• December 30, 2021

ಲಕ‌-ಲಕ ಲಂಬರ್ಗಿನಿ ಸಾಂಗ್ ರಿಲೀಸ್ / ಫ್ಯಾನ್ಸ್ ರೆಸ್ಪಾನ್ಸ್ ಹೀಗಿದೆ

ಲಕ‌-ಲಕ ಲಂಬರ್ಗಿನಿ ಸಾಂಗ್ ರಿಲೀಸ್ / ಫ್ಯಾನ್ಸ್ ರೆಸ್ಪಾನ್ಸ್ ಹೀಗಿದೆ

ಪ್ರತಿವರ್ಷದಂತೆ ಈ ವರ್ಷವೂ ಕೂಡ ಚಂದನ್ ಶೆಟ್ಟಿ ಹೊಸ ವರ್ಷಕ್ಕೆ ಹೊಸ ಹಾಡನ್ನ ಬಿಡುಗಡೆ ಮಾಡಿದ್ದಾರೆ.. ಈ ವರ್ಷ ತಮ್ಮ ಹಾಡಿನಲ್ಲಿ ಡಿಂಪಲ್ ಕ್ವೀನ್ ನನ್ನ ಕರೆತಂದಿತ್ತು ಈಗಾಗಲೇ ಲಕ‌ ಲಕ ಲಂಬರ್ಗಿನಿ ಸಾಂಗ್ ಯೂಟ್ಯೂಬ್ ನಲ್ಲಿ ಟ್ರೆಂಡ್ ಸೆಟ್ ಮಾಡಿದೆ….

ಲಕ‌ ಲಕ ಲಂಬರ್ಗಿನಿ ಹಾಡನ್ನು ನಿರ್ದೇಶಕ ನಂದಕಿಶೋರ್ ನಿರ್ದೇಶನ ಮಾಡಿದ್ದು, ಮುರುಳಿ ಮಾಸ್ಟರ್ ಕೊರಿಯೋಗ್ರಾಫ್ ಮಾಡಿದ್ದಾರೆ.. ಇನ್ನೂ ಹಾಡಿಗೆ ಮ್ಯೂಸಿಕ್ ಹಾಗೂ ಲಿರಿಕ್ಸ್ ಚಂದನ್ ಶೆಟ್ಟಿ ಅವರೇ ಬರೆದಿದ್ದಾರೆ…ಇದೇ ಮೊದಲ ಬಾರಿಗೆ ಆಲ್ಬಂ ಸಾಂಗ್ ಒಂದರಲ್ಲಿ ರಚಿತರಾಮ್ ಕಾಣಿಸಿಕೊಂಡಿತ್ತು ಕೊಂಚ ಗ್ಲಾಮರಸ್ ಲುಕ್ ನಲ್ಲಿ ಪ್ರೇಕ್ಷಕರೆದುರು ಬಂದಿದ್ದರು ..

ನಿನ್ನೆಯಷ್ಟೇ ಹಾಡು ಬಿಡುಗಡೆಯಾಗಿದ್ದು ಹಾಡಿಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.. ಈಗಾಗಲೇ ಚಾಕ್ಲೆಟ್ ಗರ್ಲ್, ಪಾರ್ಟಿ ಫ್ರೀಕ್, ಥ್ರಿಪೆಗ್ ಸಾಂಗ್ ಗಳಿಂದ ಕಿಚ್ಚು ಹೆಚ್ಚಿಸಿದ ಚಂದನ್ ಶೆಟ್ಟಿ ಅವರ ಲಕಲಕ ಲಂಬರ್ಗಿನಿ ಹಾಡು ಕಿಕ್ ಕೊಡ್ತಿಲ್ಲ ಅನ್ನೋದು ಪ್ರೇಕ್ಷಕರ ಅಭಿಪ್ರಾಯವಾಗಿದೆ… ಅದಷ್ಟೇ ಅಲ್ಲದೆ ಮ್ಯೂಸಿಕ್ ಕೂಡ ನಿರೀಕ್ಷೆಯ ಮಟ್ಟ ತಲುಪಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ ..

ಇನ್ನೂ ಕೆಲವರು ಲಕಲಕ ಲಂಬರ್ಗಿನಿ ಮ್ಯೂಸಿಕ್ ಪೊಗರು ಚಿತ್ರದ ಟೈಟಲ್ ಹಾಡಿನ ರೀತಿಯಲ್ಲಿಯೇ ಇದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.. ಅದರ ಜೊತೆಯಲ್ಲಿ ನಾವು ಹಳೆಯ ಚಂದನ್ ಶೆಟ್ಟಿಯನ್ನ ಮಿಸ್ ಮಾಡಿಕೊಳ್ತಾ ಇದ್ದೇವೆ ಎನ್ನುತ್ತಿದ್ದಾರೆ . ಚಂದನ್ ಶೆಟ್ಟಿಯವರ ಪ್ರತಿ ಹಾಡಿನಲ್ಲೂ ಹಾಡಿನಲ್ಲಿಯೂ ಹೇ ದಿಸ್ ಇಸ್ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಅನ್ನುವ ಟೈಟಲ್ ಕೂಡ ಈ ಹಾಡಿನಲ್ಲಿ ಮಿಸ್ ಆಗಿದೆ ಅನ್ನೋದು ಅಭಿಮಾನಿಗಳ ಅಭಿಪ್ರಾಯ…