• April 4, 2022

ಪರಭಾಷೆಯ ದೊಡ್ಡ ಸಿನಿಮಾದ ಪಾತ್ರವೊಂದನ್ನ ತಿರಸ್ಕರಿಸಿದ್ದಾರಾ ಡಿ ಬಾಸ್!!!

ಪರಭಾಷೆಯ ದೊಡ್ಡ ಸಿನಿಮಾದ ಪಾತ್ರವೊಂದನ್ನ ತಿರಸ್ಕರಿಸಿದ್ದಾರಾ ಡಿ ಬಾಸ್!!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾರಿಗೆ ಗೊತ್ತಿಲ್ಲ. ಕರುನಾಡ ಸ್ಟಾರ್ ನಟರಲ್ಲಿ ಅತಿ ದೊಡ್ಡ ಅಭಿಮಾನಿ ಬಳಗದ ‘ಒಡೆಯ’ ದರ್ಶನ್ ಅವರು ಎಂದರೆ ತಪ್ಪಾಗಲಾಗದು. ದರ್ಶನ್ ಅವರ ಹೊಸ ಸಿನಿಮಾ ಯಾವುದಾದರೂ ಬಿಡುಗಡೆಯಾದಲ್ಲಿ ಅಭಿಮಾನಿ ಸಾಗರವೇ ಹರಿದು ಬಂದು ಚಿತ್ರಮಂದಿರವನ್ನ ತುಂಬುತ್ತದೆ. ಕನ್ನಡ ಮಾತ್ರವಲ್ಲ ಪರಭಾಷೆಯಲ್ಲೂ ‘ದಾಸ’ನ ಅಭಿಮಾನಿ ಬಳಗವೇನು ಚಿಕ್ಕದಲ್ಲ. ಆದರೂ ದರ್ಶನ್ ಅವರು ಒಂದೇ ಒಂದು ಪರಭಾಷ ಚಿತ್ರದಲ್ಲೂ ಈ ವರೆಗೆ ನಟಿಸಿಲ್ಲ. ಈಗ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ಡಿ ಬಾಸ್ ತಮ್ಮನ್ನೇ ಹುಡುಕಿಕೊಂಡು ಬಂದ ದೊಡ್ಡ ಸಿನಿಮಾದ ಪಾತ್ರವೊಂದನ್ನ ತಿರಸ್ಕರಿಸಿದ್ದರಂತೆ.

ದಕ್ಷಿಣ ಭಾರತದಿಂದ ಬಂದು ಪ್ರಪಂಚದೆಲ್ಲೆಡೆ ಸದ್ದುಮಾಡಿದ ಚಿತ್ರ ‘ಪುಷ್ಪ’. ಮೊದಲ ಭಾಗದಿಂದ ಬಾರಿ ಯಶಸ್ಸು ಕಂಡಿರುವ ಚಿತ್ರತಂಡ ಎರಡನೇ ಭಾಗವನ್ನ ಸದ್ಯದಲ್ಲೇ ಸಿದ್ದಪಡಿಸಲಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಹಾಗು ರಶ್ಮಿಕಾ ಮಂದಣ್ಣ ನಾಯಕ-ನಾಯಕಿಯಾಗಿ ನಟಿಸಿ ಪ್ರೇಕ್ಷಕರ ಮನಸೆಳೆದಿದ್ದರು. ಚಿತ್ರದಲ್ಲಿದ್ದ ಹಲವಾರು ಪ್ರಮುಖ ಪಾತ್ರಗಳಲ್ಲಿ ಜಾಲಿರೆಡ್ಡಿ ಪಾತ್ರ ಕೂಡ ಒಂದು. ನಮ್ಮ ಕನ್ನಡದ ಧನಂಜಯ ಅವರು ಅತ್ತ್ಯುತ್ತಮವಾಗಿ ಅಭಿನಯಿಸಿದಂತ ಈ ಪಾತ್ರಕ್ಕೆ ಸುಕುಮಾರ್ ತಲೆಯಲ್ಲಿದ್ದ ಮೊದಲ ನಟ ಧನಂಜಯ ಅವರಲ್ಲ. ಬದಲಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಂತೆ!!!

ಸಿನಿಮಾ ಚಿತ್ರೀಕರಣದ ಸಂಧರ್ಭದಲ್ಲಿ ಬೆಂಗಳೂರಿಗೆ ಬಂದಿದ್ದ ಸುಕುಮಾರ್ ಅವರು ದರ್ಶನ್ ಅವರನ್ನು ಭೇಟಿಯಾಗಿದ್ದಾರಂತೆ. ಆ ಸಂಧರ್ಭದಲ್ಲಿ ಈ ಘಟನೆ ಹಲವಾರು ಪುಕಾರುಗಳನ್ನೆತ್ತಿತ್ತು. ಸುಕುಮಾರ್ ನಟನೆಯಲ್ಲಿ ದರ್ಶನ್ ಅವರು ನಾಯಕರಾಗಿ ನಟಿಸಲಿದ್ದಾರೆ ಎಂದು ಕೂಡ ಒಂದಷ್ಟು ಜನ ಸುದ್ದಿ ಹುಟ್ಟಿಸಿದ್ದರು. ಆದರೀಗ ಸತ್ಯಾಂಶ ಹೊರಬಿದ್ದಿದೆ. ಸುಕುಮಾರ್ ಅವರು ಡಿ ಬಾಸ್ ಅನ್ನು ಜಾಲಿರೆಡ್ಡಿ ಪಾತ್ರದಲ್ಲಿ ನಟಿಸುವ ಬಗ್ಗೆ ಕೇಳಿಕೊಂಡಿದ್ದರಂತೆ. ಆದರೆ ದರ್ಶನ್ ಅವರು ಒಪ್ಪದ ಕಾರಣ ಸುಕುಮಾರ್ ಖಾಲಿ ಕೈಯಲ್ಲಿ ಮರಳಬೇಕಾಯ್ತು. ಸದ್ಯ ಚಂದನವನದಲ್ಲಿ ಕೇಳಿಬರುತ್ತಿರೋ ಸುದ್ದಿಯನ್ನು ನಂಬುವುದಾದರೆ, ಸುಕುಮಾರ್ ಅವರ ನಿರ್ದೇಶನದಲ್ಲಿ ದರ್ಶನ್ ನಾಯಕನಟರಾಗಿ ನಟಿಸಲಿದ್ದಾರಂತೆ. ಆದರೆ ಎಂದು? ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರ ಯಾರ ಬಳಿಯೂ ಇಲ್ಲ.