• February 4, 2022

ರೌಡಿ ಬೇಬಿ” ಚಿತ್ರಕ್ಕೆ ಉಮಾಪತಿ ಕೊಟ್ರು ಸಾಥ್

ರೌಡಿ ಬೇಬಿ” ಚಿತ್ರಕ್ಕೆ ಉಮಾಪತಿ ಕೊಟ್ರು ಸಾಥ್

ದಿವ್ಯಾ ಸುರೇಶ್ ಹಾಗೂ ರಘು ಗೌಡ ಅಭಿನಯದ
ಸುಮುಖ ಎಂಟರ್ ಟೈನರ್ ಅರ್ಪಿಸುವ, ವಾರ್ ಫುಟ್ ಸ್ಟುಡಿಯೋ ನಿರ್ಮಾಣದ “ರೌಡಿ ಬೇಬಿ” ಚಿತ್ರ ಇದೇ ಹನ್ನೊಂದನೇ ತಾರೀಖು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ….ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು‌ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ…

ಚಿತ್ರದಲ್ಲಿ ದಿವ್ಯಾ ಸುರೇಶ್ ರೌಡಿ ಬೇಬಿಯಾಗಿ ಕಾಣಿಸಿಕೊಳ್ತಿದ್ದಾರೆ…ಹಾಸ್ಯ ನಟರಾದ ಅಮಿತ್ ಹಾಗೂ ಕೆಂಪೇಗೌಡ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅರ್ಮಾನ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.ಸಿನಿಮಾವನ್ನ ಕೃಷ್ಣ ನಿರ್ದೇಶನ ಮಾಡಿದ್ದಾರೆ…

ಬಿಗ್ ಬಾಸ್ ನಿಂದ ಬಂದ ನಂತ್ರ ದಿವ್ಯ ಸುರೇಶ್ ಅಭಿನಯದ ಸಿನಿಮಾ ರಿಲೀಸ್ ಆಗ್ತಿದ್ದು ಈಗಾಗಲೇ ಬಿಗ್ ಬಾಸ್ ನಿಂದ ಅಪಾರ ಅಭಿಮಾನಿಗಳನ್ನ ಪಡೆದುಕೊಂಡಿರೋ ದಿವ್ಯಾ ರೌಡಿ ಬೇಬಿಯಾಗಿ ಮತ್ತಷ್ಟು ಅಭಿಮಾನಿಗಳನ್ನ ಸಂಪಾದಿಸಲಿದ್ದಾರೆ…