• April 7, 2022

ಯಶ್ ಜೊತೆಗೆ ನಟಿಸಲು ಸಿಕ್ಕಿರುವುದು ನನ್ನ ಭಾಗ್ಯ ಎಂದ ಬಾಲಿವುಡ್ ಬೆಡಗಿ

ಯಶ್ ಜೊತೆಗೆ ನಟಿಸಲು ಸಿಕ್ಕಿರುವುದು ನನ್ನ ಭಾಗ್ಯ ಎಂದ ಬಾಲಿವುಡ್ ಬೆಡಗಿ

ಬಹು ನಿರೀಕ್ಷಿತ ಕೆಜಿಎಫ್-2 ಚಿತ್ರ ಎಪ್ರಿಲ್ 14ರಂದು ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ಯಶ್, ಸಂಜಯ್ ದತ್ ಹಾಗೂ ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ತಂಡ ದೇಶಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ. ಇದರ ಜೊತೆಗೆ ಶೂಟಿಂಗ್ ಅನುಭವಗಳನ್ನು ಕೂಡಾ ಚಿತ್ರತಂಡ ಹಂಚಿಕೊಳ್ಳುತ್ತಿದೆ. ಕೆಜಿಎಫ್ ನಾಯಕ ನಟ ಯಶ್ ಅವರನ್ನು ನಟ ಸಂಜಯ್ ದತ್ ಟ್ರೇಲರ್ ರಿಲೀಸ್ ಇವೆಂಟ್ ನಲ್ಲಿ ಹೊಗಳಿದ್ದರು.

ಇದೀಗ ನಟಿ ರವೀನಾ ಟಂಡನ್ ಕೂಡಾ ಯಶ್ ಅವರ ವೃತ್ತಿ ಪರತೆಗೆ ಶಹಬ್ಬಾಸ್ ಎಂದಿದ್ದಾರೆ. ಜೊತೆಗೆ ಯಶ್ ಹಾಗೂ ಸಂಜಯ್ ದತ್ ಅವರೊಂದಿಗೆ ನಟಿಸಿದ ಅನುಭವಗಳನ್ನು ತೆರೆದಿಟ್ಟಿದ್ದಾರೆ. “ಸಂಜಯ್ ಜೊತೆ ಕೆಲಸ ಮಾಡುವುದು ಅದ್ಭುತ ಅನುಭವ. ಯಶ್ ಉತ್ತಮ ವ್ಯಕ್ತಿ. ಪ್ರತಿಭಾವಂತ ನಟ ಅವರು. ಅವರೊಂದಿಗೆ ಕೆಲಸ ಮಾಡಿರುವುದು ಅದ್ಭುತ ಅನುಭವ ಆಗಿತ್ತು” ಎಂದಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಹಲವು ಭಾಷೆಗಳಲ್ಲಿ ಕೆಲಸ ಮಾಡಲು ಸಿಗುತ್ತಿರುವ ಅವಕಾಶಗಳ ಬಗ್ಗೆಯೂ ರವೀನಾ ಮಾತನಾಡಿದ್ದಾರೆ.”ಸಿನಿಮಾವನ್ನು ಗಡಿಯಾಚೆಗೂ ಗುರುತಿಸುತ್ತಾರೆ. ಭಾಷೆಗಿಂತ ಚಿತ್ರದ ಕಂಟೆಂಟ್ ಮುಖ್ಯ. ಹೀಗಾಗಿ ಕಲಾವಿದರನ್ನು ಆಯ್ಕೆ ಮಾಡುವಾಗ ಅವರ ಪ್ರತಿಭೆ ಹಾಗೂ ಅನುಭವವನ್ನು ಮಾನದಂಡವಾಗಿ ಇಟ್ಟುಕೊಂಡು ಆಫರ್ ಮಾಡಲಾಗುತ್ತದೆ ” ಎಂದಿದ್ದಾರೆ.