• October 22, 2021

ರಕ್ಷಿತ್ ಶೆಟ್ಟಿ ಅಭಿನಯದ #777 ಚಾರ್ಲಿ ಸಿನಿಮಾ ಶೂಟಿಂಗ್ ಕಂಪ್ಲೀಟ್

ರಕ್ಷಿತ್ ಶೆಟ್ಟಿ ಅಭಿನಯದ #777 ಚಾರ್ಲಿ ಸಿನಿಮಾ ಶೂಟಿಂಗ್ ಕಂಪ್ಲೀಟ್

ಕೊರೋನಾ ಮಹಾಮಾರಿ ಕಡಿಮೆಯಾದ ಹಿನ್ನೆಲೆ ಒಂದೊಂದೇ ಸಿನಿಮಾ ಶೂಟಿಂಗ್‍ಗಳು ಪ್ರಾರಂಭವಾಗಿದ್ದು, ಇನ್ನು ಕೆಲವು ಶೂಟಿಂಗ್‍ಗಳು ಮುಕ್ತಾಯಗೊಳ್ಳುತ್ತಿವೆ. ಇನ್ನಷ್ಟು ಸ್ಟಾರ್ ನಟರ ಸಿನಿಮಾಗಳು ಒಂದರ ನಂತರ ಒಂದು ಪೈಪೋಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಇದೀಗ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ರಕ್ಷಿತ್ ಶೆಟ್ಟಿ ಅಭಿನಯದ #777 ಚಾರ್ಲಿ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಇದೇ ಖುಷಿಯಲ್ಲಿರುವ ರಕ್ಷಿತ್ ಶೆಟ್ಟಿ ತಮ್ಮೊಟ್ಟಿಗೆ ಕೆಲಸ ಮಾಡಿದ ತಂಡದ ಜೊತೆ ಮಾತನಾಡಿದ್ದಾರೆ. ಈ ಸಿನಿಮಾ ಗೆದ್ದರೆ ನನ್ನ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಏನಾದರೊಂದು ನನ್ನ ಕಡೆಯಿಂದ ಸಿಗುತ್ತದೆ ಎಂಬ ಮಾತನ್ನು ಹೇಳಿದ್ದಾರೆ.

ಇದರ ಜೊತೆಗೆ ಈ ಸಿನಿಮಾವು ಡಿಸೆಂಬರ್ 31ರಂದು ಬಿಡುಗಡೆಗೊಳ್ಳಲಿದೆ. ಖುದ್ದಾಗಿ ರಕ್ಷಿತ್ ಶೆಟ್ಟಿ ಅವರೇ ಅನೌನ್ಸ್ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ 2016ರ ಡಿಸೆಂಬರ್ 30 ರಂದು ತೆರೆ ಕಂಡಿತ್ತು. ಅವನೇ ಶ್ರೀಮನ್ನಾರಾಯಣ ಚಿತ್ರ 2019ರ ಡಿಸೆಂಬರ್ 27ರಂದು ಬಿಡುಗಡೆಯಾಗಿತ್ತು. ಇದೀಗ #777 ಚಾರ್ಲಿ ಡಿಸೆಂಬರ್ ತಿಂಗಳಿನಲ್ಲಿಯೇ ಬಿಡುಗಡೆಯಾಗುತ್ತಿದೆ.

ಈ ಹಿಂದೆ ರಿಕ್ಕಿ ಹಾಗೂ ಕಿರಿಕ್‌ ಪಾರ್ಟಿ ಚಿತ್ರಕ್ಕೆ ರಿಶಬ್ ಶೆಟ್ಟಿ ಜೊತೆ ಸಹ‌ ನಿರ್ದೇಶಕನಾಗಿ ಕೆಲಸ‌‌ ಮಾಡುವುದರ ಜೊತೆಗೆ ಕಥಾಸಂಗಮ ಚಿತ್ರದಲ್ಲಿ ಒಂದು ಕಥೆಯನ್ನು ನಿರ್ದೇಶನ ಮಾಡಿ ಬರವಸೆ ಹುಟಿಸಿದ್ದ ಕಿರಣ್ ರಾಜ್ ಈ ಸಿನಿಮಾದ ಕಥೆ, ಚಿತ್ರಕಥೆ ಜೊತೆಗೆ ಚೊಚ್ಚಲ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ, ಚಿತ್ರದಲ್ಲಿ ಸಂಗೀತಾ ಶೃಂಗೇರಿ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಲ್ಲದೇ ರಾಜ್.ಬಿ ಶೆಟ್ಟಿ, ದಾನಿಶ್ ಸೇಠ್, ಬಾಬಿ ಸಿಂಹ, ಮೊದಲಾದ ತಾರಾಗಣವಿದೆ.