• February 3, 2022

ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದೇನೆ ಎಂದ ಕಾರ್ತಿಕ್ ಆರ್ಯನ್… ಯಾರ ಜೊತೆ ಗೊತ್ತಾ?

ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದೇನೆ ಎಂದ ಕಾರ್ತಿಕ್ ಆರ್ಯನ್… ಯಾರ ಜೊತೆ ಗೊತ್ತಾ?

ಬಾಲಿವುಡ್ ನ ಜನಪ್ರಿಯ ನಟ ಕಾರ್ತಿಕ್ ಆರ್ಯನ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಹೌದು, ಈ ವಿಚಾರವನ್ನು ಸ್ವತಃ ಕಾರ್ತಿಕ್ ಆರ್ಯನ್ ಅವರೇ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಟನೆಯ ಮೂಲಕ ಸಿನಿಪ್ರಿಯರ ಅದರಲ್ಲೂ ಹೆಣ್ ಮಕ್ಕಳ ಮನ ಕದ್ದ ಕಾರ್ತಿಕ್ ಆರ್ಯನ್ ಅಂದ ಚೆಂದಕ್ಕೆ ಫಿದಾ ಆಗದವರಿಲ್ಲ.

ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಕಾರ್ತಿಕ್ ಆರ್ಯನ್ ಇದೀಗ ಪ್ರೀತಿಯ ಕಾರಣದಿಂದಾಗಿ ಸಕತ್ ಸುದ್ದಿ ಮಾಡುತ್ತಿದ್ದಾರೆ. ಅಂದ ಹಾಗೇ ಕಾರ್ತಿಕ್ ಅವರಿಗೆ ಪ್ರೀತಿ ಆಗಿರುವುದು ಮುದ್ದಾದ ನಾಯಿ ಮರಿಯ ಮೇಲೆ! ಆಶ್ಚರ್ಯ ಎಂದೆನಿಸಿದರೂ ನಿಜ.

ನಾಯಿ ಮರಿಯನ್ನು ಎತ್ತಿ ಹಿಡಿದುಕೊಂಡಿರುವ ಕಾರ್ತಿಕ್ ಆರ್ಯನ್ “ನಾನು ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ಮುದ್ದಿನ ನಾಯಿ ಮರಿಗೆ ಕಟೋರಿ ಎಂದು ಹೆಸರನ್ನು ಇರಿಸಿದ್ದಾರೆ. ಕಟೋರಿ ಜೊತೆಗಿನ ಫೋಟೋಕ್ಕೆ ಬಂದ ಲೈಕ್ ಗಳ ಸಂಖ್ಯೆ ಒಂದೆರಡು ಲಕ್ಷವಲ್ಲ, ಬದಲಿಗೆ ಬರೋಬ್ಬರಿ 1.5 ದಶಲಕ್ಷ ಲೈಕ್ ಗಳನ್ನು ಆ ಫೋಟೋ ಪಡೆದಿದೆ.

ಮಾತ್ರವಲ್ಲ ಕಾರ್ತಿಕ್ ಆರ್ಯನ್ ಅವರು ತನ್ನ ನಾಯಿಮರಿಯ ಹೆಸರಿನಲ್ಲಿಯೂ ಪೇಜ್ ಶುರು ಮಾಡಿದ್ದು ಅದರಲ್ಲಿ 12K ಫಾಲೋವರ್ಸ್ ಗಳಿದ್ದಾರೆ.