• May 20, 2022

ಜೀವವನ್ನು ಪ್ರೀತಿಸಿ ಎಂದ ಅಶ್ವಿತಿ ಶೆಟ್ಟಿ… ಯಾಕೆ ಗೊತ್ತಾ?

ಜೀವವನ್ನು ಪ್ರೀತಿಸಿ ಎಂದ ಅಶ್ವಿತಿ ಶೆಟ್ಟಿ… ಯಾಕೆ ಗೊತ್ತಾ?

ಕನ್ನಡ ಕಿರುತೆರೆಯಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಚೇತನಾ ರಾಜ್ ಮೃತಪಟ್ಟಿರುವ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಫ್ಯಾಟ್ ರಿಡಕ್ಷನ್ ಸರ್ಜರಿ ಮಾಡಿಸಿಕೊಂಡಿದ್ದ ಚೇತನಾ ರಾಜ್ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡದ್ದರಿಂದಾಗು ಅಸುನೀಗಿದ್ದಾರೆ. ಬಣ್ಣದ ಜಗತ್ತನಲ್ಲಿ ಮತ್ತಷ್ಟು ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುವ ಸಲುವಾಗಿ ತೂಕ ಇಳಿಸಿಕೊಳ್ಳುವ ಸರ್ಜರಿ ಮಾಡಿಸಿಕೊಂಡಯ ಜೀವ ಕಳೆದುಕೊಂಡ ಚೇತನಾ ರಾಜ್ ಗಾಗಿ ಕಿರುತೆರೆ, ಹಿರಿತೆರೆ ಕಲಾವಿದರುಗಳು ಕಂಬನಿ ಸುರಿಸಿದ್ದಾರೆ.

ನಟಿ ಅಶ್ವಿತಿ ಶೆಟ್ಟಿ ಅವರು ಚೇತನಾ ಸಾವಿಗೆ ಮರುಗಿದ್ದು ಇದರ ಜೊತೆಗೆ ಬಾಡಿ ಶೇಮಿಂಗ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಗುಡುಗಿದ್ದಾರೆ. ” ಕಿರುತೆರೆ ನಟಿ ಚೇತನಾ ರಾಜ್ ಅವರ ಸಾವು ದಿಗ್ಭ್ರಮೆ ಮೂಡಿಸಿದೆ. 21 ವರ್ಷದ ಹುಡುಗಿಯ ಸಾವಿನ ಸುದ್ದಿ ಕೇಳಿ ನನಗೆ ಆಘಾತವಾಗಿದೆ. ಸಣ್ಣ ಪ್ರಾಯದಲ್ಲಿಯೇ ಇಹಲೋಕ ಸೇರಿದ ಆಕೆಗ ಆತ್ಮಕ್ಕೆ ಶಾಂತಿ ದೊರಕಲಿ. ಇನ್ನು ಬಾಡಿ ಶಾಮಿಂಗ್ ನ ಬಗ್ಗೆ ನಮ್ಮ ಸಮಾಜ ಯಾವಾಗ ಮಾತಾನಾಡುವುದನ್ನು ನಿಲ್ಲಿಸುವುದೋ” ಎಂದು ಅಶ್ವಿತಿ ಬೇಸರ ವ್ಯಕ್ತಪಡಿಸಿದ್ದಾರೆ.

“ದಪ್ಪಗಿರುವವರ ಹಾಗೂ ತೆಳ್ಳಗಿರುವವರ ಬಗ್ಗೆ ಕಾಮೆಂಟ್ ಮಾಡುವುದನ್ನು ನಿಲ್ಲಿಸಿ. ಬಾಡಿ ಶೇಮಿಂಗ್ ಮಾಡುವುದನ್ನು ದಯಮಾಡಿ ಬಿಟ್ಟುಬಿಡಿ. ನಾನು ಕೂಡ ಬಾಡಿಶೇಮಿಂಗ್ ಗೆ ಒಳಗಾಗಿದ್ದೇನೆ. ಈಗಲೂ ಕೂಡ ಅದನ್ನು ಅನುಭವಿಸುತ್ತಿದ್ದೇನೆ. ಆದರೆ ನಾನು ನನ್ನ ದೇಹವನ್ನು ತುಂಬಾನೇ ಪ್ರೀತಿಸುತ್ತಿರುವ ಕಾರಣ ಬಾಡಿ ಶೇಮಿಂಗ್ ಗೆ ಕ್ಯಾರೆ ಮಾಡುವುದಿಲ್ಲ. ನೀವು ಕೂಡಾ ಅಷ್ಟೇ.. ನಿಮ್ಮ ಜೀವನ ಅಮೂಲ್ಯವಾದುದು.‌. ಅದನ್ನು ಪ್ರೀತಿಸಿ” ಎಂದು ಹೇಳಿಕೊಂಡಿದ್ದಾರೆ.