• December 22, 2021

ದಾಖಲೆಗಳ‌ ಮೇಲೆ ದಾಖಲೆ ಬರೆದ ನಟಿ ಭಾರತಿ ಕುರಿತ ಸಾಕ್ಷ್ಯ ಚಿತ್ರ

ದಾಖಲೆಗಳ‌ ಮೇಲೆ ದಾಖಲೆ ಬರೆದ ನಟಿ ಭಾರತಿ ಕುರಿತ ಸಾಕ್ಷ್ಯ ಚಿತ್ರ

ನಟ ಅನಿರುದ್ಧ್ ಪರಿಕಲ್ಪನೆಯ, ಸಂಶೋಧನೆ‌ ಮಾಡಿರೋ , ನಿರೂಪಣೆ ಹಾಗೂ ನಿರ್ದೇಶನದ ಭಾರತದ ಮೇರು ನಟಿಯ ಕುರಿತಾದ ಅತ್ಯಂತ ದೀರ್ಘ ಕಾಲಾವಧಿಯ ಸಾಕ್ಷ್ಯಚಿತ್ರ ‘ಬಾಳೇ ಬಂಗಾರ’ ದಾಖಲೆಗಳ‌ ಮೇಲೆ ದಾಖಲೆ ಬರೆಯುತ್ತಿದೆ….

‘ಬಾಳೇ ಬಂಗಾರ’ದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆದಿದ್ದಾರೆ ನಟ ಅನಿರುದ್ಧ್ ..

ಬದುಕಿರುವ ಮೇರು ನಟಿಯೊಬ್ಬರ ಕುರಿತಾದ ಅತ್ಯಂತ ದೀರ್ಘ ಕಾಲಾವಧಿಯ ಸಾಕ್ಷ್ಯಚಿತ್ರ ಇದಾಗಿದ್ದು…
ಕೀರ್ತಿ ಇನ್ನೋವೇಷನ್ಸ್ ನಿರ್ಮಾಣದ ಕನ್ನಡ ಭಾಷೆಯ ಸಾಕ್ಷ್ಯಚಿತ್ರ ಇದಾಗಿದೆ…ಬಾಳೇ ಬಂಗಾರ ಶಾರ್ಟ್ ಮೂವಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ‘ಡಾ. ಭಾರತಿ ವಿಷ್ಣುವರ್ಧನ್’ರವರ ಜೀವನವನ್ನು ಕಟ್ಟಿಕೊಡುತ್ತದೆ…

ಸದ್ಯ ದಾಖಲೆಗಳನ್ನ ನಿರ್ಮಿಸಿರೋ ಸಾಕ್ಷ್ಯ ಚಿತ್ರವನ್ನ ಆದಷ್ಟು ಬೇಗ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ ಅನಿರುದ್ಧ್ …