• March 30, 2022

ತೇಜಸ್ವಿ‌ನಿ ಪ್ರಕಾಸ್ ರಿಸೆಪ್ಶನ್ ನಲ್ಲಿ ಚಾಲೆಂಜಿಗ್ ಸ್ಟಾರ್…

ತೇಜಸ್ವಿ‌ನಿ ಪ್ರಕಾಸ್ ರಿಸೆಪ್ಶನ್ ನಲ್ಲಿ ಚಾಲೆಂಜಿಗ್ ಸ್ಟಾರ್…

ನಟಿ ತೇಜಸ್ವಿನಿ ಪ್ರಕಾಶ್ ಅವರು ಮೊನ್ನೆಯಷ್ಟೇ ತನ್ನ ಬಾಲ್ಯದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ರಿಸೆಪ್ಷನ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿದ್ದು ಈ ಸಂಭ್ರಮದಲ್ಲಿ ತಾರೆಯರು ಪಾಲ್ಗೊಂಡಿದ್ದು ನವದಂಪತಿಗಳಿಗೆ ಶುಭ ಹಾರೈಸಿದ್ದಾರೆ.

ಈ ಸಂಭ್ರಮದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಭಾಗವಹಿಸಿದ್ದಾರೆ. ನವದಂಪತಿಗಳೊಂದಿಗೆ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ತೇಜಸ್ವಿನಿ ಈ ಫೋಟೋವನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು “ನಿಮಗೆ ಧನ್ಯವಾದ ತಿಳಿಸಲು ಪದಗಳೇ ಇಲ್ಲ. ನಿಮ್ಮ ಆಗಮನವೇ ಆಶೀರ್ವಾದ. ನಾವು ತುಂಬಾ ಖುಷಿಯಾಗಿದ್ದೇವೆ. ಹಾಗೂ ಕೃತಜ್ಞತೆ ಸಲ್ಲಿಸುತ್ತೇವೆ. ಧನ್ಯವಾದ ಅಣ್ಣ”ಎಂದು ಬರೆದುಕೊಂಡಿದ್ದಾರೆ.

ನಿಜಜೀವನದಲ್ಲಿಯೂ ಅಣ್ಣ ತಂಗಿ ಬಾಂಧವ್ಯ ಹೊಂದಿದ್ದಾರೆ ದರ್ಶನ್ ಹಾಗೂ ತೇಜಸ್ವಿನಿ. ದರ್ಶನ್ ನಟನೆಯ ಗಜ ಸಿನಿಮಾದಲ್ಲಿ ದರ್ಶನ್ ತಂಗಿಯಾಗಿ ನಟಿಸಿದ್ದ ತೇಜಸ್ವಿನಿ ಇದೀಗ ರಾಬರ್ಟ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌.