅಯ್ಯಂಗಾರ್ ಹ್ಯಾಟ್ರಿಕ್

ನಟಿ ಅಮೃತಾ ಅಯ್ಯಂಗಾರ್ ಮೂರನೇ ಬಾರಿಗೆ ನಟ ಧನಂಜಯ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೊಯ್ಸಳ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಧನಂಜಯ ಹಾಗೂ ಅಮೃತಾ ಅಯ್ಯಂಗಾರ್ ಈ ಹಿಂದೆ ಪಾಪ್ ಕಾರ್ನ್ ಮಂಕಿ ಟೈಗರ್ ಹಾಗೂ ಬಡವ ರಾಸ್ಕಲ್ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದರು. ಗೀತಾ ಚಿತ್ರ ನಿರ್ದೇಶಿಸಿದ್ದ
ವಿಜಯ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

” ಈ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಕಾತರರಳಾಗಿದ್ದೇನೆ. ಇದು ಧನಂಜಯ ಅವರೊಂದಿಗೆ ಮೂರನೇ ಸಿನಿಮಾ. ಮೊದಲ ಸಿನಿಮಾದಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದೆ. ಎರಡನೇ ಸಿನಿಮಾ ನನಗೆ ಖ್ಯಾತಿ ತಂದುಕೊಟ್ಟಿತು. ಜನ ನಮ್ಮ ಜೋಡಿಯನ್ನು ಇಷ್ಟಪಟ್ಟರು. ಈ ಬಾರಿ ಕಥೆ ಗಂಭೀರವಾಗಿದ್ದು ನಾನು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದೇನೆ” ಎಂದಿದ್ದಾರೆ.

“ಇದು ಸೂಕ್ಷ್ಮ ವಿಷಯಗಳನ್ನು ವಿವರಿಸುವ ಪೋಲಿಸ್ ಡ್ರಾಮಾ. ಇಲ್ಲಿ ನನ್ನ ಪಾತ್ರ ಪ್ರಬುದ್ಧವಾಗಿದೆ. ಧನಂಜಯ ಅವರು ನಿರ್ವಹಿಸುವ ಪೋಲಿಸ್ ಅಧಿಕಾರಿ ಪಾತ್ರಕ್ಕೆ ಆಂಕರ್ ನಂತಿರುವ ಪಾತ್ರವಾಗಿದೆ. ಈ ಚಿತ್ರಕ್ಕೆ ಮೊನ್ನೆಯಷ್ಟೇ ‌ಸರಳವಾಗಿ ಮೂಹೂರ್ತ ನೆರವೇರಿದೆ. ಈ ಬೇಸಿಗೆಯಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ. ಕಾರ್ತಿಕ್ ಗೌಡ ಹಾಗೂ ಯೋಗಿ. ಜೆ ರಾಜ್ ಅವರೊಂದಿಗೆ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ. ಬಡವ ರಾಸ್ಕಲ್ ಚಿತ್ರದ ಮುಖ್ಯ ಭಾಗವಾಗಿದ್ದ ಅವರು ಈಗ ಸ್ನೇಹಿತರಿಗಿಂತಲು ಹೆಚ್ಚು” ಎಂದಿದ್ದಾರೆ.

ಸದ್ಯ ಅಬ್ಬಬ್ಬಾ ಸಿನಿಮಾದ ರಿಲೀಸ್ ಗೆ ಕಾಯುತ್ತಿರುವ ಅಮೃತಾ “ಇದು ನನ್ನ 2022ರ ಮೊದಲ ಸಿನಿಮಾ. ನನ್ನ ತಾಳ್ಮೆಗೆ ಫಲ ಸಿಕ್ಕಿರುವುದಕ್ಕೆ ಖುಷಿಯಾಗುತ್ತಿದೆ. ನನ್ನ ಉತ್ತಮ ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಜನ ನನ್ನ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಉತ್ತಮ ಸಿನಿಮಾಗಾಗಿ ಕಾಯುತ್ತಿರುವೆ” ಎಂದಿದ್ದಾರೆ.