• April 1, 2022

‘ವಿಕ್ರಾಂತ್ ರೋಣ’: ಟೀಸರ್ ಬಿಡುಗಡೆಗೆ ಕ್ಷಣಗಣನೆ ಆರಂಭ..

‘ವಿಕ್ರಾಂತ್ ರೋಣ’: ಟೀಸರ್ ಬಿಡುಗಡೆಗೆ ಕ್ಷಣಗಣನೆ ಆರಂಭ..

ದಿನದಿನಕ್ಕೂ ತಮ್ಮ ಚಿತ್ರದೆಡೆಗೆ ಪ್ರೇಕ್ಷಕರಿಗಿದ್ದ ರೋಮಾಂಚನವನ್ನ ಹೆಚ್ಚಿಸುತ್ತಿದ್ದ ಚಿತ್ರತಂಡವೆಂದರೆ ಅದುವೇ ‘ವಿಕ್ರಾಂತ್ ರೋಣ’. ಸೆಟ್ಟೇರಿದಾಗಿನಿಂದ ತನ್ನಲ್ಲಿದ್ದ ಒಂದಲ್ಲ ಒಂದು ಅಂಶಗಳಿಂದ ಸುದ್ದಿಯಲ್ಲಿದ್ದ ಈ ಚಿತ್ರ ಈಗ ಮತ್ತೆ ಸುದ್ದಿಯಲ್ಲಿದೆ. ಬಹಳ ಹಿಂದೆಯೇ ಬಿಡುಗಡೆಗೆ ಸಿದ್ದವಾಗಿದ್ದ ಚಿತ್ರ ಕೋರೋನ ಕಾರಣಗಳಿಂದ ಮುಂದೆಕ್ಕೆ ಸಾಗುತ್ತಲೇ ಇತ್ತು. ಈ ಸಂಧರ್ಭದಲ್ಲಿ ಚಿತ್ರತಂಡ ಚಿತ್ರಕ್ಕೆ ಬೇಕಾದ ಅಗತ್ಯ ಬದಲಾವನೆಗಳನ್ನು ಮಾಡಿಕೊಂಡು ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ನಾಳೆ(ಏಪ್ರಿಲ್ 2) ಸಿನಿಮಾದ ಬಿಡುಗಡೆ ದಿನಾಂಕವನ್ನ ಪ್ರೇಕ್ಷಕ ಬಂಧುಗಳಿಗೆ ತಿಳಿಸೋ ಟೀಸರ್ ಒಂದು ಬಿಡುಗಡೆಯಾಗಲಿದ್ದು ಮತ್ತೊಂದು ಅತ್ತ್ಯುತ್ತಮ ಟೀಸರ್ ನೋಡಲು ಹಾಗು ರಿಲೀಸ್ ದಿನಾಂಕವನ್ನ ತಿಳಿದುಕೊಳ್ಳಲು ಜನಮಾನಸ ಕಾತರದಿಂದ ಕಾಯುತ್ತಿದೆ.

ಏಪ್ರಿಲ್ 2ರ ಬೆಳಿಗ್ಗೆ 9:55ಕ್ಕೆ ಬಿಡುಗಡೆ ದಿನಾಂಕವನ್ನ ಅನಾವರಣಗೊಳಿಸುತ್ತೇವೆ ಎಂದು ಘೋಷಿಸಿರುವ ಚಿತ್ರತಂಡ, ಬಿಡುಗಡೆಗಾಗಿ ಗಣ್ಯರ ಗಣವನ್ನೇ ಒಟ್ಟುಮಾಡಾತೊಡಗಿದೆ. ಭಾರತದ ಪಂಚಾಭಾಷೆಗಳ ಜೊತೆಗೆ ಇಂಗ್ಲೀಷ್ ಭಾಷೆಯಲ್ಲೂ ಕೂಡ ಡಬ್ ಆಗಿ ಬಿಡುಗಡೆಯಾಗುತ್ತಿರುವ ಚಿತ್ರ ಇದಾಗಿದ್ದು, ಬೇರೆ ಬೇರೆ ಭಾಷೆಗಳಲ್ಲಿ ಆಯಾ ಚಿತ್ರರಂಗದ ಹೆಸರಾಂತ ನಟರುಗಳು ಟೀಸರ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಮಲಯಾಳಂ ಟೀಸರ್ ಅನ್ನು ಮೋಹನ್ ಲಾಲ್ ಅವರು ಬಿಡುಗಡೆಗೊಳಿಸಿದರೆ, ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರು ಟೀಸರ್ ಅನ್ನು ಜನರೆದುರಿಗೆ ತರಲಿದ್ದಾರೆ. ತಮಿಳು ಭಾಷೆಯಲ್ಲಿ ಸಿಲಂಬರಸನ್ ಅವರಿಂದ ಬಿಡುಗಡೆಯದರೆ, ಹಿಂದಿ ಭಾಷೆಯ ಟೀಸರ್ ಅನ್ನು ಸಲ್ಮಾನ್ ಖಾನ್ ಅವರು ಬಿಡುಗಡೆಗೊಳಿಸಲಿದ್ದಾರೆ. ಬಾದ್ಶಾಹ್ ಕಿಚ್ಚ ಸುದೀಪ್ ಅವರಿಗೆ ಆತ್ಮೀಯರಾಗಿರುವ ಈ ನಾಲ್ವರು ಸ್ಟಾರ್ ಗಳು ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಟೀಸರ್ ಅನ್ನು ಹೊರತರಲಿದ್ದಾರೆ.

ಈ ಹಿಂದೆ ಫೆಬ್ರವರಿ 2ರಂದು ಚಿತ್ರವನ್ನ ಬೆಳ್ಳಿತೆರೆಮೇಲೆ ತರುತ್ತೇವೆ ಎಂದಿದ್ದ ಚಿತ್ರತಂಡಕ್ಕೆ ಕೋರೋನ ಅಡ್ಡಗಾಲಿಟ್ಟಿತ್ತು. ಆದರೀಗ ಮುಹೂರ್ತ ಕೂಡಿಬಂದಿದ್ದು, ಏಪ್ರಿಲ್ 2ರಂದು ಬಿಡುಗಡೆಗೊಳ್ಳಲಿರೋ ಟೀಸರ್ ನಲ್ಲಿ ರಿಲೀಸ್ ದಿನಾಂಕವನ್ನ ಚಿತ್ರತಂಡ ಘೋಷಿಸಲಿದೆ. ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜೊತೆಗೆ ನೀತಾ ಅಶೋಕ್ ನಾಯಕಿಯಾಗಿ ನಟಿಸಿದ್ದಾರೆ. ನಿರೂಪ್ ಭಂಡಾರಿ, ಮಧುಸೂದನ್ ರಾವ್, ಜಾಕ್ವೆಲಿನ್ ಫೆರ್ನಾಂಡಿಸ್ ಅವರು ಕೂಡ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.