• December 27, 2021

ಕಿರುತೆರೆಯಲ್ಲಿ ಅರಳಲು ಸಜ್ಜಾಗಿದೆ ಬೆಟ್ಟದ ಹೂ…

ಕಿರುತೆರೆಯಲ್ಲಿ ಅರಳಲು ಸಜ್ಜಾಗಿದೆ ಬೆಟ್ಟದ ಹೂ…

ಕನ್ನಡ ಸಿನಿ ಜಗತ್ತು ಕಂಡ ಅದ್ಭುತ ಸಿನಿಮಾ ಬೆಟ್ಟದ ಹೂ. ಬೆಟ್ಟದ ಹೂ ಸಿನಿಮಾ ಎಂದಾಕ್ಷಣ ನೆನಪಾಗೋದು ನಮ್ಮ ಪ್ರೀತಿಯ ಅಪ್ಪು. ಅಪ್ಪು ಈ ಸಿನಿಮಾದ ಅಭಿನಯಕ್ಕೆ ಪುನೀತ್ ರಾಜ್ ಕುಮಾರ್ ಅವರಿಗೆ ನ್ಯಾಷನಲ್ ಅವಾರ್ಡ್ ದೊರಕಿತು.

ಇದೀಗ ಇಷ್ಟು ಪವರ್ ಫುಲ್ ಟೈಟಲ್ ನೊಂದಿಗೆ ಕನ್ನಡದಲ್ಲಿ ಸೀರಿಯಲ್ ಒಂದು ಬಂದಿದೆ. ಕನ್ನಡದಲ್ಲಿ ಸಂಚಲನ ಮೂಡಿಸಿದ್ದ ಅಗ್ನಿಸಾಕ್ಷಿ ಸೀರಿಯಲ್ ನಿರ್ಮಾಣ ಮಾಡಿದ್ದ ಆರ್ಕಾ ಮೀಡಿಯಾ ಸಂಸ್ಥೆ ಅಡಿಯಲ್ಲಿ ಈ ಹೊಸ ಸೀರಿಯಲ್ ಬೆಟ್ಟದ ಹೂ ಮೂಡಿಬರುತ್ತಿದೆ.

“ಇಷ್ಟಿ ಕುಟುಮ್ “ಬೆಂಗಾಲಿಯ ಸ್ಟಾರ್ ಜಲ್ಸಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೀರಿಯಲ್ ರೀಮೇಕ್ ಬೆಟ್ಟದ ಹೂ ಸೀರಿಯಲ್. ಒಂದು ಹಳ್ಳಿ ಮುಗ್ದ ಹುಡುಗಿಯ ಮದುವೆ ಒಬ್ಬ ಸಿಟಿ ಹುಡುಗನ ಜೊತೆ ಆಗುತ್ತದೆ. ಆ

ದರೆ ಆ ಸಿಟಿ ಹುಡುಗ ಬೇರೊಬ್ಬ ಹುಡುಗಿಯನ್ನು ಪ್ರೀತಿಸುತ್ತಿರುತ್ತಾನೆ. ಹೇಗೆ ಈ ಮುಗ್ದ ಹುಡುಗಿ ತನ್ನ ಪತಿಯ ಪ್ರೀತಿಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾಳೆ ಎಂಬ ಒನ್ ಲೈನರ್ ಕಥೆಯೊಂದಿಗೆ ಬೆಟ್ಟದ ಹೂ ಸೀರಿಯಲ್ ಕನ್ನಡಿಗರ ಮುಂದೆ ಬರಲಿದೆ.