• December 16, 2021

ಪುಷ್ಪ ಸಿನಿಮಾ‌ ಬಹಿಷ್ಕಾರ ಮಾಡಲು ಕನ್ನಡಿಗರು ನಿರ್ಧಾರ

ಪುಷ್ಪ ಸಿನಿಮಾ‌ ಬಹಿಷ್ಕಾರ ಮಾಡಲು ಕನ್ನಡಿಗರು ನಿರ್ಧಾರ

ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ.. ಪುಷ್ಪ ಸಿನಿಮಾ 5ಭಾಷೆಯಲ್ಲಿ ತೆರೆಗೆ ಬರ್ತಿದ್ದು ಕನ್ನಡದಲ್ಲಿಯೂ ಕೂಡ ಸಿನಿಮಾ ಡಬ್ ಆಗಿ ರಿಲೀಸ್ ಆಗ್ತಿದೆ… ಚಿತ್ರದಲ್ಲಿ ಕನ್ನಡಿಗರಾದ ರಶ್ಮಿಕಾ ಹಾಗೂ ಧನಂಜಯ ಕೂಡ ಮುಖ್ಯ ಭೂಮಿಕೆಯಲ್ಲಿ ಅಭಿನಯ ಮಾಡಿದ್ದಾರೆ.. ಚಿತ್ರತಂಡ ಕನ್ನಡದಲ್ಲಿಯೂ ಸಿನಿಮಾ‌ಹಿಟ್ ಆಗುವ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ …

ಸಿನಿಮಾ ಬಿಡುಗಡೆಗೆ ಇನ್ನೇನು 1ದಿನ ಬಾಕಿ ಇರುವಾಗಲೇ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ ಈಗಾಗಲೇ ಒಂದಲ್ಲ ಒಂದು ಸಮಸ್ಯೆಯಿಂದ ಪುಷ್ಪ ಸಿನಿಮಾಗೆ ತೊಂದರೆ ಉಂಟಾಗಿದ್ದು ಈಗ ಕನ್ನಡಿಗರು ಪುಷ್ಪ ಚಿತ್ರವನ್ನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ ..

ಪುಷ್ಪ ಸಿನಿಮಾನ ರಾಜ್ಯದಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿತ್ತು ಇದರಿಂದ ಬೇರೆಯ ಕನ್ನಡ ಸಿನಿಮಾಗಳಿಗೆ ಸಮಸ್ಯೆಯಾಗುತ್ತಿದೆ… ಪ್ರತಿವಾರದಂತೆ ಶುಕ್ರವಾರ ಕನ್ನಡದ ಸಾಕಷ್ಟು ಚಿತ್ರಗಳ ಚಿತ್ರಗಳು ಬಿಡುಗಡೆಗೆ ಸಿದ್ಧತೆಯಾಗಿದ್ದು… ಪುಷ್ಪ ಸಿನಿಮಾದಿಂದ ಆ ಚಿತ್ರಗಳಿಗೆ ಥಿಯೇಟರ್ ನ ಸಮಸ್ಯೆಗಳು ಎದುರಾಗಿದೆ ….

ಇದೇ ಕಾರಣದಿಂದ ಕನ್ನಡಿಗರು ರಾಜ್ಯದಲ್ಲಿ ಮೊದಲು ಕನ್ನಡ ಸಿನಿಮಾಗಳಿಗೆ ಆದ್ಯತೆ ನೀಡಬೇಕು… ಆನಂತರ ಉಳಿದ ಚಿತ್ರಮಂದಿರಗಳನ್ನ ಬೇರೆ ಭಾಷೆಯ ಚಿತ್ರಗಳಿಗೆ ನೀಡಬೇಕು ಎಂದು ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದಾರೆ ..ಈ ಮೂಲಕ ಪುಷ್ಪ ಸಿನಿಮಾಗೆ ಬಹಿಷ್ಕಾರ ಹಾಕಿ ಕನ್ನಡ ಸಿನಿಮಾಗೆ ಮನ್ನಣೆ ನೀಡಿ ಅಂತಿದ್ದಾರೆ ನೆಟ್ಟಿಗರು..