- July 4, 2022
ಹೋದ್ರೆ ಹೋಗ್ಲಿ ಬಿಡಿ ಹಾಡಿನ ಮೂಲಕ ಮತ್ತೆ ಎಂಟ್ರಿ ಕೊಟ್ಟ ಬ್ರೋ ಗೌಡ


ಬಿಗ್ ಬಾಸ್ ಖ್ಯಾತಿಯ ಶಮಂತ್ ಗೌಡ ಈಗಂತೂ ಎಲ್ಲರಿಗೂ ಚಿರಪರಿಚಿತ. ಶಮಂತ್ ಎನ್ನುವುದಕ್ಕಿಂತ ಬ್ರೋ ಗೌಡ ಎಂದೇ ಖ್ಯಾತಿ ಪಡೆದವರು. ತಮ್ಮ ಹಾಡುಗಳಿಂದಲೇ ಎಲ್ಲರ ಮನಗೆದ್ದ ಶಮಂತ್ ಬಿಗ್ ಬಾಸ್ ಸೀಸನ್‌ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇದೀಗ ಹೊಸದಾಗಿ ಮತ್ತೊಂದು ಹಾಡನ್ನು ರಿಲೀಸ್ ಮಾಡಿದ್ದಾರೆ.


ಹೋದ್ರೆ ಹೋಗ್ಲಿ ಬಿಡಿ ಎಂಬ ಹೊಸ ಹಾಡನ್ನು ರಿಲೀಸ್ ಮಾಡಿದ್ದು ಈ ಆಲ್ಬಂ ಸಾಂಗ್ ವೀಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಲ್ಲಿ ಶಮಂತ್ ಅವರು ಪ್ಲೇ ಬಾಯ್ ಥರ ಕಾಣಿಸಿಕೊಂಡಿದ್ದಾರೆ. ಉತ್ತಮ ಹಾಡಿನ ಮೂಲಕ ಕಮ್ ಬ್ಯಾಕ್ ಮಾಡಿರುವ ಶಮಂತ್ ಹಾಡು ಈಗಾಗಲೇ ಲಕ್ಷಾಂತರ ವೀವ್ಸ್ ಪಡೆದಿದೆ.


ಇದಲ್ಲದೆ ಶಮಂತ್ ಹಲವು ಶಾರ್ಟ್ ಮೂವಿಗಳಲ್ಲೂ ನಟಿಸಿದ್ದಾರೆ. ಅಲ್ಲದೇ ನಿರ್ದೇಶನವನ್ನೂ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಬಿಗ್ ಬಾಸ್ ಕಣ್ಣಿಗೆ ಬಿದ್ದ ಶಮಂತ್ ಜೀವನಕ್ಕೆ ಬಿಗ್ ಬಾಸ್ ಉತ್ತಮ ವೇದಿಕೆಯಾಯಿತು ಎಂದರೆ ತಪ್ಪಾಗಲಾರದು. ಬಿಗ್ ಬಾಸ್ ರಿಯಾಲಿಟಿ ಷೋನಲ್ಲಿ ಆಡುವುದರೊಂದಿಗೆ ಹಾಡುಗಳನ್ನು ಬರೆದು ಹಾಡುವುದರಲ್ಲೂ ಶಮಂತ್ ಸೈ ಅನಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಲವರ್ ಬಾಯ್ ಎಂಬ ಖ್ಯಾತಿಯು ಇವರಿಗಿದೆ. ಬರೋಬ್ಬರಿ 113 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಶಮಂತ್, ಮೊದಲ ದಿನದಿಂದಲೂ ತಮ್ಮ ಅದೃಷ್ಟದಿಂದಲೇ ಬಿಗ್ ಬಾಸ್ ನಲ್ಲಿ ಉಳಿದುಕೊಂಡಿದ್ದರು. ಮೊದಲ ಹಾಗೂ ಎರಡನೇ ವಾರ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿಯೂ ಕಾರ್ಯನಿರ್ವಹಿಸಿದ್ದರು.




ಕಿರು ಚಿತ್ರ, ನಿರ್ದೇಶನ ಅಲ್ಲದೆ ಸಿನಿಮಾ ಒಂದರಲ್ಲೂ ಶಮಂತ್ ಅಭಿನಯಿಸಿದ್ದಾರೆ. ನಿರೀಕ್ಷಿತ ರೀತಿಯಲ್ಲಿ ಅದು ಸಾಗದೆ ಇದ್ದಾಗ ವೆಬ್ ಸೀರೀಸ್ ಮಾಡಿದರು. ಇದರ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆದರು. ಹಠಕ್ಕೆ ಬಿದ್ದು ಕೆಲಸ ಮಾಡುವ ಶಮಂತ್. ಇದೀಗ ”ಗಜಾನನ ಆಂಡ್ ಗ್ಯಾಂಗ್” ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಶಮಂತ್‌ಗೆ ನಟಿಸುವ ಅವಕಾಶಗಳು ಹೆಚ್ಚಾಗಿ ಸಿಗಲಾರಂಭಿಸಿದೆ.


ತಮ್ಮ ಬಹುವರ್ಷದ ಕನಸಾಗಿದ್ದ BMW ಕಂಪೆನಿಯ 525D ಕಾರನ್ನು ಖರೀದಿಸಿದರು. ಈ ಕಾರನ್ನು ಕಿಚ್ಚ ಸುದೀಪ್ ಅವರಿಗೆ ತೋರಿಸಿ, ಕಾರಿನ ಮೇಲೆ ಸುದೀಪ್ ಆಟೋಗ್ರಾಫ್ ಪಡೆದುಕೂಂಡಿದ್ದಾರೆ. ಇನ್ನು ಸುದೀಪ್ ಶಮಂತ್ ಕಾರನ್ನು ರೈಡ್ ತೆಗೆದುಕೊಂಡು ಹೋಗಿದ್ದು ಎಲ್ಲೆಡೆ ವೈರಲ್ ಆಗಿತ್ತು.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಶಮಂತ್ ಗೌಡ ಅವರು ಮಳೆಯೇ ಸುರಿಯೇ ಎಂದು ಹಾಡಿ ಜೊತೆಗೆ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈಗ ಮತ್ತೊಂದು ಹಾಡಿನ ಮುಖಾಂತರ ಬಂದಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.




