- May 10, 2022
ಪರಭಾಷೆಯ ಸಿನಿರಂಗದಲ್ಲಿ ಬ್ಯುಸಿಯಾಗಿರುವ ಚಂದನವನದ ಚೆಲುವೆಯರು


ಮನೋಜ್ಞ ನಟನೆಯ ಮೂಲಕ ಚಂದನವನದಲ್ಲಿ ಮೋಡಿ ಮಾಡಿದ ಚೆಲುವೆಯರು ಇಂದು ಕೇವಲ ಕನ್ನಡ ಮಾತ್ರವಲ್ಲದೇ ಪರಭಾಷೆಗಳಿಂದ ಆಫರ್ಸ್ ಪಡೆದುಕೊಳ್ಳುತ್ತಿದ್ದಾರೆ. ಭಾಷೆಯ ಗಡಿ ಮೀರಿ ಬೇರೆ ಬೇರೆ ಭಾಷೆಗಳಲ್ಲಿ ಉತ್ತಮ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಪರಭಾಷೆಯ ಸಿನಿರಂಗದಲ್ಲಿ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತು ಮಾಡುತ್ತಿದ್ದಾರೆ.


ಆಶಿಕಾ ರಂಗನಾಥ್ – ಪರಭಾಷೆಗಳಿಂದ ಆಫರ್ಸ್ ಪಡೆಯುತ್ತಿರುವ ಕನ್ನಡ ನಟಿಯರಲ್ಲಿ ಆಶಿಕಾ ಒಬ್ಬರು. ನಟ ಅಥರ್ವ ಅವರಿಗೆ ನಾಯಕಿಯಾಗಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಆಶಿಕಾ ಈ ಚಿತ್ರದಲ್ಲಿ ಕಬಡ್ಡಿ ಆಟಗಾರ್ತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. “ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ನನ್ನ ವರ್ಕೌಟ್ ವಿಡಿಯೋ ನೋಡಿ ಈ ಪಾತ್ರಕ್ಕೆ ಆಯ್ಕೆ ಮಾಡಿದರು” ಎಂದಿದ್ದಾರೆ.


ಹರ್ಷಿಕಾ ಪೂಣಚ್ಚ – ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಹರ್ಷಿಕಾ ಈಗ ಭೋಜ್ ಪುರಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಎರಡು ಚಿತ್ರಗಳಲ್ಲಿ ನಟಿಸಿರುವ ಹರ್ಷಿಕಾ ಸನಮ್ ಮೇರೆ ಹಮ್ ರಾಝ್ ಎಂಬ ಮೂರನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. “ಕನ್ನಡ ಚಿತ್ರರಂಗ ನನ್ನನ್ನು ಬ್ರ್ಯಾಂಡ್ ಮಾಡಿತು. ಭೋಜ್ ಪುರಿ ಚಿತ್ರರಂಗ ನನ್ನನ್ನು ಸ್ಟಾರ್ ಮಾಡಿತು” ಎಂದಿದ್ದಾರೆ ಹರ್ಷಿಕಾ.






ಮೇಘಶ್ರೀ – ಭೋಜ್ ಪುರಿ ಚಿತ್ರರಂಗದಿಂದ ಹಲವು ಆಫರ್ಸ್ ಪಡೆದುಕೊಳ್ಳುತ್ತಿರುವ ನಟಿಯರಲ್ಲಿ ಮೇಘಶ್ರೀ ಕೂಡಾ ಒಬ್ಬರು. “ಭೋಜ್ ಪುರಿ ನಟರು ತುಂಬಾ ಅಭಿವ್ಯಕ್ತರಾಗಿರುತ್ತಾರೆ. ಭಾವನಾತ್ಮಕವಾದ ಚಿತ್ರಗಳಲ್ಲಿ ಪರಿಣಿತಿ ಪಡೆದಿರುತ್ತಾರೆ” ಎಂದಿದ್ದಾರೆ.


ಸಂಜನಾ ಆನಂದ್ – ನೇನು ಮೀಕು ಬಾಗ ಕವಲ್ಸಿನದಿನಿ ಎಂಬ ರೊಮ್ಯಾಂಟಿಕ್ ಸಿನಿಮಾದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿರುವ ಸಂಜನಾ “ನನ್ನ ನಟನಾ ಕೌಶಲ್ಯವನ್ನು ಅಭಿವೃದ್ಧಿ ಪಡಿಸಲು ಸಹಾಯ ಮಾಡುವ ಯಾವುದೇ ಅವಕಾಶವನ್ನು ಅನ್ವೇಷಿಸಲು ನಾನು ಉತ್ಸುಕನಾಗಿದ್ದೇನೆ.” ಎಂದಿದ್ದಾರೆ.






ಶ್ರೀಲೀಲಾ – ಪೆಲ್ಲಿ ಸಂದಡಿ ಸಿನಿಮಾ ಮೂಲಕ ತೆಲುಗಿನಲ್ಲಿ ಡೆಬ್ಯುಟ್ ಮಾಡಿರುವ ನಟಿ ಶ್ರೀಲೀಲಾ ಈಗ ಕನ್ನಡ ತೆಲುಗು ಬಿಲ್ವಿಂಗಲ್ ಚಿತ್ರದಲ್ಲಿ ನಿತಿನ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.” ಸಾಮಾನ್ಯವಾಗಿ ಪ್ರಾದೇಶಿಕ ಭಾಷೆಯಲ್ಲಿ ಬೇರೆ ಭಾಷೆಯ ನಟಿಯರನ್ನು ಸ್ವೀಕರಿಸಲು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಜನ ನನ್ನನ್ನು ಬೇಗ ಒಪ್ಪಿಕೊಂಡರು ಎನ್ನುವುದನ್ನು ನೋಡಲು ಖುಷಿಯಾಗುತ್ತಿದೆ” ಎನ್ನುತ್ತಾರೆ.






ಸೋನಲ್ ಮೊಂತೇರೋ – ತುಳು ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಸೋನಲ್ ಸರೋಜಿನಿ ನಾಯ್ಡು ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ.”ನಾನು ಸರೋಜಿನಿ ಅವರ ಯುವತಿಯ ಪಾತ್ರದಲ್ಲಿ ನಟಿಸುತ್ತಿದ್ದೇನೆ.ನಾನು ಈ ಚಿತ್ರ ನೀಡುವ ಹೊಸ ಅನುಭವವನ್ನು ನೋಡುತ್ತಿದ್ದೇನೆ” ಎಂದಿದ್ದಾರೆ.






ಖುಷಿ ರವಿ – ರುದ್ರ ಸಿನಿಮಾದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿರುವ ಖುಷಿ ದಿಯಾ ಸಿನಿಮಾದಲ್ಲಿ ದಿಯಾ ಆಗಿ ಮಿಂಚಿದ್ದರು.” ನಾನು ಉತ್ಸುಕಳಾಗಿದ್ದೇನೆ. ಈ ಪಾತ್ರ ಕಾತುರತೆ ಯಿಂದ ಕೂಡಿದೆ.ನಾನು ಹೊಸ ಭಾಷೆಯಲ್ಲಿ ಪಾತ್ರ ಮಾಡುತ್ತಿದ್ದೇನೆ” ಎಂದಿದ್ದಾರೆ ಖುಷಿ.






ರುಕ್ಮಿಣಿ ವಸಂತ್ – ನಟಿ ರುಕ್ಮಿಣಿ ಅವರ ಸಿನಿಮಾ ರಿಲೀಸ್ ಆಗಬೇಕಿದೆ. ತೆಲುಗಿನಲ್ಲಿಯೂ ನಟಿಸುತ್ತಿರುವ ರುಕ್ಮಿಣಿ ಅವರ ತೆಲುಗು ಚಿತ್ರದ ಶೂಟಿಂಗ್ ಕಳೆದ ಡಿಸೆಂಬರ್ ನಲ್ಲಿ ಮುಗಿದಿದೆ.”ಇದು ಹೊಸ ಪಯಣ. ಈ ಕಾತುರದ ಪಯಣಕ್ಕೆ ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ




ಇವರಲ್ಲದೇ ರಶ್ಮಿಕಾ ಮಂದಣ್ಣ , ಶ್ರದ್ದಾ ಶ್ರೀನಾಥ್ ,ರಚಿತಾ ರಾಮ್ , ನಂದಿತಾ ಶ್ವೇತಾ , ರಾಗಿಣಿ ದ್ವಿವೇದಿ , ಶ್ರುತಿ ಹರಿಹರನ್ ,ನಭಾ ನಟೇಶ್ , ನಂದಿತಾ ಶ್ವೇತಾ ಮುಂತಾದವರು ಮಿಂಚುತ್ತಿದ್ದಾರೆ.


