• February 1, 2022

ಮಾರ್ಚ್ ನಿಂದ ಮೇ ತಿಂಗಳ ವರೆಗೂ ನಡೆಯಲಿದೆ ಬಿಗ್ ಸಿನಿಮಾಗಳ ಜಾತ್ರೆ

ಮಾರ್ಚ್ ನಿಂದ ಮೇ ತಿಂಗಳ ವರೆಗೂ ನಡೆಯಲಿದೆ ಬಿಗ್ ಸಿನಿಮಾಗಳ ಜಾತ್ರೆ

ಕೋವಿಡ್ ಮೂರನೇ ಅಲೆ ಅಬ್ಬರ ಕಡಿಮೆಯಾಗುತ್ತಿದ್ದಂತೆ ಸಿನಿಮಾ ಸ್ಟಾರ್ ಗಳು ಹಾಗೂ ಸಿನಿಮಾರಂಗದ ಚಟುವಟಿಕೆಗಳು ಮತ್ತೆ ಶುರುವಾಗುತ್ತಿದೆ… ಈಗಾಗಲೇ ಮುಂದೂಡಿದ ಸಿನಿಮಾಗಳ ದಿನಾಂಕಗಳನ್ನು ಚಿತ್ರತಂಡಗಳು ಅಫಿಶಿಯಲ್ ಆಗಿ ಅನೌನ್ಸ್ ಮಾಡುತ್ತಿದೆ …ಇದೇ ಮಾರ್ಚ್ ತಿಂಗಳಿಂದ ಮೇ ವರೆಗೂ ಬಿಗ್ ಬಜೆಟ್ ಸಿನಿಮಾಗಳು ಸಾಲು ಸಾಲಾಗಿ ಪ್ರೇಕ್ಷಕರೆದುರು ಬರಲಿದೆ…

ಕರುನಾಡಿನ ರಾಜರತ್ನ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನೆಮಾ ಕೂಡ ಮಾರ್ಚ್ ಹದಿನೇಳು ರಂದು ತೆರೆಗೆ ಬರಲಿದೆ… ಮಾರ್ಚ್ ಹದಿನೆಂಟು ರಂದು ಅಪ್ಪು ಬರ್ತಡೇ ವಿಶೇಷವಾಗಿ ಸಿನಿಮಾ ರಿಲೀಸ್ ಆಗಲಿದ್ದು ಚಿತ್ರಕ್ಕೆ ಚೇತನ್ ಆಕ್ಷನ್ ಕಟ್ ಹೇಳಿದ್ದಾರೆ…

ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ರಾಧೆಶ್ಯಾಮ್ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಚಿತ್ರವಾಗಿದೆ… ಈಗಾಗಲೇ ಟ್ರೇಲರ್ ಬಿಡುಗಡೆ ಆಗಿದ್ದು ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗಬೇಕಿತ್ತು ಆದರೆ ಅನಿವಾರ್ಯ ಕಾರಣಗಳಿಂದ ಸಿನಿಮಾ ಮಾರ್ಚ್ 4ಅಥವಾ 11ರಂದು ತೆರೆಗೆ ಬರಲಿದೆ.

ರಾಜಮೌಳಿ ನಿರ್ದೇಶನದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಆರ್ ಆರ್ ಆರ್ ಚಿತ್ರ ಮಾರ್ಚ್ 25 ರಂದು ತೆರೆಗೆ ಬರಲಿದೆ .ಚಿತ್ರದಲ್ಲಿ ರಾಮ್ ಚರಣ್ ಜ್ಯೂನಿಯರ್ ಎನ್ ಟಿಆರ್, ಆಲಿಯ ಭಟ್, ಅಜಯ್ ದೇವ್ಗನ್ ಹೀಗೆ ದೊಡ್ಡ ತಾರಾಬಳಗವಿದ್ದು ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗಲಿದೆ

ಮಲೆಯಾಳಂ ನಲ್ಲಿ ಭಾರಿ ಸದ್ದು ಮಾಡಿದಂಥ ಅಯ್ಯಪ್ಪ ಕೋಶಿತಂ ಸಿನಿಮಾದ ರಿಮೇಕ್ ಚಿತ್ರವಾದ ಭೀಮ್ಲಾ ನಾಯಕ್ ಸಿನಿಮಾ ಕೂಡ ತೆರೆಗೆ ಬರಲು ಸಿದ್ಧವಾಗಿದೆ… ಚಿತ್ರದಲ್ಲಿ ರಾಣಾ ದಗ್ಗುಬಾಟಿ ಹಾಗೂ ಪವನ್ ಕಲ್ಯಾಣ್ ಅಭಿನಯ ಮಾಡಿದ್ದಾರೆ…ಸಿನಿಮಾ ಮಾರ್ಚ್ ಇಪ್ಪತ್ತೈದರಂದು ಅಥವಾ ಏಪ್ರಿಲ್ 1ರಂದು ತೆರೆಕಾಣಲಿದೆ ..

ಇನ್ನು ಭಾರತೀಯ ಸಿನಿಮಾರಂಗವನ್ನೇ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಮಾಡಿರುವಂತಹ ಕೆಜಿಎಫ್ ಸಿನಿಮಾದ ಚಾಪ್ಟರ್ 2 ಏಪ್ರಿಲ್ ನಲ್ಲಿ ತೆರೆಗೆ ಬರಲಿದೆ ..ಕೆಜಿಎಫ್ ಚಾಪ್ಟರ್ 2ಮೇಲೂ ಸಾಕಷ್ಟು ನಿರೀಕ್ಷೆಗಳಿದ್ದು ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ಕಲಾವಿದರ ಸಮಾಗಮ ಆಗದೆ‌..

ಇನ್ನು ಕಾಲಿವುಡ್ ನಲ್ಲಿ ನಿರೀಕ್ಷೆ ಹುಟ್ಟುಹಾಕಿರುವ ವಿಜಯ್ ಅಭಿನಯದ ಬಿಗ್ ಬಜೆಟ್ ನ ಬೀಸ್ಟ್ ಸಿನಿಮಾ ಕೂಡ ತೆರೆಗೆ ಬರಲು ಸಿದ್ಧವಾಗಿದೆ… ಚಿತ್ರತಂಡ ಇನ್ನೂ ಸಿನೆಮಾದ ಡೇಟ್ ಅನೌನ್ಸ್ ಮಾಡದೇ ಇದ್ದರೂ ಏಪ್ರಿಲ್ ನಲ್ಲಿ ಸಿನಿಮಾ ರಿಲೀಸ್ ಆಗುವ ನಿರೀಕ್ಷೆಗಳಿವೆ

ಬಾಲಿವುಡ್ ಅಂಗಳದಲ್ಲಿಯೂ ಕೂಡ ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿದ್ದು ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಚಿತ್ರ ಏಪ್ರಿಲ್ 1 ರಂದು ರಿಲೀಸ್ ಗೆ ರೆಡಿಯಾಗಿದೆ

ಇವುಗಳ ಜೊತೆಗೆ ಮೆಗಾಸ್ಟಾರ್ ಅಭಿನಯದ ಆಚಾರ್ಯ ಹಾಗೂ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಠ ಸಿನಿಮಾ ಕೂಡ ಏಪ್ರಿಲ್ ತಿಂಗಳಲ್ಲೇ ತೆರೆಗೆ ಬರಲು ಸಿದ್ಧವಾಗಿದೆ ಒಟ್ಟಾರೆ ಮಾರ್ಚ್ ನಿಂದ ಮೇ ವರೆಗೂ ಸಿನಿಮಾ ಪ್ರೇಮಿಗಳನ್ನ ಗಂತೂ ಹಬ್ಬದ ಸಂಭ್ರಮ