• April 9, 2022

ಕಾಮಿಡಿಯನ್ ಮಂಜು ಪಾವಗಡ ಹೊಸ ಪ್ರಯತ್ನ

ಕಾಮಿಡಿಯನ್ ಮಂಜು ಪಾವಗಡ ಹೊಸ ಪ್ರಯತ್ನ

ಬಿಗ್ ಬಾಸ್ ಸೀಸನ್ ಎಂಟರ ವಿಜೇತ ಹಾಗೂ ಕಾಮಿಡಿಯನ್ ಮಂಜು ಪಾವಗಡ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ. ಆದರೆ ಅದರಲ್ಲಿ ಒಂದು ಸಣ್ಣ ಬದಲಾವಣೆಯಿದೆ. ಅದೇನೆಂದರೆ ಮಂಜು ಪಾವಗಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುವುದೇನೂ ನಿಜ, ಆದರೆ ಸ್ಪರ್ಧಿಯಾಗಿ ಅಲ್ಲ, ಬದಲಿಗೆ ನಿರೂಪಕರಾಗಿ.

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಿದ್ದ ಒಂದಷ್ಟು ವಿಶೇಷ ಶೋಗಳನ್ನು ನಡೆಸಿ ಕೊಟ್ಟಿದ್ದ ಮಂಜು ಈಗ ಪೂರ್ಣ ಪ್ರಮಾಣದ ನಿರೂಪಕನಾಗಿ ಬರುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಹೊಸ ಹೊಸ ಶೋ “ಗಿಚ್ಚಿ ಗಿಲಿಗಿಲಿ”ಯ ನಿರೂಪಣೆಯನ್ನು ಮಂಜು ಪಾವಗಡ ಮಾಡಲಿದ್ದಾರೆ.

ಮಂಜು ಪಾವಗಡ ಅವರ ಜೊತೆಗೆ ಕ್ರೀಡಾ ನಿರೂಪಕಿ ರೀನಾ ಡಿಸೋಜ ಕೂಡಾ ಈ ಶೋನ ನಿರೂಪಣೆ ಮಾಡಲಿದ್ದಾರೆ. ಕಾಮಿಡಿ ಆಧಾರಿತ ಶೋ ಆಗಿರುವ ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ಸೃಜನ್ ಲೋಕೇಶ್ ಹಾಗೂ ನಟಿ ಶ್ರುತಿ ಕೃಷ್ಣ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ರಿಯಾಲಿಟಿ ಶೋ ನಲ್ಲಿ ನಿವೇದಿತಾ ಗೌಡ , ಶ್ರೀಕಾಂತ್ ,ವಂಶಿಕಾ ಅಂಜನಿ ಕಶ್ಯಪ್ ಸೇರಿದಂತೆ ಹಲವು ಕಿರುತೆರೆ ಕಲಾವಿದರುಗಳು ಭಾಗವಹಿಸಲಿದ್ದಾರೆ.

ಇನ್ನು ಗಿಚ್ಚಿ ಗಿಲಿಗಿಲಿ ಶೋ ಮೂಲಕ ಮಂಜು ಪಾವಗಡ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರೂಪಕನಾಗಿ ಬರುತ್ತಿದ್ದಾರೆ. ಈ ಮೊದಲು ಯುಗಾದಿ, ದೀಪಾವಳಿ ಹಾಗೂ ಗಣೇಶ ಚತುರ್ಥಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು.

.