• April 30, 2022

ಕಾಫಿ ವಿತ್ ಕರಣ್ ಶೋ ಮತ್ತೆ ಬರಲಿದ್ಯಾ???

ಕಾಫಿ ವಿತ್ ಕರಣ್ ಶೋ ಮತ್ತೆ ಬರಲಿದ್ಯಾ???

ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಟಾಕ್ ಶೋ ಮತ್ತೊಮ್ಮೆ ಆರಂಭವಾಗಲಿದೆ. ಹಾಸ್ಯ, ತಮಾಷೆ, ವಿವಾದಗಳಿಗೆ ಹೆಸರಾಗಿದ್ದ ಈ ಶೋ ಬಗ್ಗೆ ವೀಕ್ಷಕರಿಗೆ ಮಿಶ್ರ ಭಾವವಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಈ ಶೋ ನಲ್ಲಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ಬಾಲಿವುಡ್ ಸ್ಟಾರ್ ಗಳು ಭಾಗವಹಿಸಲಿದ್ದಾರೆ.

ಇದುವರೆಗೂ ಕಾಫಿ ವಿತ್ ಕರಣ್ ಶೋನ ಆರು ಸೀಸನ್ ಗಳು ಪ್ರಸಾರವಾಗಿದೆ. 2020ರಲ್ಲಿ ಈ ಶೋ ಅನ್ನು ಮುಂದೆ ನಿಲ್ಲಿಸಲಾಗುತ್ತದೆ ಎನ್ನಲಾಗಿತ್ತು. ಮುಂದೆ ತಾತ್ಕಾಲಿಕವಾಗಿ ಈ ಶೋ ನಿಂತಿದ್ದು ಆದಷ್ಟು ಶೀಘ್ರದಲ್ಲಿ ಹೊಸ ಸೀಸನ್ ಆರಂಭವಾಗುತ್ತಿದೆ.

ಈ ಬಾರಿ ಹಲವು ಅತಿಥಿಗಳು ಬರಲಿದ್ದು ಕನ್ನಡತಿ ರಶ್ಮಿಕಾ ಮಂದಣ್ಣ ಅದರಲ್ಲಿ ಒಬ್ಬರಾಗಿರುವುದು ವಿಶೇಷ.ಇನ್ನು ಉಳಿದಂತೆ ಅಲಿಯಾ ಭಟ್, ರಣಬೀರ್ ಕಪೂರ್, ವಿಕ್ಕಿ ಕೌಶಲ್, ಕತ್ರೀನಾ ಕೈಫ್, ಕಿಯಾರಾ ಅಡ್ವಾಣಿ ಮುಂತಾದವರು ಆಗಮಿಸಲಿದ್ದಾರೆ. ಇವರಲ್ಲದೇ ಬೇರೆ ಕಲಾವಿದರುಗಳು ಕೂಡಾ ಬರಲಿದ್ದು ಒಟ್ಟಿನಲ್ಲಿ ವೀಕ್ಷಕರಿಗೆ ಮನರಂಜನೆಯ ಮಹಾಪೂರವೇ ಸಿಗಲಿದೆ.