- June 16, 2022
ನಾಯಕನಾಗಿ ಭಡ್ತಿ ಪಡೆದ ಚಿಕ್ಕಣ್ಣ


ಕನ್ನಡ ಚಿತ್ರರಂಗದಲ್ಲಿ ಹಲವಾರು ಹಾಸ್ಯ ಕಲಾವಿದರು ಜನರನ್ನ ನಕ್ಕು ನಗಿಸಿದ್ದಾರೆ. ಬರುವಂತಹ ಭಾಗಶಃ ಎಲ್ಲ ಸಿನಿಮಾಗಳಲ್ಲೂ ಹಾಸ್ಯನಟನಿಗೊಂದು ಮುಖ್ಯ ಪಾತ್ರ ಇದ್ದೆ ಇರುತ್ತದೆ. ಪ್ರಸ್ತುತ ಹಲವಾರು ಹಾಸ್ಯ ನಟರು ಕನ್ನಡ ಚಿತ್ರಗಳಲ್ಲಿ ಚಾಲ್ತಿಯಲ್ಲಿದ್ದಾರೆ. ಆದರೆ ಈಗಿನ ಸಿನಿಮಾಗಳಿಗೆಲ್ಲದಕ್ಕೂ ಬೇಕಾದ ಬಹುಬೇಡಿಕೆಯ ಹಾಸ್ಯನಟ ಚಿಕ್ಕಣ್ಣ ಅವರು. ಅಪಾರ ಅಭಿಮಾನಿ ಬಳಗವನ್ನೇ ಹೊಂದಿರೋ ಇವರು ಇದೀಗ ನಾಯಕನಟನಾಗಿ ಬಣ್ಣ ಹಚ್ಚಲು ಸಿದ್ದರಾಗಿದ್ದಾರೆ.




ಶರಣ್ ಹಾಗು ಚಿಕ್ಕಣ್ಣ ಜೋಡಿ ಸ್ಯಾಂಡಲ್ವುಡ್ ನಲ್ಲಿ ಬಹುಪ್ರಸಿದ್ಧ. ಈ ಜೋಡಿಯ ಪ್ರಮುಖ ಹಿಟ್ ಚಿತ್ರ ‘ಅಧ್ಯಕ್ಷ’. ಈಗ ಅದೇ ಸಿನಿಮಾದ ಹೆಸರನ್ನೇ ಸ್ವಲ್ಪ ಬಳಸಿಕೊಂಡು ಹೊಸ ಸಿನಿಮಾವೊಂದನ್ನು ಚಿಕ್ಕಣ್ಣ ಮಾಡಹೊರಟಿದ್ದಾರೆ. “ಉಪಾಧ್ಯಕ್ಷ” ಎಂದು ಹೆಸರಿಟ್ಟಿರುವ ಈ ಸಿನಿಮಾವನ್ನು ಅನಿಲ್ ಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಚಿಕ್ಕಣ್ಣ ಇದ್ದಮೇಲೆ ಪಕ್ಕ ನಗೆಹಬ್ಬ ಕಾದಿದೆ ಎಂಬುದು ಎಲ್ಲ ಪ್ರೇಕ್ಷಕರ ಅಭಿಪ್ರಾಯ. ಸಿನಿಮಾ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ ಅಷ್ಟೇ.










ಬಹು ಹಿಂದೆಯೇ ಘೋಷಣೆಯಾಗಿದ್ದ ಈ ‘ಉಪಾಧ್ಯಕ್ಷ’ ಸಿನಿಮಾದ ಮುಹೂರ್ತ ನಾಳೆ(ಜೂನ್ 16) ನೆರವೇರಲಿದೆ. ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿಸಲು ಚಿತ್ರತಂಡ ನಿರ್ಧರಿಸಿದೆ. ‘ಡಿ ಎನ್ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಉಮಾಪತಿ ಶ್ರೀನಿವಾಸ್ ಗೌಡ ಅವರು ನಿರ್ಮಿಸುತ್ತಿರುವ ಈ ಸಿನಿಮಾಗೆ ‘ಸಂಗೀತ ಮಾಂತ್ರಿಕ’ ಅರ್ಜುನ್ ಜನ್ಯ ಅವರು ಸಂಗೀತ ತುಂಬಲಿದ್ದಾರೆ. ಸಿನಿಮಾಗೆ ನಾಯಕಿಯಾಗಿ ಕಿರುತೆರೆಯ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಖ್ಯಾತಿಯ ಮಲೈಕ ವಸೂಪಾಲ್ ಬಣ್ಣ ಹಚ್ಚಲಿದ್ದಾರೆ.




