• April 10, 2022

ಈ ಕಿರುತೆರೆ ನಟನಿಗೆ ಬೈಕ್ ಎಂದರೆ ಪಂಚಪ್ರಾಣ

ಈ ಕಿರುತೆರೆ ನಟನಿಗೆ ಬೈಕ್ ಎಂದರೆ ಪಂಚಪ್ರಾಣ

ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಕ್ರೇಜ್ ಇರುತ್ತದೆ. ಲಾಂಗ್ ಡ್ರೈವ್ ಹೋಗುವುದು, ವಾರಾಂತ್ಯದಲ್ಲಿ ಟ್ರಿಪ್ ಹೋಗುವುದು, ಫ್ರೆಂಡ್ಸ್ ಜೊತೆ ಸಿನಿಮಾ ನೋಡುವುದು, ಸುತ್ತಾಡುವುದು, ಶಾಪಿಂಗ್ ಮಾಡುವುದು ಹೀಗೆ ಒಬ್ಬೊಬ್ಬರಿಗೆ ಒಂದೊಂದು ಕ್ರೇಜ್. ಇನ್ನು ಹುಡುಗರಿಗಂತೂ ಕೇಳುವುದಿಲ್ಲ. ಯಾಕೆಂದರೆ ಕೆಲವರಿಗೆ ವೆಹಿಕಲ್ ಕ್ರೇಜ್ ಇರುತ್ತದೆ. ಈ ನಟನಿಗೂ ಅಷ್ಟೇ. ಒಂದು ಕ್ರೇಜ್ ಇದೆ. ಅದೇನೆಂದರೆ ಬೈಕ್ ಕ್ರೇಜ್.

ನಾವೀಗ ಹೇಳುವ ಕಿರುತೆರೆ ನಟನ ಹೆಸರು ದರ್ಶಕ್ ಗೌಡ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೆಟ್ಟದ ಹೂ ಧಾರಾವಾಹಿಯಲ್ಲಿ ನಾಯಕ ಜರ್ನಲಿಸ್ಟ್ ರಾಹುಲ್ ಆಗಿ ನಟಿಸುತ್ತಿರುವ ದರ್ಶಕ್ ಗೌಡ
ಅವರಿಗೆ ಬೈಕ್ ಗಳು ಎಂದರೆ ತುಂಬಾ ಕ್ರೇಜ್. ಅವರ ಸೋಶಿಯಲ್ ಮೀಡಿಯಾ ಖಾತೆ ನೋಡಿದರೆ ಸಾಕು, ಬೈಕ್ ಮೇಲೆ ಅವರು ಹೊಂದಿರುವ ಕ್ರೇಜ್ ಗೊತ್ತಾಗುತ್ತದೆ.

ಮೊದಲಿನಿಂದಲೂ ಆಟೋಮೊಬೈಲ್ ನಲ್ಲಿ ವಿಶೇಷ ಒಲವು ಹೊಂದಿದ್ದ ದರ್ಶಕ್ ಅವರು ಕೇವಲ ಆರು ವರ್ಷದ ಹುಡುಗ ಇದ್ದಾಗಲೇ ಸುಮಾರು 200 ಕಾರುಗಳ ಹೆಸರನ್ನು ನೆನಪಿಟ್ಟುಕೊಂಡಿದ್ದರು. ಇದರ ಜೊತೆಗೆ “ನನಗೆ ಬೈಕ್ ಬಗೆಗೆ ಕ್ರೇಜ್ ಮೊದಲಿನಿಂದಲೂ ಇದ್ದರೂ ನನಗೆ ಬೈಕ್ ಸಿಕ್ಕಿದ್ದು ಇಂಜಿನಿಯರಿಂಗ್ ಓದುವ ಸಮಯದಲ್ಲಿ. ಬೇಕಾದಲ್ಲಿಗೆ ಕರೆದುಕೊಂಡು ಹೋಗುವ ಬೈಕ್ ಎಂದರೆ ನನಗೆ ತುಂಬಾ ಇಷ್ಟ”

ಇನ್ ಸ್ಟಾಗ್ರಾಂನಲ್ಲಿ ಆ್ಯಕ್ಟೀವ್ ಆಗಿರುವ ದರ್ಶಕ್ ಗೌಡ ವೆರೈಟಿ ವೆರೈಟಿ ಬೈಕ್ ಗಳ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದರ ಜೊತೆಗೆ ದಯಮಾಡಿ ಎಲ್ಲರೂ ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿ ಗಾಡಿಯನ್ನು ಧರಿಸಬೇಕು ಎಂದು ಮನವಿಯನ್ನು ಕೂಡಾ ಮಾಡಿದ್ದಾರೆ.