• May 1, 2022

ಭಡ್ತಿ ಪಡೆದ ಚಂದು ಗೌಡ

ಭಡ್ತಿ ಪಡೆದ ಚಂದು ಗೌಡ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ತ್ರಿನಯನಿ ಧಾರಾವಾಹಿಯಲ್ಲಿ ನಾಯಕ ವಿಶಾಲ್ ಆಗಿ ನಟಿಸುತ್ತಿರುವ ಚಂದು ಬಿ ಗೌಡ ಸದ್ಯದಲ್ಲೇ ತಂದೆಯಾಗುತ್ತಿದ್ದಾರೆ. ಚಂದು ಗೌಡ ಹಾಗೂ ಅವರ ಪತಿ ಶಾಲಿನಿ ನಾರಾಯಣ್ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.

ತನ್ನ ಇನ್ಸಾಗ್ರಾಂ ಖಾತೆಯಲ್ಲಿ ಈ ಸಂತಸದ ವಿಷಯವನ್ನು ಹಂಚಿಕೊಂಡಿರುವ ನಟ ತನ್ನ ಪತ್ನಿಯೊಂದಿಗೆ ಇರುವ ಫೋಟೋ ಹಂಚಿಕೊಂಡಿದ್ದಾರೆ.” ಕುಟುಂಬಕ್ಕೆ ಇನ್ನೊಬ್ಬ ಸದಸ್ಯನನ್ನು ಸ್ವಾಗತಿಸಲು ಎಲ್ಲಾ ಸಿದ್ದವಾಗಿದೆ” ಎಂದು ಬರೆದುಕೊಂಡಿದ್ದಾರೆ.

ತನ್ನ ದೀರ್ಘಕಾಲದ ಗೆಳತಿ ಶಾಲಿನಿ ನಾರಾಯಣ್ ಅವರನ್ನು 2020ರಲ್ಲಿ ವರಿಸಿದ್ದರು ಚಂದು ಬಿ ಗೌಡ. ನಾಲ್ಕು ವರ್ಷಗಳ ಡೇಟಿಂಗ್ ನಂತರ ಮನೆಯವರ ಸಮ್ಮತಿಯಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ತಮ್ಮ ಕುಟುಂಬಕ್ಕೆ ಮುದ್ದು ಕಂದ ಬರಲಿರುವ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಚಂದು ಗೌಡ ಶೇರ್ ಮಾಡುತ್ತಿದ್ದಂತೆ ಸ್ನೇಹಿತರು, ಫ್ಯಾನ್ಸ್ ಶುಭಾಶಯಗಳನ್ನು ಕೋರಿದ್ದಾರೆ.