• March 27, 2022

ಕೆಜಿಎಫ್ ಟ್ರೈಲರ್ ಲಾಂಚ್: ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ರೋಮಾಂಚನ.

ಕೆಜಿಎಫ್ ಟ್ರೈಲರ್ ಲಾಂಚ್: ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ರೋಮಾಂಚನ.

ಏಪ್ರಿಲ್ 14ರಂದು ಪ್ರಪಂಚಾದಾದ್ಯಂತ ತೆರೆಕಾಣುತ್ತಿರೋ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ರಾಕಿ ಭಾಯ್ ನಾಯಕತ್ವದ ನರಾಚಿಯ ತುಣುಕೊಂದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಅತಿನಿರೀಕ್ಷಿತರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರೋ ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ತಯಾರಿಗಳು ಭರದಿಂದ ಸಾಗುತ್ತಿವೆ.

ಈಗಾಗಲೇ ತಿಳಿದಿರುವ ಹಾಗೆ ಭಾರತದ ಅತ್ಯಂತ ವಿಜೃಂಭಣೆಯ ಈ ಟ್ರೈಲರ್ ರಿಲೀಸ್ ಇವೆಂಟ್ ಅನ್ನು ಬಾಲಿವುಡ್ ನ ಖ್ಯಾತ ನಿರ್ದೇಶಕ ನಿರ್ಮಾಪಕರಾದಂತ ಕರಣ್ ಜೋಹಾರ್ ನಡೆಸಿಕೊಡಲಿದ್ದು, ಕರುನಾಡ ಚಕ್ರವರ್ತಿ ಶಿವಣ್ಣ ಮುಖ್ಯ ಅತಿಥಿಯಾಗಲಿದ್ದಾರೆ. ಬೇರೆ ಬೇರೆ ಭಾಷೆಯ ಟ್ರೈಲರ್ ಗಳನ್ನು ಬೇರೆ ಬೇರೆ ಭಾಷೆಗಳಲ್ಲಿ ಡಿಜಿಟಲ್ ಜಾಲಗಳಲ್ಲಿ ಬಿಡುಗಡೆ ಮಾಡುತ್ತಿರೋ ಗಣ್ಯರ ಮಾಹಿತಿಯನ್ನು ಈಗಾಗಲೇ ಹೊಂಬಾಳೆ ಬಿಟ್ಟುಕೊಟ್ಟಿದೆ. ಮೂಲಗಳ ಪ್ರಕಾರ ಕನ್ನಡ ಭಾಷೆಯ ಟ್ರೈಲರ್ ಅನ್ನು ಶಿವಣ್ಣನವರೇ ಹೊರತರಲಿದ್ದಾರೆ. ಹಿಂದಿ ಭಾಷೆಯಲ್ಲಿ ನಟ-ನಿರ್ಮಾಪಕರಾದ ಫರ್ಹನ್ ಅಖ್ತರ್ ಅವರು ಬಿಡುಗಡೆ ಮಾಡಿದರೆ, ತೆಲುಗಿನಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರಿಂದ ಟ್ರೈಲರ್ ಬಿಡುಗಡೆಯಾಗಲಿದೆ. ಇನ್ನು ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಹಾಗು ತಮಿಳಿನಲ್ಲಿ ನಟ ಸೂರ್ಯ ಕೆಜಿಎಫ್ ನ ಬಹುನಿರೀಕ್ಷಿತ ಟ್ರೈಲರ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಬೆಂಗಳೂರಿನಲ್ಲಿ ಈ ಬೃಹತ್ ಕಾರ್ಯಕ್ರಮಕ್ಕೆ ಭರದಿಂದ ಸಿದ್ಧತೆಗಳು ಸಾಗುತ್ತಿದ್ದು, ಗಣ್ಯರುಗಳಲ್ಲಿ ಹಲವರು ಈಗಾಗಲೇ ಹಾಜರಾಗಿದ್ದಾರೆ. ಕೆಜಿಎಫ್ ನ ‘ಅಧೀರ’ ಸಂಜಯ್ ದತ್, ಹಾಗು ಮಲಯಾಳಂ ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ಅವರು ಈಗಾಗಲೇ ಬೆಂಗಳೂರಿಗೆ ಬಂದು ಹೊಂಬಾಳೆ ಸಂಸ್ಥೆಯವರನ್ನು ಜೊತೆಯಾಗಿದ್ದಾರೆ. ಸಂಜೆ 6:40ಕ್ಕೆ ಸರಿಯಾಗಿ ಬಿಡುಗಡೆಗೊಳ್ಳಲಿರೋ ಈ ಟ್ರೈಲರ್ ಗಾಗಿ ಪ್ರಪಂಚದಾದ್ಯಂತ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ.